ಬಾಲಿವುಡ್‌ನ ಗದರ್ - 2 ಚಿತ್ರ ಇತ್ತೀಚೆಗೆ ಸಿಕ್ಕಾಪಟ್ಟೆ ಯಶಸ್ಸು ಗಳಿಸಿದ್ದು, ಬಾಕ್ಸಾಫೀಸ್‌ನಲ್ಲಿ ಈಗಾಗಲೇ 300 ಕೋಟಿ ರೂ. ಗಳಿಸಿದೆ. ಆದರೂ, ಚಿತ್ರ ನಟ ಸನ್ನಿ ಡಿಯೋಲ್ ಮಾಡಿದ ಸಾಲ ತೀರಿಸದ ಕಾರಣ ಅವರ ಮನೆಯನ್ನು ಬ್ಯಾಂಕ್ ಹರಾಜಿಗಿಟ್ಟಿತ್ತು. ಆದರೆ, 56 ಕೋಟಿ ರೂಪಾಯಿಗಳನ್ನು ಹಿಂಪಡೆಯಲು ಜುಹೂದಲ್ಲಿರುವ ಬ್ಲಾಕ್ ಸನ್ನಿ ಡಿಯೋಲ್ ಅವರ ಐಷಾರಾಮಿ ವಿಲ್ಲಾವನ್ನು ಇ-ಹರಾಜಿಗೆ ಇಟ್ಟಿತ್ತು. ಆದರೆ, ಸದ್ಯ ಹರಾಜನ್ನು ಹಿಂಪಡೆಯಲಾಗಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಆಗಸ್ಟ್ 25 ರಂದು ನಡೆಯಲಿರುವ ಇ-ಹರಾಜಿನ ಮೂಲಕ 56 ಕೋಟಿ ರೂಪಾಯಿಗಳನ್ನು ಹಿಂಪಡೆಯಲು ಪ್ಲ್ಯಾನ್ ಮಾಡಿತ್ತು. ಆದರೆ, ಸದ್ಯ ಇ - ಹರಾಜು ಪ್ರಕ್ರಿಯೆಯ ನೋಟಿಸ್ ಅನ್ನು ಹಿಂಪಡೆದಿದೆ. ಹೌದು, ಬಂಗಲೆಯ ಹರಾಜು ಸೂಚನೆಯನ್ನು 'ತಾಂತ್ರಿಕ ಕಾರಣಗಳಿಂದ' ಹಿಂಪಡೆಯಲಾಗಿದೆ ಎಂದು ಸೋಮವಾರ ಆಗಸ್ಟ್ 21 ರಂದು ಬ್ಯಾಂಕ್ ಆಫ್ ಬರೋಡಾ ಪತ್ರಿಕೆಗಳಲ್ಲಿ ಮಾಹಿತಿ ನೀಡಿದೆ.
ಈ ಸುದ್ದಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. “ನಿನ್ನೆ ಮಧ್ಯಾಹ್ನ ಬ್ಯಾಂಕ್ ಆಫ್ ಬರೋಡಾ ದವರು ಬ್ಯಾಂಕ್‌ಗೆ ನೀಡಬೇಕಿದ್ದ 56 ಕೋಟಿ ರೂ.ಗಳನ್ನು ಪಾವತಿಸಿಲ್ಲ ಎಂದು ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಜುಹು ನಿವಾಸವನ್ನು ಇ-ಹರಾಜಿಗೆ ಇಟ್ಟಿದ್ದಾರೆ ಎಂದು ರಾಷ್ಟ್ರಕ್ಕೆ ತಿಳಿದಿತ್ತು. ಇಂದು ಬೆಳಗ್ಗೆ 24 ಗಂಟೆಯೊಳಗೆ ಬ್ಯಾಂಕ್ ಆಫ್ ಬರೋಡಾ 'ತಾಂತ್ರಿಕ ಕಾರಣಗಳಿಂದ' ಹರಾಜು ನೋಟಿಸ್ ಅನ್ನು ಹಿಂಪಡೆದಿದೆ ಎಂದು ರಾಷ್ಟ್ರಕ್ಕೆ ತಿಳಿದು ಬಂದಿದೆ. ಈ 'ತಾಂತ್ರಿಕ ಕಾರಣಗಳನ್ನು' ಯಾರು ಪ್ರಚೋದಿಸಿದರು ಎಂದು ಆಶ್ಚರ್ಯ ಪಡುತ್ತೀರಾ?" ಎಂದು ಬರೆದುಕೊಂಡಿದ್ದಾರೆ.
ಸನ್ನಿ ಡಿಯೋಲ್ ಅವರನ್ನು ಅಧಿಕೃತವಾಗಿ ಅಜಯ್ ಸಿಂಗ್ ಧರ್ಮೇಂದ್ರ ಡಿಯೋಲ್ ಎಂದು ಕರೆಯಲಾಗುತ್ತದೆ ಮತ್ತು 2019 ರಿಂದ ಗುರುದಾಸ್‌ಪುರದಿಂದ ಆಡಳಿತಾರೂಢ ಬಿಜೆಪಿ ಸಂಸದರಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಆಗಿನ ಕಾಂಗ್ರೆಸ್ ಸದಸ್ಯ ಸುನಿಲ್ ಜಾಕರ್ ಅವರನ್ನು ಸೋಲಿಸಿ ದೊಡ್ಡ ಅಂತರದಿಂದ ಸ್ಥಾನವನ್ನು ಗೆದ್ದರು.