ಚಿಕ್ಕಮ್ಮ ಹೇಮಾ ಮೇಲೆ ಹಲ್ಲೆ ಮಾಡಿದ್ರ ಸನ್ನಿ: ಗದರ್ 2 ಯಶಸ್ಸಿನ ನಡುವೆ ಆ ದಿನಗಳ ನೆನೆದ ಡ್ರೀಮ್‌ಗರ್ಲ್‌

Published : Aug 22, 2023, 03:19 PM ISTUpdated : Aug 22, 2023, 03:33 PM IST

ಸನ್ನಿ ಡಿಯೋಲ್ ಅಭಿನಯದ ಗದರ್‌ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಯಶಸ್ಸಿನಿಂದಾಗಿ  ಜೊತೆ ಧರ್ಮೆಂದ್ರ ಪುತ್ರ ಸನ್ನಿ ಡಿಯೋಲ್ ಟ್ರೆಂಡಿಂಗ್‌ನಲ್ಲಿದ್ದಾರೆ.  ಚಿಕ್ಕಮ್ಮ ಹೇಮಾ ಮಾಲಿನಿ ಅವರ ಜೊತೆ ಸನ್ನಿ ಡಿಯೋಲ್ ಸಂಬಂಧ ಹೇಗಿತ್ತು, ಅಪ್ಪನ ಮದ್ವೆಯಾಗಿದ್ದಕ್ಕೆ ಸನ್ನಿ ಡಿಯೋಲ್ ಹೇಮಾ ಮಾಲಿನಿ ಮೇಲೆ ನಿಜವಾಗಿಯೂ ಹಲ್ಲೆ ಮಾಡಿದ್ದರಾ? ಸನ್ನಿ ಬಗ್ಗೆ ಡ್ರೀಮ್ ಗರ್ಲ್ ಏನಂದಿದ್ದರು? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.   

PREV
114
ಚಿಕ್ಕಮ್ಮ ಹೇಮಾ ಮೇಲೆ ಹಲ್ಲೆ ಮಾಡಿದ್ರ ಸನ್ನಿ: ಗದರ್ 2 ಯಶಸ್ಸಿನ ನಡುವೆ ಆ ದಿನಗಳ ನೆನೆದ ಡ್ರೀಮ್‌ಗರ್ಲ್‌
hema malini dharmendra

ಸನ್ನಿ ಡಿಯೋಲ್ ಅಭಿನಯದ ಗದರ್‌ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಯಶಸ್ಸಿನಿಂದಾಗಿ  ಜೊತೆ ಧರ್ಮೆಂದ್ರ ಪುತ್ರ ಸನ್ನಿ ಡಿಯೋಲ್ ಟ್ರೆಂಡಿಂಗ್‌ನಲ್ಲಿದ್ದಾರೆ.  

214

ಚಿಕ್ಕಮ್ಮ ಹೇಮಾ ಮಾಲಿನಿ ಅವರ ಜೊತೆ ಸನ್ನಿ ಡಿಯೋಲ್ ಸಂಬಂಧ ಹೇಗಿತ್ತು, ಅಪ್ಪನ ಮದ್ವೆಯಾಗಿದ್ದಕ್ಕೆ ಸನ್ನಿ ಡಿಯೋಲ್ ಹೇಮಾ ಮಾಲಿನಿ ಮೇಲೆ ನಿಜವಾಗಿಯೂ ಹಲ್ಲೆ ಮಾಡಿದ್ದರಾ? ಸನ್ನಿ ಬಗ್ಗೆ ಡ್ರೀಮ್ ಗರ್ಲ್ ಏನಂದಿದ್ದರು? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ. 

314

ಎರಡು ಮಕ್ಕಳಿರುವ ಆಗಿನ ಬಾಲಿವುಡ್ ಸೂಪರ್‌ಸ್ಟಾರ್‌ ಧರ್ಮೇಂದ್ರರನ್ನು ಕನಸಿನ ಕನ್ಯೆ ಹೇಮ ಮಾಲಿನಿ ವಿವಾಹವಾದಾಗ ಜೀವನ ಅವರೆನಿಸಿದಷ್ಟು ಸುಲಭವಾಗಿರಲಿಲ್ಲ, ಇವರ ಮದ್ವೆಗೆ ಧರ್ಮೇಂದ್ರ ಮೊದಲ ಪತ್ನಿ ಹಾಗೂ ಪುತ್ರರ ತೀವ್ರ ವಿರೋಧವಿತ್ತು.

414

ಮನೆ ಮುರುಕಿ ಎಂಬ ಆರೋಪ ಹೇಮಾ ಮಾಲಿನಿ ಮೇಲೆ ಬಂದಿದ್ದಲ್ಲದೇ ಅಪ್ಪನನನ್ನು ಮದ್ವೆಯಾಗಿದ್ದಕ್ಕೆ ಸನ್ನಿ ಡಿಯೋಲ್ ಹೇಮಾಮಾಲಿನಿ ಮೇಲೆ ಹಲ್ಲೆಯನ್ನು ಮಾಡಿದ್ದರು ಎಂದೆಲ್ಲಾ ಮಾಧ್ಯಮಗಳಲ್ಲಿ ವರದಿ ಬಂದಿತ್ತು. 

514

ಆದರೆ ಈಗ ಎಲ್ಲವನ್ನು ಮರೆತು ಈ ಎರಡು ಕುಟುಂಬ ಒಂದಾಗಿದೆ.  ಸಮಯ ಎಲ್ಲವನ್ನು ಮರೆಸುತ್ತದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರ ಎರಡು ಕುಟುಂಬ. 

614

ಪರಸ್ಪರ ಅಷ್ಟಕಷ್ಟೇ ಅಂತಿದ್ದ ಈ ಎರಡು ಕುಟುಂಬಗಳು ಹಲವು ವರ್ಷಗಳ ನಂತರ ಮತ್ತೆ ಒಂದಾಗಿವೆ. ಗದರ್ ಸಿನಿಮಾವನ್ನು ಹೇಮಾ ಮಾಲಿನಿ ಹೊಳಿರುವುದು, ಹೇಮಾ ಮಾಲಿನಿ  ಮಕ್ಕಳಾದ ಅಹನಾ ಡಿಯೋಲ್ ಈಶಾ ಡಿಯೋಲ್ ಈ ಸಿನಿಮಾದ ಪ್ರೀಮಿಯರ್‌ನಲ್ಲಿ ಭಾಗವಹಿಸಿರುವುದು ಇದಕ್ಕೆ ಸಾಕ್ಷಿ. 

714

ಹೇಮಾ ಮಾಲಿನಿ ಹಾಗೂ ಸನ್ನಿ ಡಿಯೋಲ್‌ಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದು ಎಂಬ ಮಾತಿತ್ತು. ತಂದೆಯನ್ನು ಮದ್ವೆಯಾದ ಹೇಮಾ ಮೇಲೆ ಸನ್ನಿಡಿಯೋಲ್  ಹಲ್ಲೆ ಮಾಡಿದ್ದರು ಎಂದೂ ವರದಿಯಾಗಿತ್ತು. 

814
hema malini dharmendra

 ಆದರೆ ಇದೆಲ್ಲಾ ಆರೋಪಗಳನ್ನು ಧರ್ಮೇಂದ್ರ ಮೊದಲ ಪತ್ನಿ ಪ್ರಕಾಶ್ ಕೌರ್ ಆಗ ಅಲ್ಲಗಳೆದಿದ್ದರು.  ಹೇಮಾಮಾಲಿನಿಯನ್ನು ವಿವಾಹವಾಗುವ ಧರ್ಮೇಂದ್ರರ ನಿರ್ಧಾರದಿಂದ ಬೇಸರವಾಗಿದ್ದರೂ ತಾನು ತನ್ನ ಮಕ್ಕಳಿಗೆ ಆ ರೀತಿಯ ಸಂಸ್ಕಾರವನ್ನು ಕಲಿಸಿಲ್ಲ. ಈ ವರದಿಗಳೆಲ್ಲವೂ ಸತ್ಯಕ್ಕೆ ದೂರವಾದುವುಗಳು ಎಂದು ಕೌರ್ ಹೇಳಿದ್ದರು. 

914

ಇದರ ಜೊತೆ ಈ ಹಿಂದೆ ಸಂದರರ್ಶನವೊಂದರಲ್ಲಿ ಹೇಮಾ ಮಾಲಿನಿಯವರು ತಮ್ಮ ಹಾಗೂ ಸನ್ನಿ ಸಂಬಂಧ ನಿಜವಾಗಿಯೂ ಹೇಗಿತ್ತು ಎಂದು ಹೇಳುವುದರ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದ್ದರು. 

1014

ನಮ್ಮ ಸಂಬಂಧ ತುಂಬಾ ಸುಂದರ ಹಾಗೂ ಸೌಹಾರ್ದಯುತವಾಗಿದೆ. ನಮಗೆ ಅಗತ್ಯವಿದ್ದಾಗಲೆಲ್ಲಾ ಧರ್ಮೇಂದ್ರ ಜೊತೆ ಆತನೂ ನಮ್ಮ ಸಹಾಯಕ್ಕೆ ಬರುತ್ತಿದ್ದ  ಎಂದು ಹೇಳಿದ್ದರು ಹೇಮಾ.

1114

ಅದರಲ್ಲೂ ತನಗೆ ಅಪಘಾತವಾದಾಗ ನನ್ನ ಮನೆಗೆ ಬಂದು ನನ್ನ ಭೇಟಿ ಮಾಡಿದ ಮೊದಲ ವ್ಯಕ್ತಿ ಸನ್ನಿ ಆಗಿದ್ದ. ಅಲ್ಲದೇ ನನ್ನ ಮುಖದಲ್ಲಿ ಆದ ಗಾಯಕ್ಕೆ ಹೊಲಿಗೆ ಹಾಕಲು ಸರಿಯಾದ  ವೈದ್ಯರು ಅಲ್ಲಿ ಇರುವರೇ ಎಂಬುದನ್ನು ಆತ ಖಚಿತಪಡಿಸಿಕೊಂಡಿದ್ದ. 

1214

ಆತ ನನ್ನ ಮೇಲೆ ಕಾಳಜಿ ತೋರಿಸಿದ್ದನ್ನು ನೋಡಿ ನಾನು ಬಹಳ ಅಚ್ಚರಿಗೊಂಡಿದ್ದೆ ಎಂದು ಹೇಮಾ ಹೇಳಿದ್ದರು. ಅಲ್ಲದೇ ಇದು ನನ್ನ ಹಾಗೂ ಆತನ ನಡುವಿನ ಸಂಬಂಧ ಹೇಗಿತ್ತು ಎಂಬುದನ್ನು ತೋರಿಸುವುದಕ್ಕೆ ಒಂದು ಉದಾಹರಣೆ ಎಂದು ಹೇಮಾ ಹೇಳಿಕೊಂಡಿದ್ದರು. 

1314

ಕೆಲ ದಿನಗಳ ಹಿಂದೆ ಹೇಮಾ ಮಾಲಿನಿ ಸನ್ನಿ ಡಿಯೋಲ್ ಅವರ ಇತ್ತೀಚಿನ ಸಿನಿಮಾ ಗದರ್ 2 ನೋಡಿ ಇದೊಂದು ಅತ್ಯಂತ ಹೆಚ್ಚು ಮನೋರಂಜನೆ ನೀಡುವ ಸಿನಿಮಾ ಎಂದಿದ್ದರು.

1414

ಅಲ್ಲದೇ ಸನ್ನಿಯ ಮಲ ಸಹೋದರಿಯರಾದ ಆಹನಾ ಹಾಗೂ ಈಶಾ ಕೂಡ ಈ ಸಿನಿಮಾದ ಸ್ಪಷೆಲ್ ಸ್ಕ್ರೀನಿಂಗ್‌ನಲ್ಲಿ ಭಾಗಿಯಾಗಿ ಜೊತೆಯಾಗಿ ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ನೀಡಿದ್ದರು. 

click me!

Recommended Stories