ರತನ್ ಟಾಟಾ ಜೊತೆ ಡೇಟಿಂಗ್, ರಾಜನ ಜೊತೆ ಲವ್, ಇನ್ನೊಬ್ರ ಜೊತೆ ಮದ್ವೆ; ಇಳಿ ವಯಸ್ಸಲ್ಲಿ ಸಿಂಗಲ್ ಈ ಜನಪ್ರಿಯ ನಟಿ!

First Published | Aug 4, 2024, 4:42 PM IST

ಅನೇಕ ಜನರು ತಮ್ಮ ಜೀವನದಲ್ಲಿ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ, ಆದರೆ ಅವರಲ್ಲಿ ಕೆಲವರು ಮಾತ್ರ ತಮ್ಮ ಪ್ರೀತಿಯನ್ನು ಉಳಿಸಿಕೊಂಡು, ಜೀವನದುದ್ದಕ್ಕೂ ತಮ್ಮ ಸಂಗಾತಿಯೊಂದಿಗೆ ಇರುತ್ತಾರೆ. ಆದರೆ ಕೆಲವರು ಮಾತ್ರ ಸಿಂಗಲ್ ಆಗಿರ್ತಾರೆ. 
 

ಹಲವು ವರ್ಷಗಳಿಂದ ಸಿನಿಮಾದಲ್ಲಿ ಮಿಂಚಿದ ಈ ನಟಿಗೆ ಪ್ರೀತಿಯ ವಿಷಯದಲ್ಲಿ ಅದೃಷ್ಟವೇ ಇರಲಿಲ್ಲ. ಈಕೆ ಆ ಕಾಲದ ಖ್ಯಾತ ನಟಿ ಕೂಡ ಹೌದು. ಆದರೆ ಕರಿಯರ್ ನಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸಿದ್ದ ಈ ನಟಿಯ ವಯಕ್ತಿಕ ಜೀವನ ಮಾತ್ರ ತುಂಬಾನೆ ಕೆಟ್ಟದಾಗಿತ್ತು. ಯಾಕಂದ್ರೆ ಇವರ ವಯಕ್ತಿಕ ಜೀವನ ಹೆಚ್ಚು ಚರ್ಚೆಯಲ್ಲಿತ್ತು. ನವಾಬನ ಜೊತೆ ಲವ್, ಬ್ಯುಸಿನೆಸ್ ಮೆನ್ ಜೊತೆ ಡೇಟಿಂಗ್, ಇನ್ನೊಬ್ರ ಜೊತೆ ಮದ್ವೆಯಾಗಿ ಇದೀಗ ತಮ್ಮ 76 ನೇ ವಯಸ್ಸಿನಲ್ಲಿ ಒಬ್ಬಂಟಿಯಾಗಿರುವ ಆ ನಟಿ ಮತ್ತು ದೂರದರ್ಶನ ಕಾರ್ಯಕ್ರಮ ನಿರೂಪಕಿ ಬೇರೆ ಯಾರೂ ಅಲ್ಲ ಸಿಮಿ ಗರೇವಾಲ್ (Simi Garewal).
 

ಫಿರೋಜ್ ಖಾನ್ ಅವರೊಂದಿಗೆ 'ಟಾರ್ಜಾನ್ ಗೋಸ್ ಟು ಇಂಡಿಯಾ' (Tarzan goies to India) ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಿಮಿ ಗರೆವೆಲ್ ಕೇವಲ 17 ನೇ ವಯಸ್ಸಿನಲ್ಲಿ ತಮ್ಮ ಮೊದಲ ಸೀರಿಯಸ್ ರಿಲೇಶನ್ ಶಿಪ್ ಹೊಂದಿದ್ದರು. ಇಂಗ್ಲೆಂಡಿನಲ್ಲಿ ನೆರೆಮನೆಯವನಾಗಿದ್ದ ಜಾಮ್ ನಗರದ ಮಹಾರಾಜ ಶತ್ರುಸಲ್ಯಸಿನ್ಹಜಿಯನ್ನು ಸಿಮಿ ಪ್ರೀತಿಸುತ್ತಿದ್ದಳು. ಆದಾಗ್ಯೂ, ಮೂರು ವರ್ಷಗಳ ಡೇಟಿಂಗ್ ನಂತರ, ಈ ಜೋಡಿ ಬೇರ್ಪಟ್ಟರು.
 

Tap to resize

ಸಿಮಿ ಗರೇವಾಲ್ ನಂತರ ಭಾರತೀಯ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ (Monsoor Ali Khan Pataudi) ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿದ್ದರು. ಆದರೆ ಮನ್ಸೂರ್ ಆಲಿ ಖಾನ್ ಯಾವಾಗ ಶರ್ಮಿಳಾ ಟ್ಯಾಗೋರ್ ಅವರನ್ನು ಭೇಟಿಯಾದ್ದ್ರೂ, ನಂತ್ರ ಅವರ ಜೊತೆ ಲವ್ ರಿಲೇಶನ್’ಶಿಪ್ ಆರಂಭವಾಯ್ತು, ಇದರಿಂದಾಗಿ ಸಿಮಿ ಗರೇವಾಲ್ ಮತ್ತು ಮನ್ಸೂರ್ ಆಲಿ ಖಾನ್ ಬೇರೆಯಾದರು.  
 

ಅಷ್ಟೇ ಅಲ್ಲ ಸಿಮಿ ಗರೇವಾಲ್ ಖ್ಯಾತ ಬ್ಯುಸಿನೆಸ್ ಮೆನ್ ಆಗಿರುವ ರತನ್ ಟಾಟಾ (Ratan Tata) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಅನ್ನೋದು ಅನೇಕ ಜನರಿಗೆ ತಿಳಿದಿಲ್ಲ. ನಟಿ ಇನ್ನೂ ರತನ್ ಟಾಟಾ ಅವರನ್ನು ಪರ್ಫೆಕ್ಟ್ ಮ್ಯಾನ್ ಎಂದು ಹೇಳುತ್ತಾರೆ. ರತನ್ ಮತ್ತು ನಾನು ಬಹಳ ಹಿಂದೆ ಡೇಟಿಂಗ್ ಮಾಡುತ್ತಿದ್ದೆವು. ಅವರು ಪರ್ಫೆಕ್ಟ್ ಮೆನ್, ಜೊತೆಗೆ ಸೆನ್ಸ್ ಆಫ್ ಹ್ಯೂಮರ್ ತುಂಬಾನೆ ಚೆನ್ನಾಗಿತ್ತು ಎಂದು ನಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. 
 

ಅಷ್ಟೇ ಅಲ್ಲ, ರತನ್ ಟಾಟ ತುಂಬಾನೆ ವಿನಮ್ರ ಮತ್ತು ಸಂಭಾವಿತ ವ್ಯಕ್ತಿ. ಹಣ ಎಂದಿಗೂ ಅವರ ಪ್ರೇರಕ ಶಕ್ತಿಯಾಗಿರಲಿಲ್ಲ. ಅವರು ವಿದೇಶದಲ್ಲಿರುವಷ್ಟು ರಿಲ್ಯಾಕ್ಸ್ ಆಗುತ್ತಿದ್ದಷ್ಟು ಭಾರತದಲ್ಲಿ ವಿಶ್ರಾಂತಿ ಪಡೆದಿಲ್ಲ" ಎಂದು ಸಿನಿಮಿ ಗರೇವಾಲ ಹೇಳಿದ್ದರು.
 

ಇಷ್ಟೆಲ್ಲಾ ಹೈ ಪ್ರೊಫೈಲ್ ವ್ಯಕ್ತಿಗಳ ಜೊತೆಗೆ ರಿಲೇಶನ್’ಶಿಪ್ ನಲ್ಲಿ ಇದ್ದ ನಂತರ, ಸಿಮಿ ಗರೇವಾಲ್, ತಮ್ಮ 27 ನೇ ವಯಸ್ಸಿನಲ್ಲಿ 1970 ರಲ್ಲಿ ದೆಹಲಿಯ ಶ್ರೇಷ್ಠ ಚುನ್ನಮಾಲ್ ಕುಟುಂಬದ ಸದಸ್ಯರಾಗಿದ್ದ ರವಿ ಮೋಹನ್ ಅವರನ್ನು ವಿವಾಹವಾದರು. ಆದರೆ ಈ ಸಂಬಂಧ ಕೂಡ ಹೆಚ್ಚು ಸಮಯ ಉಳಿಯಲಿಲ್ಲ. ಈ ದಂಪತಿಗಳು 1979 ರಲ್ಲಿ ವಿಚ್ಛೇದನ ಪಡೆದರು.
 

ಸಿಮಿ ಗರೇವಾಲ್ ಇನ್ನೂ ಅವರೊಂದಿಗೆ ಆರೋಗ್ಯಕರ ಸಂಬಂಧ ಹೊಂದಿದ್ದಾರೆ.  ಆದರೆ 76ನೇ ವಯಸ್ಸಿನಲ್ಲಿ ಅವಿವಾಹಿತರಾಗಿ ಉಳಿದಿದ್ದಾರೆ. ಸಿಮಿ ಗರೇವಾಲ್ ಮತ್ತು ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಸೋದರ ಸಂಬಂಧಿಗಳ ಮಕ್ಕಳು.  ಸಿಮಿಯ ತಾಯಿ ದರ್ಶಿ ಮತ್ತು ಪಮೇಲಾ ಅವರ ತಂದೆ ಮೊಹಿಂದರ್ ಸಿಂಗ್ ಸಹೋದರ -ಸಹೋದರಿ. ಅವರು ಆದಿತ್ಯ ಚೋಪ್ರಾ ಮತ್ತು ಉದಯ್ ಚೋಪ್ರಾ ಅವರ ಚಿಕ್ಕಮ್ಮ.
 

Latest Videos

click me!