ನನಗಿಂತ ಚಿಕ್ಕವರಾಗಿದ್ದರೂ ಸನ್ಯಾಸಿ ಕಾಲಿಗೆರಗುತ್ತೇನೆ,ಟೀಕಾರರ ಬಾಯಿ ಮುಚ್ಚಿಸಿದ ರಜನಿಕಾಂತ್!

First Published Aug 21, 2023, 11:52 PM IST

ಉತ್ತರ ಪ್ರದೇಶ ಭೇಟಿ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದ ಸೂಪರ್ ಸ್ಟಾರ್ ರಜನಿ ವಿರುದ್ದ ಟೀಕೆಗಳು ಕೇಳಿಬಂದಿತ್ತು. ತನಗಿಂತ ಚಿಕ್ಕವರ ಪಾದ ಮುಟ್ಟಿ ನಮಸ್ಕರಿಸಿದ್ದು ಸರಿಯೇ ಅನ್ನೋ ಪ್ರಶ್ನೆ ಎದಿತ್ತು. ಇದಕ್ಕೆ ಖುದ್ದು ರಜನಿ ಸ್ಪಷ್ಟನೆ ನೀಡಿದ್ದರೆ. ರಜನಿ ಉತ್ತರಕ್ಕೆ ಟೀಕಾಕಾರರು ಗಪ್ ಚುಪ್.
 

ಜೈಲರ್ ಚಿತ್ರದ ಯಶಸ್ಸಿನಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ಹಿಮಾಲಯ ಪ್ರವಾಸ ಬಳಿಕ ನೇರವಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಇದೇ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದಿ ಪಾದ ಮುಟ್ಟಿ ನಮಸ್ಕರಿಸಿದ್ದರು.
 

ರಜನಿಕಾಂತ್ ತನಗಿಂತ ಕಿರಿಯ ವಯಸ್ಸಿನ ಯೋಗಿ ಆದಿತ್ಯನಾಥ್ ಪಾದ ಮುಟ್ಟಿ ಆಶೀರ್ವಾದ ಪಡೆದಿರುವುದು ತಪ್ಪು. ರಜನಿ ತಮ್ಮ ಸ್ವಾಭಿಮಾನವನ್ನು ಯೋಗಿ ಕಾಲಡಿ ಇಟ್ಟಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿತ್ತು.

ಆಯೋಧ್ಯೆ ತೆರಳಿ ಶ್ರೀರಾಮನ ದರ್ಶನ ಪಡೆದ ರಜನಿಕಾಂತ್ ಇಂದು ಯುಪಿ ಪ್ರವಾಸ ಮುಗಿಸಿ ತಮಿಳುನಾಡಿಗೆ ಮರಳಿದ್ದಾರೆ. ಈ ವೇಳೆ ತಮ್ಮ ಮೇಲಿನ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಸನ್ಯಾಸಿ , ಯೋಗಿ ,ಸ್ವಾಮೀಜಿ ನನಗಿಂತ ವಯಸ್ಸಿನಲ್ಲಿ ಸಣ್ಣವರಾಗಿದ್ದರೂ ನಾನು ಪಾದ ಮುಟ್ಟಿ ನಮಸ್ಕರಿಸುತ್ತೇನೆ. ಇದು ನಾನು ಆಚರಿಸಿಕೊಂಡು ಬಂದಿರುವ ಸಂಪ್ರದಾಯ, ಪದ್ಧತಿ ಎಂದು ರಜನಿಕಾಂತ್ ಹೇಳಿದ್ದಾರೆ.

ನನ್ನ ಶ್ರೇಷ್ಠ ಆಚಾರವನ್ನು ಪಾಲಿಸಿದ್ದೇನೆ ಹೊರತು ಇನ್ನೇನು ಮಾಡಿಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
 

ಅಯೋಧ್ಯೆಯಲ್ಲಿನ ರಾಮ್‌ಲಲ್ಲಾ ಗುಡಿಗೆ  ರಜನಿ ಭಾನುವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಬಳಿಕ ನೂತನವಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸ್ಥಳ ಮತ್ತು ಹನುಮಾನ್‌ ಗಢಿ ದೇಗುಲಕ್ಕೂ ಭೇಟಿ ನೀಡಿದ್ದರು.

‘ನನ್ನ ಹಿಂದಿನ ಪ್ರಾರ್ಥನೆ ಈಗ ನೆರವೇರಿದೆ. ಮುಂದೆ ಆರ್ಶೀದಿಸಿದರೆ ಕಾಮಗಾರಿ ಪೂರ್ಣಗೊಂಡ ಬಳಿಕ ಶ್ರೀರಾಮ ಮಂದಿರಕ್ಕೆ ಮತ್ತೊಮ್ಮೆ ಭೇಟಿ ನೀಡುವೆ ಎಂದು ರಜನಿಕಾಂತ್ ಹೇಳಿದ್ದಾರೆ.
 

ಆಗಸ್ಟ್ 19 ರಂದು ಲಖನೌಗೆ ಆಗಮಿಸಿದ್ದ ರಜನಿ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಜೊತೆ ತಾವು ಅಭಿನಯಿಸಿರುವ ‘ಜೈಲರ್‌’ ಚಿತ್ರ ವೀಕ್ಷಿಸಿದ್ದರು.
 

click me!