ನಾನು ವೈನ್ ಕುಡಿಯಲು ಬಯಸಿದ್ರೆ ಕುಡಿತೀನಿ, ನನ್ನ ಆಯ್ಕೆ ಸಂಪೂರ್ಣ ನನ್ನದು: ಕರೀನಾ ಕಪೂರ್‌

Published : Mar 11, 2023, 05:33 PM IST

ಕರೀನಾ ಕಪೂರ್‌ (Kareena Kapoor)  ಇಂದಿಗೂ ಬಾಲಿವುಡ್‌ನ ಟಾಪ್‌ ನಾಯಕಿರಲ್ಲಿ ಒಬ್ಬರೂ ಎಂದೇ ಪರಿಗಣಿಸಲಾಗುತ್ತದೆ. ಮದುವೆಯಾಗಿ ಎರಡು ಮಕ್ಕಳ ತಾಯಿಯಾದರೂ ಕರೀನಾ ಕಪೂರ್‌ ತಮ್ಮದೇ ಆದ ಬೇಡಿಕೆ ಮತ್ತು ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ. ಇತ್ತೀಚಿಗೆ ಕರೀನಾ ವಿವಾಹಿತ ನಾಯಕಿಯರಿಗಾಗಿ ಬಾಲಿವುಡ್ ಇಂಡಸ್ಟ್ರಿ ನಿಜವಾಗಿಯೂ ಬದಲಾಗಿದೆಯೇ ಅಥವಾ ಇಲ್ಲವಾ ಎನ್ನುವ ಬಗ್ಗೆ ತಮ್ಮ ಅಭಿಪ್ರಾಯ ಬಹಿರಂಗಪಡಿಸಿದ್ದಾರೆ.

PREV
19
ನಾನು ವೈನ್ ಕುಡಿಯಲು ಬಯಸಿದ್ರೆ ಕುಡಿತೀನಿ, ನನ್ನ ಆಯ್ಕೆ ಸಂಪೂರ್ಣ ನನ್ನದು: ಕರೀನಾ ಕಪೂರ್‌

ಮದುವೆಯನ್ನು ಮಹಿಳಾ ನಟರ ವೃತ್ತಿಜೀವನದ ಅಂತ್ಯವೆಂದು ಪರಿಗಣಿಸಲಾಗಿತ್ತು ಎಂದು ಕರೀನಾ ಕಪೂರ್ ಹೇಳಿದರು, ಇದನ್ನು 'ದೊಡ್ಡ ನಿಷೇಧ' ಎಂದು ಕರೆದರು. ಈಗ ಪರಿಸ್ಥಿತಿ ಬದಲಾಗುತ್ತಿದೆ, ಚಿತ್ರರಂಗದಲ್ಲಿ ದೊಡ್ಡ ಬದಲಾವಣೆಗಳು ಕಾಣುತ್ತಿವೆ ಎಂದು ಕರೀನಾ ಹೇಳಿದ್ದಾರೆ.

  

29

ಇತ್ತೀಚಿನ ಸಂದರ್ಶನವೊಂದರಲ್ಲಿ, ಬಾಲಿವುಡ್‌ನಲ್ಲಿ ವಯಸ್ಸಿನ ಬಗ್ಗೆ ಕೇಳಿದಾಗ, ಕರೀನಾ ಕಪೂರ್, 'ನೀವು ನಿಮ್ಮ ವಯಸ್ಸನ್ನು ಒಪ್ಪಿಕೊಳ್ಳಬೇಕು. ನಿಮ್ಮ ವಯಸ್ಸಿನ ಬಗ್ಗೆ ನೀವು ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.

39

ಈ ಹಿಂದೆ ಮದುವೆಯಾಗುವುದು ನಾಯಕಿಯರಿಗೆ 'ದೊಡ್ಡ ನಿಷೇಧ' ಎಂದು  ಪರಿಗಣಿಸಲಾಗುತ್ತಿತ್ತು. ಈಗ ಎಲ್ಲವೂ ಬದಲಾಗುತ್ತಿದೆ ಎಂದು ಹೇಳಿದ   ಕರೀನಾ ಅವರು ಕೆಲಸವನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ, ಮಕ್ಕಳಿಗೆ ಅಗತ್ಯವಿರುವಾಗ ಪ್ರಾಜೆಕ್ಟ್‌ಗಳಿಗೆ ನೋ ಹೇಳುತ್ತಾರೆ ಎಂದು ನಟಿ ರಿವೀಲ್‌ ಮಾಡಿದ್ದಾರೆ.

 

49

'ನನಗೆ ಹಾಗೆ, ನಿಮ್ಮ ವಯಸ್ಸಿನ ಬಗ್ಗೆ ನೀವು ಹೆಮ್ಮೆಪಡಬೇಕು. ಇಂದು ಮಹಿಳೆಯರು ತಮ್ಮ ವಯಸಸ್ಇನ ಬಗ್ಗೆ ಹುಚ್ಚರಾಗಿಬಿಟ್ಟಿದ್ದಾರೆ' ಎಂದು ವಯಸ್ಸಿನ ಮೇಲೆ ಬಾಲಿವುಡ್ ತನ್ನ ದೃಷ್ಟಿಯನ್ನು ಬದಲಾಯಿಸುತ್ತಿದೆಯೇ ಎಂದು ಕರೀನಾ ಅವರನ್ನು ಕೇಳಿದಾಗ ಹೀಗೆ ಉತ್ತರಿಸಿದ್ದಾರೆ.

59

ಮಹಿಳಾ ನಟರಿಗೆ ಮದುವೆಯಾಗುವುದು ದೊಡ್ಡ ನಿಷೇಧವಾಗಿತ್ತು. ಆದರೆ ಈಗ ನಿಮ್ಮ ವೈವಾಹಿಕ ಸ್ಥಿತಿಯು ನಿಮ್ಮ ವೃತ್ತಿಜೀವನದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಬೇಬೊ ಅಭಿಪ್ರಾಯ ಪಟ್ಟಿದ್ದಾರೆ.

69
Image: Kareena Kapoor/ Instagram

ಚಲನಚಿತ್ರ ತಯಾರಕರು ಈಗ ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ವಿಭಿನ್ನ ಶೆಡ್‌ನ ಜನರಿಗೆ ಅವಕಾಶಗಳನ್ನು ನೀಡುವ ಮೂಲಕ ಆಫ್‌ಬೀಟ್ ಸ್ಕ್ರಿಪ್ಟ್‌ಗಳಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದೂ ಕರೀನಾ ಕಪೂರ್‌ ಖಾನ್‌ ಹೇಳಿದ್ದಾರೆ.
 


 

79
Kareena Kpaoor

'ಕೆಲಸ-ಜೀವನದ ಸಮತೋಲನವನ್ನು ಸಾಧಿಸಲು ಒಂದು ಸೂತ್ರವಿದೆ ಎಂದು ನಾನು ಭಾವಿಸುವುದಿಲ್ಲ, ಅದರಲ್ಲಿ ಯಾವುದೇ ರಹಸ್ಯವಿಲ್ಲ. ನೀವು ಏನು ಮಾಡುತ್ತೀರಿ ಅಥವಾ ಮಾಡಬಾರದು ಎಂಬುದನ್ನು ನಿರ್ಧರಿಸುವುದು ನಿಮಗೆ ಬಿಟ್ಟದ್ದು. ನಾನು ಮಾಡದ ವಿಷಯಗಳಿಗೆ ನಾನು ಇಲ್ಲ ಎಂದು ಹೇಳಲು ಬಯಸುತ್ತೇನೆ' ಎಂದು  ಕೆಲಸ ಮಾಡುವ ತಾಯಂದಿರಿಗೆ 'ಕೆಲಸ-ಜೀವನ ಸಮತೋಲನ' ಕುರಿತು ಕರೀನಾ ಮಾತನಾಡಿದರು.

89

'ನನ್ನ ಮಕ್ಕಳನ್ನು ಒಬ್ಬಂಟಿಯಾಗಿ ಬಿಡಲು ನನಗೆ ಮನಸ್ಸಿಲ್ಲದಿದ್ದರೆ, ಪ್ರಶಸ್ತಿ ಕಾರ್ಯಕ್ರಮಕ್ಕೆ ಹೋಗಲು ನಾನು ಬಯಸುವಿದ್ದಿಲ್ಲ. ಹಾಗಾಗಿ ನನಗಾಗಿ ಆಯ್ಕೆಯನ್ನು ಆರಿಸಿಕೊಳ್ಳಲು ನಾನು ಸಂಪೂರ್ಣವಾಗಿ ಸ್ವತಂತ್ರಳಾಗಿದ್ದೇನೆ' ಎಂದು ಹೇಳಿದ ಕರೀನಾ..

 
 

99

ನಾನು ನನ್ನ ಪತಿಯೊಂದಿಗೆ ಮನೆಯಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಲು ಬಯಸಿದರೆ, ಅಥವಾ ಒಂದು ಲೋಟ ವೈನ್ ಕುಡಿಯಲು ಬಯಸಿದರೆ, ನಾನು ಅದನ್ನು ಮಾಡುತ್ತೇನೆ. ಪ್ರಸ್ತುತ, ಈ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ ಎಂದಿದ್ದಾರೆ ನಟಿ.

Read more Photos on
click me!

Recommended Stories