ತಮ್ಮ ಮದುವೆಗೆ ಮೊದಲು, ವಿಕ್ಕಿ ಮತ್ತು ಕತ್ರಿನಾ ಒಟ್ಟಿಗೆ ಯಾವುದೇ ಫೋಟೋಗಳನ್ನು ಪೋಸ್ಟ್ ಮಾಡಿರಲಿಲ್ಲ. ಆದರೆ, ಅವರ ಮದುವೆಯ ನಂತರ, ಅವರು ಪರಸ್ಪರರ ಮೇಲಿನ ಪ್ರೀತಿಯನ್ನು ತೋರಿಸುವ ಹಲವು ಅಡರೋಬಲ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅದು ಕ್ರಿಸ್‌ಮಸ್, ಲೋಹರಿ ಅಥವಾ ಈಗ ಹೋಳಿ ಆಗಿರಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮದುವೆಯ ನಂತರದ ಅವರ ಮೊದಲ ಹಬ್ಬದ ಆಚರಣೆಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಮೊದಲ ಬಾರಿಗೆ ಒಟ್ಟಿಗೆ ಹೋಳಿ ಹಬ್ಬ ಆಚರಿಸುವುದರಿಂದ ಹೆಚ್ಚು ವಿಶೇಷವಾಗಿದೆ. ಶುಕ್ರವಾರ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಹೋಳಿ ಆಚರಣೆಯ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಿಕ್ಕಿಯ ತಂದೆ ಶ್ಯಾಮ್ ಕೌಶಲ್, ತಾಯಿ ವೀಣಾ ಕೌಶಲ್ ಮತ್ತು ಕಿರಿಯ ಸಹೋದರ ಸನ್ನಿ ಕೌಶಲ್ ಅವರೊಂದಿಗೆ ತಮ್ಮ ಮೊದಲ ಹೋಳಿ ಹಬ್ಬವನ್ನು ಸಖತ್ ಖುಷಿಯಿಂದ ಸೆಲೆಬ್ರೆಟ್ ಮಾಡಿದ್ದಾರೆ.
ಕತ್ರಿನಾ ಕೌಶಲ್ ಪರಿವಾರ ಒಟ್ಟಿಗೆ ಸೆಲ್ಫಿಗಾಗಿ ಪೋಸ್ ನೀಡಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು ಮತ್ತು ಪರಸ್ಪರ ಕೆಂಪು ಗುಲಾಲ್ ಬಣ್ಣವನ್ನು ಹಚ್ಚಿಕೊಂಡಿದ್ದರು.ಎಲ್ಲರೂ ಸಖತ್ ಖುಷಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಫೋರ್ಟ್ ಬರ್ವಾರಾದಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಬಾಲಿವುಡ್‌ನ ಅತ್ಯಂತ ದುಬಾರಿ ಮದುವೆಗಳಲ್ಲಿ ಇದು ಒಂದಾಗಿತ್ತು.