ಚಂದದ ಸೀರೆ ಧರಿಸಿ ಬಂದ ಕನ್ನಡತಿಗೆ ಹಣೆಯಲ್ಲಿ ಸಿಂಧೂರ ಇಟ್ಕೊಳ್ಳಿ ಎಂದ ಅಭಿಮಾನಿ

First Published | Aug 4, 2024, 2:57 PM IST

ನಟಿ ರಂಜನಿ ರಾಘವನ್ ಇನ್‌ಸ್ಟಾಗ್ರಾಂನಲ್ಲಿ ಹೊಸ ಎರಡು ಫೋಟೋಬ ಹಂಚಿಕೊಂಡಿದ್ದಾರೆ. ಫೋಟೋಗೆ ಲೈಕ್ಸ್ ಸುರಿಮಳೆಯೇ ಸುರಿಯುತ್ತಿದೆ.

ಪುಟ್ಟಗೌರಿ ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ನಟಿ ರಂಜನಿ ರಾಘವನ್. ಇದಾದ ಬಳಿಕ ಬಂದ ಕನ್ನಡತಿ ಸೀರಿಯಲ್ ರಂಜಿನಿ ರಾಘವನ್ ಅವರಿಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತ್ತು.

ಧಾರಾವಾಹಿ ಜೊತೆಯಲ್ಲಿಯೂ ರಂಜನಿ ರಾಘವನ್ ರಾಜಹಂಸ, ಟಕ್ಕರ್, ಕ್ಷಮಿಸಿ ನಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯು, ಕಾಂಗರೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸಿನಿಮಾಗಳ ಜೊತೆಯಲ್ಲಿ ರಂಜನಿ ಒಳ್ಳೆಯ ಬರಹಗಾರ್ತಿ ಸಹ ಆಗಿದ್ದಾರೆ.

Tap to resize

ಸ್ನೇಹಿತರ ದಿನ ಹಿನ್ನೆಲೆ ಫಿಲಂಫೇರ್ ಕಾರ್ಯಕ್ರಮಕ್ಕೂ ಹೋಗುವ ಮುನ್ನ ಕ್ಲಿಕ್ಕಿಸಿಕೊಂಡಿದ್ದ ಚೆಂದದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸ್ನೇಹ ಅತಿ ಮಧುರ.. ಅದು ಅಮರ.. ಹ್ಯಾಪಿ ಫ್ರೆಂಡ್‌ಶಿಪ್ ಎಂದು ರಂಜನಿ ವಿಶ್ ಮಾಡಿದ್ದಾರೆ.

ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ನಾನು ಹುಡುಕಿದ ನನ್ನ ನಿಲ್ದಾಣ, ನೀನೇ ಇನ್ನೇನಿದೆ ಎಂದು ಬರೆದು ಹಾರ್ಟ್ ಎಮೋಜಿ ಹಾಕಿದ್ದಾರೆ. ಮತ್ತೋರ್ವ ಅಭಿಮಾನಿ ತುಂಬಾ ದಿನ ಆದ್ಮೇಲೆ ಕನ್ನಡತಿ ಲುಕ್ ಎಂದು ಕಮೆಂಟ್ ಮಾಡಿದ್ದಾರೆ.

ಇದೇ ರೀತಿ ತರೇಹವಾರಿ ಕಮೆಂಟ್‌ಗಳು ರಂಜನಿ ರಾಘವನ್ ಫೋಟೋಗೆ ಬಂದಿವೆ. ಚಂದನದ ಗೊಂಬೆ, ನೀವು ಯಾವಾಗಲೂ ಸುಂದರವಾಗಿ ಕಾಣಿಸುತ್ತೀರಿ. ನಮ್ಮ ಕನ್ನಡತಿ, ಬ್ಯೂಟಿಫುಲ್ ಎಂದು ಕಮೆಂಟ್ ಮಾಡಿದ್ದಾರೆ.

mogersuresh989 ಎಂಬ ಖಾತೆಯಿಂದ ಹಣೆಯಲ್ಲಿ ಸಿಂಧೂರ ಇಟ್ಟುಕೊಳ್ಳಿ. ಹಾಗೆಯೇ ಸ್ವಚ್ಛ ಮಾಡಲಿಕ್ಕೆ ಜನರ ಅವಶ್ಯಕತೆಯಿಲ್ಲ ಎಂದು ವಿಚಿತ್ರವಾಗಿ ಕಮೆಂಟ್ ಮಾಡಲಾಗಿದೆ. ಆದ್ರೆ ರಂಜನಿ ಚಿಕ್ಕದಾದ ಬಿಂದಿ ಇರಿಸಿಕೊಂಡಿದ್ರೂ  ಈ ರೀತಿ ಕಮೆಂಟ್ ಮಾಡಲಾಗಿದೆ

ಕನ್ನಡತಿ ಸೀರಿಯಲ್‌ನಲ್ಲಿ ಕಿರಣ್ ಮತ್ತು ರಂಜನಿ ಕೆಮಿಸ್ಟ್ರಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನೊಮ್ಮೆ ನಿಮ್ಮನ್ನು ಜೊತೆಯಾಗಿ ಪರದೆ ಮೇಲೆ ನೋಡಬೇಕೆಂದು ಅಭಿಮಾನಿಗಳು ಯಾವಾಗಲೂ ಕಮೆಂಟ್ ಮಾಡುತ್ತಿರುತ್ತಾರೆ.

Latest Videos

click me!