2025 ರ IMDb ಟಾಪ್ 10 Most popular Indian Stars 2025 ಪಟ್ಟಿಯನ್ನು ಬಿಡುಗಡೆ ಮಾಡಿದ್ದು. ಇವರಲ್ಲಿ ಸಿನಿಮಾಗೆ ಈಗಷ್ಟೇ ಕಾಲಿಟ್ಟ ನಟರಿಂದ ಹಿಡಿದು, ಸೂಪರ್ ಸ್ಟಾರ್ ಗಳೂ ಇದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಮೂವರು ನಟರೂ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
IMDb ಈ ವರ್ಷದ ಅತ್ಯಂತ ಜನಪ್ರಿಯ ನಟ -ನಟಿಯರ ಲಿಸ್ಟ್ ಬಿಡುಗಡೆ ಮಾಡಿದೆ. ಈ ಲಿಸ್ಟ್ ನಲ್ಲಿ ಟಾಪ್ 10 ಸ್ಥಾನದಲ್ಲಿ ಈಗಷ್ಟೇ ಸಿನಿಮಾ ರಂಗಕ್ಕೆ ಕಾಲಿಟ್ಟ ನಟರಿಂದ ಹಿಡಿದು, ಸೂಪರ್ ಸ್ಟಾರ್ ಹೆಸರು ಕೂಡ ಇದೆ. ಅಷ್ಟೇ ಅಲ್ಲ ಕನ್ನಡದ ಮೂವರು ನಟರ ಹೆಸರು ಕೂಡ ಇದೆ.
211
1. ಅಹಾನ್ ಪಾಂಡೆ
ಸೈಯಾರ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಆಹಾನ್ ಪಾಂಡೆ ಯುವ ಜನರ ಮನ ಗೆದ್ದಿದ್ದರು. ಸಿನಿಮಾವೂ ಗೆದ್ದಿತ್ತು. ಹಾಗಾಗಿ IMDb ಟಾಪ್ 10 ಜನಪ್ರಿಯ ನಟರ ಲಿಸ್ಟಲ್ಲಿ ಅಹಾನ್ ಪಾಂಡೆ ಹೆಸರು ಮೊದಲನೇ ಸ್ಥಾನದಲ್ಲಿದೆ.
311
2 . ಅನೀತ್ ಪಡ್ಡಾ
IMDb ಈ ವರ್ಷದ ಅತ್ಯಂತ ಜನಪ್ರಿಯ ನಟ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವುದು ಸೈಯಾರ ಸಿನಿಮಾ ನಾಯಕಿ ಅನೀತ್ ಪಡ್ಡಾ. ಇವರು ಮೊದಲ ಸಿನಿಮಾ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ.
ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರು ಪಡೆದಿರುವ ಅಮೀರ್ ಖಾನ್ ಅವರು ಈ ವರ್ಷ ಸಿತಾರೆ ಜಮೀನ್ ಪರ್ ಹಾಗೂ ಕೂಲಿ ಸಿನಿಮಾದಲ್ಲಿ ನಟಿಸಿದ್ದರು. ಐಎಂಡಿಬಿ ಲಿಸ್ಟಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
511
4. ಇಶಾನ್ ಕಟ್ಟರ್
ಇಶಾನ್ ಕಟ್ಟರ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಈ ವರ್ಷ ಅವರು ನಟಿಸಿದಂತಹ ದಿ ರಾಯಲ್ಸ್ & ಹೋಮ್ ಬೌಂಡ್ ಮೂಲಕ ಜನಪ್ರಿಯತೆ ಪಡೆಯುವ ಮೂಲಕ 4ನೇ ಸ್ಥಾನವನ್ನು ಪಡೆದಿದ್ದಾರೆ.
611
5. ಲಕ್ಷ್ಯ
ಆರ್ಯನ್ ಖಾನ್ ನಿರ್ದೇಶನ ಮಾಡಿರುವ ಬಾಸ್ಟರ್ಡ್ ಆಫ್ ಬಾಲಿವುದ್ ಸಿನಿಮಾದಲ್ಲಿ ನಟಿಸಿದ್ದ ಲಕ್ಷ್ಯ ಜನಪ್ರಿಯತೆ ಪಡೆದರು. ಈ ಸೀರಿಸ್ ಮೂಲಕ ಸಾವಿರಾರು ಅಭಿಮಾನಿಗಳನ್ನು ಪದೆದ ಲಕ್ಷ್ಯ IMDb ಈ ವರ್ಷದ ಅತ್ಯಂತ ಜನಪ್ರಿಯ ನಟ ಲಿಸ್ಟಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
711
6. ರಶ್ಮಿಕಾ ಮಂದಣ್ಣ
ಈ ವರ್ಷ ರಶ್ಮಿಕಾ ಮಂದಣ್ಣ ವರ್ಷ ಎಂದೇ ಹೇಳಬಹುದು. ನಟಿಸಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಈ ವರ್ಷ ನಟಿ ಚವ್ವಾ, ಸಿಕಂದರ್, ಕುಬೇರ, ಥಾಮಾ, ದಿ ಗರ್ಲ್ ಫ್ರೆಂಡ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯನೆ ಪಡೆಯುವ ಮೂಲಕ ಆರನೇ ಸ್ಥಾನವನ್ನು ಪಡೆದಿದ್ದಾರೆ.
811
7. ಕಲ್ಯಾಣಿ ಪ್ರಿಯದರ್ಶನ್
ಈ ವರ್ಷ ಮಲಯಾಳಂ ಚಿತ್ರರಂಗದ ನಟಿ ಕಲ್ಯಾಣಿ ಪ್ರಿಯದರ್ಶನ್ ತಮ್ಮ ಲೋಕಾ ಚಾಪ್ಟರ್ 1 ಮತ್ತು ಓಡು ಕುದಿರಾ ಚಾಡು ಕುದಿರಾ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. IMDb ಈ ವರ್ಷದ ಅತ್ಯಂತ ಜನಪ್ರಿಯ ನಟರ ಲಿಸ್ಟಲ್ಲಿ 7ನೇ ಸ್ಥಾನ ಪಡೆದಿದ್ದಾರೆ.
911
8. ತೃಪ್ತಿ ದಿಮ್ರಿ
ಆನಿಮಲ್ ಸಿನಿಮಾ ಬಳಿಕ ಅಷ್ಟೊಂದು ಸುದ್ದಿ ಮಾಡದ ತೃಪ್ತಿ ಈ ವರ್ಷ ದಡಕ್ 2 ಸಿನಿಮಾ ಮೂಲಕ ಮತ್ತೆ ಸದ್ದು ಮಾಡಿದರು. ಇವರು IMDb ಈ ವರ್ಷದ ಅತ್ಯಂತ ಜನಪ್ರಿಯ ನಟ ಲಿಸ್ಟಲ್ಲಿ 8ನೇ ಸ್ಥಾನದಲ್ಲಿದ್ದಾರೆ.
1011
9. ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್ ಈ ವರ್ಷದ ನ್ಯಾಷನಲ್ ಕ್ರಶ್ ಆಗಿದ್ದಾರೆ. ಏಸ್, ಮದರಾಸಿ ಮತ್ತು ಕಾಂತಾರ ಚಾಪ್ಟರ್ 1ರ ಮೂಲಕ ದೇಶದೆಲ್ಲೆಡೆ ಅಭಿಮಾನಿಗಳನ್ನು ಪಡೆದ ರುಕ್ಮಿಣಿ IMDb ಲಿಸ್ಟಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
1111
10. ರಿಷಭ್ ಶೆಟ್ಟಿ
ಹತ್ತನೇ ಸ್ಥಾನದಲ್ಲಿರುವುದು ನಮ್ಮ ಕನ್ನಡದ ಹೆಮ್ಮೆಯ ನಟ- ನಿರ್ದೇಶಕ ರಿಷಭ್ ಶೆಟ್ಟಿ. ಹೌದು ಕಾಂತಾರ ಚಾಪ್ಟರ್ 1 ಚಿತ್ರದ ಮೂಲಕ ದೇಶ ವಿದೇಶದಲ್ಲಿ ಭಾರಿ ಸದ್ದು ಮಾಡಿದ್ದರು ರಿಷಭ್.