ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತರು? ನಟಿ ನೆಟ್‌ವರ್ತ್‌ ಎಷ್ಟು ಗೊತ್ತಾ?

Published : Sep 09, 2021, 04:48 PM IST

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮತ್ತು ಹಾಲಿವುಡ್‌ನ ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರು ಐಷಾರಾಮಿ ಜೀವನಶೈಲಿಗೆ ಫೇಮಸ್‌ ಆಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತರು? ಅವರ ನೆಟ್‌ವರ್ತ್‌ ಎಷ್ಷು ಗೊತ್ತಾ? ಇಲ್ಲಿದೆ ನೋಡಿ ವಿವರ. ಈ ಮಾಹಿತಿಗಳು ವಿವಿಧ ವೆಬ್‌ಸೈಟ್‌ಗಳ ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ. 

PREV
16
ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತರು? ನಟಿ ನೆಟ್‌ವರ್ತ್‌ ಎಷ್ಟು ಗೊತ್ತಾ?

ನಟಿ ಇತ್ತೀಚೆಗೆ ಮ್ಯಾಟ್ರಿಕ್ಸ್ 4 ಟೀಸರ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಚೋಪ್ರಾ ಸಿಟಾಡೆಲ್ ವೆಬ್ ಸರಣಿ ಮತ್ತು ಹಿಂದಿ ಚಿತ್ರ 'ಜೀ ಲೇ ಜರಾ' ದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಜೊತೆಯಲ್ಲಿ  ಕಾಣಿಸಿಕೊಳ್ಳಲಿದ್ದಾರೆ.

26

ಪ್ರಿಯಾಂಕಾ ಚೋಪ್ರಾ ಲಕ್ಷುರಿಯಸ್‌ ಲೈಫ್‌ಸ್ಟೈಲ್‌ ಹೊಂದಿದ್ದಾರೆ. ಅವರು ಈಗ ತಮ್ಮ ರೆಸ್ಟೋರೆಂಟ್ ಅನ್ನು ಆರಂಭಿಸಿದ್ದು, ಅದ್ದರಿಂದ ಭಾರೀ ಆದಾಯವನ್ನು ಗಳಿಸಿದ್ದಾರೆ. ಅಮೆರಿಕದ ಪಾಪ್ ಗಾಯಕ ನಿಕ್ ಜೊನಾಸ್ ಅವರನ್ನು ಮದುವೆಯಾದ ನಂತರ ಅವರು ನಿಸ್ಸಂದೇಹವಾಗಿ ಅಮೆರಿಕದಲ್ಲಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. 

36

ಬಾಲಿವುಡ್‌ ಹಾಗೂ ಹಾಲಿವುಡ್‌ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಹೊರತಾಗಿ ಪ್ರಿಯಾಂಕಾ ಪರ್ಪಲ್ ಪೆಬ್ಬಲ್ ಪಿಕ್ಚರ್ಸ್ ಹೆಸರಿನ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ಕೂಡ ಹೊಂದಿದ್ದಾರೆ. ಆಕೆಯ ಕಂಪನಿಯು ಭವಿಷ್ಯದಲ್ಲಿ ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆಯೊಂದಿಗೆ ಹಲವಾರು ಪ್ರಾದೇಶಿಕ ಚಿತ್ರಗಳನ್ನು ನಿರ್ಮಿಸಿದೆ ಎಂದು ವರದಿಯಾಗಿದೆ.

46

ಸ್ಟ್ಯಾಂಡ್ ಫೋರ್ಡ್ ಆರ್ಟ್ಸ್ ರಿವ್ಯೂಸ್ ಪ್ರಕಾರ, 2021 ರಲ್ಲಿ ಪ್ರಿಯಾಂಕಾ ಚೋಪ್ರಾ ಅವರ ನಿವ್ವಳ ಮೌಲ್ಯ 30 ಮಿಲಿಯನ್ ಯುಸ್‌ ಡಾಲರ್‌ ಅಂದರೆ ಸುಮಾರು 225 ಕೋಟಿ. ಅವರ ಆದಾಯದ ಬಹುಪಾಲು ಬ್ರಾಂಡ್ ಅನುಮೋದನೆಯಿಂದ ಬರುತ್ತದೆ. 

56

ಪ್ರತಿ ಅನುಮೋದನೆಗೆ ಪ್ರಿಯಾಂಕಾ ಚೋಪ್ರಾ ಸುಮಾರು  5 ಕೋಟಿ ರೂ ಚಾರ್ಜ್‌ ಮಾಡುತ್ತಾರೆ. ಒಂದು ಸಿನಿಮಾಕ್ಕೆ ಪಿಸಿ 19 ಕೋಟಿ ಡಿಮ್ಯಾಂಡ್‌ ಮಾಡುತ್ತಾರೆ ಎಂದು ವರದಿಯಾಗಿದೆ. 

66

ಆಕೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದರಿಂದ  ಅಂದಾಜು 1.8 ಕೋಟಿ  ಗಳಿಸುತ್ತಾರೆ. ನಟಿ ತನ್ನ ಹೇರ್‌ಕೇರ್ ಬ್ರಾಂಡ್ ಅನೋಮಲಿಯಿಂದ ದೊಡ್ಡ ಪ್ರಮಾಣದ ಆದಾಯವನ್ನು ಗಳಿಸುತ್ತಾರೆ. 

click me!

Recommended Stories