900 ಕೋಟಿ ಕೊಟ್ರೆ ಮಾತ್ರ ಡಿವೋರ್ಸ್ ಕೊಡುವೆ ಎಂದ ನಟಿ; ಜೀವನಾಂಶ ಕೊಡಲು ಒಪ್ತಾರಾ ಗಂಡ?

First Published | Aug 5, 2024, 11:38 AM IST

ಇಂದು ಸ್ಟಾರ್ ಕಲಾವಿದರು ಡಿವೋರ್ಸ್ ಪಡೆದುಕೊಳ್ಳುವುದು ಸಾಮಾನ್ಯ. ಡಿವೋರ್ಸ್ ಪಡೆದ ಬಳಿಕ ಕೆಲ ನಟಿಯರು ಗಂಡನಿಂದ ಭಾರೀ ಮೊತ್ತದ ಪರಿಹಾರ ಕೇಳುತ್ತಾರೆ. 

ಕೆಲ ಶ್ರೀಮಂತರು ವಿಚ್ಛೇದನ ಬಳಿಕ ಕೋಟ್ಯಂತರ ಪರಿಹಾರ ಪಡೆದುಕೊಂಡು ಸುದ್ದಿಯಲ್ಲಿರುತ್ತಾರೆ. ಇಲ್ಲೋರ್ವ ನಟಿ 900 ಕೋಟಿ ರೂಪಾಯಿ ನೀಡಿದ್ರೆ ಮಾತ್ರ ಡಿವೋರ್ಸ್ ಕೊಡುತ್ತೇನೆ ಎಂದಿದ್ದಾರಂತೆ. ಹಾಗಾದ್ರೆ ಯಾರು ಆ ನಟಿ?

ಪ್ರಪಂಚದ ಖ್ಯಾತ ಪಾಪ್ ಗಾಯಕರಲ್ಲಿ ಒಬ್ಬರು, ಹಾಲಿವುಡ್ ತಾರೆ ಜನ್ನಿಫರ್ ಲೊಪೇಜ್. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಜನ್ನಿ ಹಾಡುಗಳಿಗೆ ಜನರು ಹುಚ್ಚೆದ್ದು ಕುಣಿಯುತ್ತಾರೆ. ಜನ್ನಿಫರ್ ಲೊಪೇಜ್ ತಮ್ಮ ಖಾಸಗಿ ಜೀವನದಲ್ಲಿಯ ಏರಿಳಿತಗಳಿಂದಲೂ ಸುದ್ದಿಯಲ್ಲಿರುತ್ತಾರೆ.

Tap to resize

ಜನ್ನಿಫರ್ ಲೊಪೇಜ್ 5ನೇ ಬಾರಿ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಇದರಲ್ಲೊಂದು ವಿಶೇಷತೆ ಇದೆ. ಇದು ದುಬಾರಿಯ ವಿಚ್ಛೇದನಗಳಲ್ಲೊಂದಾಗಿದೆ. ಜನ್ನಿಫರ್ ಲೊಪೇಜ್ ಮತ್ತು ಬೆನ್ ಅಫ್ಲೆಕ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಯೊಂದು ಹಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. 

ಜನ್ನಿಫರ್ ಗಂಡನಿಂದ ಬೇರೆಯಾಗಲು 900 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಬೆನ್ ಅಫ್ಲೆಕ್ ಅವರಿಗೆ ಇದು ಮೂರನೇ ವಿಚ್ಛೇದನವಾಗಲಿದೆ. ಈಗಾಗಲೇ ಇಬ್ಬರು ಪರ ವಕೀಲರು ವಿಚ್ಛೇದನದ ವಿಷಯ ಕುರಿತು ಮಾತನಾಡುತ್ತಿದ್ದಾರಂತೆ.

ಜನ್ನಿಫರ್ ಲೋಪೆಜ್‌ ಅವರ ಆಸ್ತಿ ಮೌಲ್ಯ 500 ಮಿಲಿಯನ್ ಡಾಲರ್ ಅಂದ್ರೆ 4,000 ಕೋಟಿ ರೂಪಾಯಿಗೂ ಅಧಿಕ. ಇನ್ನು ಬೆನ್ ಅಪ್ಲೆಕ್ಸ್ ಅವರ ಆಸ್ತಿ ಸುಮಾರು 1,800 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಗಂಡನಿಗಿಂತ ಹೆಚ್ಚು ಆಸ್ತಿ ಹೊಂದಿದ್ದರೂ ಜೆನ್ನಿಫರ್ 900 ಕೋಟಿ ಜೀವನಾಂಶ ಕೇಳಿದ್ದಾರೆ ಎನ್ನಲಾಗುತ್ತಿದೆ.

ಜನ್ನಿಫರ್ ಲೋಪೆಜ್‌ ಮತ್ತು ಬೆನ್ ಅಪ್ಲೆಕ್ಸ್ ಇಬ್ಬರು ಬೇರೆಯಾಗಲು ನಿರ್ಧರಿಸಿದ್ದು, ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿವೆಯಂತೆ. ಗಂಡನ ಆಸ್ತಿಯಲ್ಲಿ ಬರೋಬ್ಬರಿ ಅರ್ಧದಷ್ಟು ಪಾಲು ಕೇಳುವ ಮೂಲಕ ಜನ್ನಿಫರ್ ಲೋಪೆಜ್‌ ಆಶ್ವರ್ಯ ಮೂಡಿಸಿದ್ದಾರೆ.

ಜೆನ್ನಿಫರ್ ಲೊಪೇಜ್ 1997 ರಲ್ಲಿ ಒಜೈ ನೋವಾ ಹೆಸರಿನ ಕ್ಯೂಬಾದ ವೈಟರ್ ಒಬ್ಬರನ್ನು ವಿವಾಹವಾಗಿದ್ದರು. ಬಳಿಕ ಕ್ರಿಸ್ ಜದ್ ಎಂಬುವರನ್ನು 2001 ರಲ್ಲಿ ವಿವಾಹವಾಗಿ 2002 ರಲ್ಲಿ ವಿಚ್ಛೇದನ ನೀಡಿದರು. ಇದೀಗ ಮತ್ತೊಮ್ಮೆ ಖಾಸಗಿ ಜೀವನದ ವಿಷಯವಾಗಿ ಸುದ್ದಿಯಲ್ಲಿದ್ದಾರೆ.

Latest Videos

click me!