ಸಮಂತಾ ಮದುವೆ ಆಗ್ತಿದ್ದಂತೆ ಪೋಟೋ ಹಂಚಿಕೊಂಡ ನಾಗ ಚೈತನ್ಯ, ಫ್ಯಾನ್ಸ್ ಗರಂ

Published : Dec 03, 2025, 12:20 PM IST

ಸಮಂತಾ ರುತು ಪ್ರಭು ಮದುವೆ ಸದ್ಯ ಸುದ್ದಿಯಲ್ಲಿದೆ. ಸಮಂತಾ ಪತಿ ಯಾರು, ಎಷ್ಟು ನೆಟ್ ವರ್ತ್ ಹೊಂದಿದ್ದಾರೆ ಎನ್ನುವ ಬಗ್ಗೆ ಜನರು ಆಸಕ್ತಿ ತೋರ್ತಿದ್ದಾರೆ. ಈ ಮಧ್ಯೆ ನಾಗ ಚೈತನ್ಯ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿದೆ. ನಾಗ ಚೈತನ್ಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

PREV
16
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ

ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ (Samantha) ದಾರಿ ಬೇರೆಯಾಗಿ ಎಷ್ಟೋ ದಿನ ಕಳೆದಿದೆ. ನಾಗ ಚೈತನ್ಯ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಶೋಭಿತಾ ಧುಲಿಪಾಲ ಜೊತೆ ಜೀವನ ನಡೆಸ್ತಿದ್ದಾರೆ. ನಾಗ ಚೈತನ್ಯರಿಂದ ದೂರವಾದ್ಮೇಲೆ ಸಮಂತಾಗೆ ಹೊಸ ಪ್ರೀತಿ ಸಿಕ್ಕಿದೆ. ಎರಡು ದಿನಗಳ ಹಿಂದೆ ಸಮಂತಾ ಕೂಡ ಹೊಸ ಬದುಕಿಗೆ ಎಂಟ್ರಿಯಾಗಿದ್ದಾರೆ. ಸಮಂತಾ ಚಿತ್ರ ನಿರ್ಮಾಪಕ ರಾಜ್ ನಿಧಿಮೋರು ಜೊತೆ ಮದುವೆಯಾಗಿದ್ದಾರೆ. ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್ನಲ್ಲಿ ಅತ್ಯಂತ ಸರಳವಾಗಿ ಮದುವೆ ನಡೆದಿದೆ. ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

26
ಮದುವೆ ದಿನವೇ ನಾಗ ಚೈತನ್ಯ ಪೋಸ್ಟ್

ಸಮಂತಾ ಮದುವೆ ಆಗ್ತಿದ್ದಂತೆ ಎಲ್ಲರ ಕಣ್ಣು ನಾಗ ಚೈತನ್ಯ ಮೇಲೆ ಬಿದ್ದಿದೆ. ನಾಗ ಚೈತನ್ಯ ಸಮಂತಾ ಮದುವೆ ದಿನವೇ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಾಕಿದ್ದು, ಅದೀಗ ತೀವ್ರ ವಿರೋಧ, ಚರ್ಚೆಗೆ ಕಾರಣವಾಗಿದೆ.ಸಮಂತಾ ಮಾಜಿ ಪತಿ ನಾಗ ಚೈತನ್ಯ, ಸಮಂತಾ ಮದುವೆ ದಿನ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ತಮ್ಮ "ಧೂತ" ಸರಣಿಯ ಎರಡು ವರ್ಷಗಳ ವಾರ್ಷಿಕೋತ್ಸವವನ್ನು ಸ್ಮರಿಸಿಕೊಂಡು ಫೋಟೋ ಹಾಕಿದ್ದಾರೆ.

36
ನಾಗ ಚೈತನ್ಯ ಪೋಸ್ಟ್ ನಲ್ಲಿ ಏನಿದೆ?

ಸೃಜನಶೀಲತೆ ಮತ್ತು ಪ್ರಾಮಾಣಿಕತೆಯ ಆಧಾರದ ಮೇಲೆ ನೀವು ನಿರ್ಧಾರ ತೆಗೆದುಕೊಳ್ಳುತ್ತೀರಿ ಮತ್ತು ಅದಕ್ಕೆ ನಿಮ್ಮ ಬೆಸ್ಟ್ ನೀಡ್ತೀರಿ ಎಂದಾಗ ಜನರು ನಿಮ್ಮ ಜೊತೆ ಬೆರೆಯುತ್ತಾರೆ. ಅವರು ಆ ಶಕ್ತಿಯನ್ನು ಸ್ವೀಕರಿಸುತ್ತಾರೆ ಮತ್ತು ನಿಮಗೆ ಮರಳಿ ನೀಡುತ್ತಾರೆ ಎಂಬುದಕ್ಕೆ ಧೂತ ಉತ್ತಮ ಉದಾಹರಣೆ. ಧನ್ಯವಾದಗಳು. ಧೂತಕ್ಕೆ ಎರಡು ವರ್ಷವಾಗಿದೆ. ಇದನ್ನು ಸಾಧ್ಯವಾಗಿಸಿದ ತಂಡಕ್ಕೆ ನನ್ನ ಪ್ರೀತಿ ಅಂತ ಶೀರ್ಷಿಕೆ ಹಾಕಿ, ಧೂತದ ಒಂದು ಫೋಟೋವನ್ನು ನಾಗ ಚೈತನ್ಯ ಪೋಸ್ಟ್ ಮಾಡಿದ್ದಾರೆ. ಧೂತ ಶೋ, ಡಿಸೆಂಬರ್ 1, 2023ರಲ್ಲಿ ಬಿಡುಗಡೆಯಾಗಿತ್ತು.

46
ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್

ನಾಗ ಚೈತನ್ಯ ಫೋಟೋ ನೋಡಿದ ಸಮಂತಾ ಫ್ಯಾನ್ಸ್ ಕೆರಳಿದ್ದಾರೆ. ಈ ಫೋಟೋದಲ್ಲಿ ನಾಗ ಚೈತನ್ಯ ಲುಕ್ ಭಿನ್ನವಾಗಿದೆ. ಸಮಂತಾ ಮದುವೆ ಆಗ್ತಿದ್ದಂತೆ ನಾಗ ಚೈತನ್ಯ ಇಂಥ ಫೋಟೋ ಹಾಕಿದ್ದು ಏಕೆ ಅಂತ ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು, ಸಮಂತಾ ಮದುವೆ ಆಗಿತ್ತು ನಾಗ ಚೈತನ್ಯ ಅವರಿಗೆ ಬೇಸರ ತಂದಿದೆ ಅಂತ ಬರೆದಿದ್ದಾರೆ. ಚಿನ್ನ ಹುಡುಕಲ ಹೋಗಿ ಡೈಮಂಡ್ ಕಳೆದುಕೊಂಡಿದ್ದಾರೆ. ಮುಖದಲ್ಲಿ ಇದು ಎದ್ದು ಕಾಣ್ತಿದೆ, ಸಮಂತಾ ಇಲ್ದೆ ನಿಮ್ಮ ಜೀವನ ಚೆನ್ನಾಗರೋದಿಲ್ಲ ಎಂಬೆಲ್ಲ ಕಮೆಂಟ್ ಬಂದಿದೆ. ಮತ್ತೆ ಕೆಲವರು ನಾಗ ಚೈತನ್ಯ ಪರ ಬ್ಯಾಟ್ ಬೀಸಿದ್ದಾರೆ. ಇಬ್ಬರೂ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದು ಮದುವೆ ಆಗಿದ್ದಾರೆ. ನಾಗ ಚೈತನ್ಯ ಅವರನ್ನೇ ವಿಲನ್ ಮಾಡೋದು ಏಕೆ ಅಂತ ಪ್ರಶ್ನೆ ಮಾಡಿದ್ದಾರೆ.

56
ಮುರಿದು ಬಿದ್ದ ಮದುವೆ

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿದರು. 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ 2021 ರಲ್ಲಿ ಎಲ್ಲವೂ ಬದಲಾಯ್ತು. ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಅಧಿಕೃತಗೊಳಿಸಿದ್ದರು. ಇದು ಅಭಿಮಾನಿಗಳಿಗೆ ಶಾಕ್ ನೀಡಿತ್ತು.

66
ಡಿಸೆಂಬರ್ ನಲ್ಲಿಯೇ ಸಮಂತಾ ಮದುವೆ

ನಾಗ ಚೈತನ್ಯ ಡಿಸೆಂಬರ್ 4, 2024 ರಂದು ಶೋಭಿತಾ ಅವರನ್ನು ಮದುವೆಯಾಗಿದ್ದಾರೆ. ಅವರು ಮದುವೆಯಾಗಿ ನಾಳೆಗೆ ಒಂದು ವರ್ಷವಾಗಲಿದೆ. ನಾಗ ಚೈತನ್ಯ ಮದುವೆಯಾಗಿ ವರ್ಷದ ಮೇಲೆ ಸಮಂತಾ ಮದುವೆಯಾಗಿದ್ದಾರೆ. ಸಮಂತಾ ಮದುವೆಯಾಗಿದ್ದು ಫ್ಯಾನ್ಸ್ ಖುಷಿಗೆ ಕಾರಣವಾಗಿದೆ. ಶುಭಾಶಯಗಳ ಸುರಿಮಳೆಯಾಗ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories