ರುದ್ರಾ: ದಿ ಎಡ್ಜ್ ಆಫ್ ಡಾರ್ಕ್‌ನೆಸ್ ವೆಬ್ ಸೀರಿಸ್‌ನಲ್ಲಿ ಅಜಯ್ ದೇವಗನ್ ಜೊತೆ ಕಾಣಿಸಿಕೊಳ್ಳುವ ಮೂಲಕ ಕಮ್ ಬ್ಯಾಕ್ ಮಾಡಿದ ನಟಿ ಈಶಾ ಡಿಯೋಲ್.
ಈಶಾ ಮುದ್ದಾದ ಮಕ್ಕಳು ರಾಧ್ಯಾ ಮತ್ತು ಮಿರಯಾ ಸಿನಿಮಾವನ್ನು ಎಂಜಾಯ್ ಮಾಡಬೇಕು. ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕು ಎಂದು ಹೇಳಿಕೊಂಡಿದ್ದಾರೆ.
'ಸಿನಿ ರಸಿಕರಿಗೆ ಸಿನಿಮಾ ಹಾಲ್ ಒಂದು ರೀತಿ ಹೃದಯ ಇದ್ದಂತೆ. ನನ್ನ ಇಬ್ಬರು ಹೆಣ್ಣು ಮಕ್ಕಳು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದೀನಿ'
'ಚಿಕ್ಕ ವಯಸ್ಸಿನಿಂದಾ ನಾನು ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡಿದ್ದೀನಿ. ಪೋಷಕರು ಅಥವಾ ಸ್ನೇಹಿತರ ಜೊತೆ ಸಿನಿಮಾ ನೋಡಿದ್ದೀನಿ'
'1992ರಲ್ಲಿ ಸ್ಟಾಪ್ ಅಥವಾ ಮೈ ಮಾಮ್ ವಿಲ್ ಶೂಟ್ ಸಿನಿಮಾಗಳನ್ನು ಲಂಡನ್ ಥಿಯೇಟರ್‌ಗಳಲ್ಲಿ ನೋಡಿದ್ದೀನಿ. ಎಂದೂ ಮರೆಯಲಾಗದ ದಿನಗಳು'
'2004ರಲ್ಲಿ ನನ್ನ ಧೂಮ್ ಸಿನಿಮಾ ರಿಲೀಸ್ ಆದಾಗ ವೀಕ್ಷಕರ ರಿಯಾಕ್ಷನ್ ನೋಡಲು ನಾನು ಯಾರಿಗೂ ಹೇಳದಂತೆ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದೆ'
ಚಿತ್ರದ ಹಾಡುಗಳು ತೆರೆ ಮೇಲೆ ಬಂದಾಗ ಜನರು ತುಂಬಾನೇ ಎಕ್ಸೈಟ್ ಆದರೂ ಅವರನ್ನು ನೋಡಿ ನಾನು ತುಂಬಾನೇ ಖುಷಿ ಪಟ್ಟೆ' ಎಂದು ಈಶಾ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡೋದು ಎಷ್ಟು ಮಜಾ ಎಂದು ಹೇಳಿಕೊಂಡಿದ್ದಾರೆ.