400 ಕೋಟಿ ಗಳಿಸಿದರೂ ಅತಿ ಹೆಚ್ಚು ಗಳಿಕೆ ಮಾಡಿದ ಪಟ್ಟಿಯಲ್ಲಿ ಬ್ರಹ್ಮಾಸ್ತ್ರ ಇಲ್ಲ !
First Published | Sep 27, 2022, 7:27 PM ISTಕರಣ್ ಜೋಹರ್(Karan Johar) ಅವರ ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಚಿತ್ರವು ವಿಶ್ವಾದ್ಯಂತ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರೊಂದಿಗೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Kapoor And Alia Bhatt) ಅಭಿನಯದ ಈ ಚಿತ್ರವು ತನ್ನ ಬಜೆಟ್ ಸುಮಾರು 410 ಕೋಟಿ ರೂ ಅನ್ನು ಗಳಿಸಿದೆ. ಇಷ್ಟು ದೊಡ್ಡ ಮೊತ್ತವನ್ನು ಗಳಿಸಿದ್ದರೂ, ಈ ಚಿತ್ರವು ವಿಶ್ವದ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 15 ಚಿತ್ರಗಳಲ್ಲಿ ಸೇರ್ಪಡೆಗೊಂಡಿಲ್ಲ. ವಿಶೇಷವೆಂದರೆ 6 ಚಿತ್ರಗಳ ಅರ್ಧದಷ್ಟು ಕಲೆಕ್ಷನ್ ಕೂಡ ಮಾಡಲು ಸಾಧ್ಯವಾಗಿಲ್ಲ.