ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಟಿ ಶಾಲಿನಿ ಪಾಂಡೆ ಬೋಲ್ಡ್ ಫೋಟೋಶೂಟ್ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾ ಬಳಿಕ ಸರಣಿ ಸೋಲು ಕಂಡರೂ ಶಾಲಿನಿ ಹವಾ ಮಾತ್ರ ಕಮ್ಮಿಯಾಗಿಲ್ಲ.
ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶಾಲಿನಿ ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಖ್ಯಾತಿಗಳಿಸಿದರು. ವಿಜಯ್ ದೇವರಕೊಂಡ ಜೊತೆ ನಾಯಕಿಯಾಗಿ ನಟಿಸಿದ್ದ ಶಾಲಿನಿ ಸಿನಿಮಾದಲ್ಲೂ ಸಾಕಷ್ಟು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ನಟಿ ಶಾಲಿನಿ ಸಖತ್ ಬೋಲ್ಡ್ ಅವತಾರದಲ್ಲಿ ಮತ್ತೆ ಮಿಂಚುಹರಿಸುತ್ತಿದ್ದಾರೆ. ಸ್ವಿಮ್ ಸೂಟ್ ನಲ್ಲಿ ಪೋಸ್ ನೀಡಿರುವ ಶಾಲಿನಿ ನೀರೊಳಗೆ ಹಾಟ್ ಆಗಿದ್ದಾರೆ. ಶಾಲಿನಿ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ತೆಲುಗು ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಶಾಲಿನಿ ಹಿಂದಿ ಸಿನಿಮಾರಂಗದ ಕಡೆ ಮುಖ ಮಾಡಿದರು. ಆದರೆ ಅರ್ಜುನ್ ನೀಡಿದ ಸಕ್ಸಸ್ ಶಾಲಿನಿಗೆ ಯಾವುದೇ ಸಿನಿಮಾತಂದು ಕೊಟ್ಟಿಲ್ಲ.
ಮೇರಿ ನಿಮ್ಮೊ ಸಿನಿಮಾ ಮೂಲಕ ಶಾಲಿನಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಶಾಲಿನಿ ವಿಶೇಷ ಪಾತ್ರದಲ್ಲಿ ನಟಿಸಿದರು. ಬಳಿಕ ಮತ್ತೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚಿದರು.
ಕೊನೆಯದಾಗಿ ಶಾಲಿನಿ ಹಿಂದಿಯ ಜಯೇಶ್ ಭಾಯ್ ಜೋರ್ದಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ಮಿಂಚಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ.
ಶಾಲಿನಿ ಸದ್ಯ ಮಹಾರಾಜ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೂ ಕೂಡ ಹಿಂದಿ ಸಿನಿಮಾವಾಗಿದೆ. ಈ ಸಿನಿಮಾದ ಬಗ್ಗೆ ಶಾಲಿನಿ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಇನ್ನು ಸಿನಿಮಾ ಜೊತೆಗೆ ಶಾರ್ಟ್ ಸಿನಿಮಾ, ಮ್ಯೂಸಿಕ್ ವಿಡಿಯೋಗಳಲ್ಲಿ ಮಿಂಚುತ್ತಿದ್ದಾರೆ. ಮತ್ತೊಂದು ದೊಡ್ಡ ಹಿಟ್‌ಗಾಗಿ ಕಾಯುತ್ತಿರುವ ಶಾಲಿನಿ ಯಾವ ಸಿನಿಮಾ ಮೂಲಕ ಮೋಡಿ ಮಾಡ್ತಾರೆ ಎಂದು ಕಾದು ನೋಡಬೇಕಿದೆ.