Salman Khan ಜೊತೆ Jacqueline Fernandez; ಫೋಟೋ ವೈರಲ್‌

Published : May 02, 2022, 01:57 PM IST

ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರು ಕೆಲವು ಸಮಯಗಳಿಂದ ವಿವಾದಗಳಿಂದ ಸುತ್ತುವರೆದಿದ್ದಾರೆ. ಸುಕೇಶ್ ಚಂದ್ರಶೇಖರ್ ಸುಲಿಗೆ ಹಣದಿಂದ ನಟಿಗೆ ದುಬಾರಿ ಉಡುಗೊರೆ ನೀಡಿದ್ದು ಇದರ ಬಗ್ಗೆ ಕೊನೆಗೂ ನಟಿ ಬಾಯಿ ಬಿಟ್ಟಿದ್ದಾರೆ. ಈ ವಿವಾದಗಳ ನಡುವೆ ನಟಿ ನಿನ್ನೆ ರಾತ್ರಿ ಸಲ್ಮಾನ್‌ ಖಾನ್‌ (Salman Khan) ಜೊತೆ ಕಾಣಿಸಿಕೊಂಡಿದ್ದಾರೆ. ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ. 

PREV
16
Salman Khan ಜೊತೆ  Jacqueline Fernandez; ಫೋಟೋ ವೈರಲ್‌

ಸಲ್ಮಾನ್ ಖಾನ್ ಮತ್ತು ಟೈಗರ್ ಶ್ರಾಫ್ ನಿನ್ನೆ ಅಂದರೆ ಎಪ್ರಿಲ್‌ 30ರ ರಾತ್ರಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಪ್ಯಾಶನ್ ಪ್ರಾಜೆಕ್ಟ್ YOLO ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿದರು.

26

ಕೋವಿಡ್ -19 ಸಮಯದಲ್ಲಿ ಸಹಾಯ ಮಾಡಲು  ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡೀಸ್ ಸ್ಥಾಪಿಸಿದ You Only Live Once  (YOLO) ಫೌಂಡೇಶನ್ ತನ್ನ ಮೊದಲ ವಾರ್ಷಿಕೋತ್ಸದ ಸಂಭ್ರಮದಲ್ಲಿದೆ.

36

ನಟಿ ಮಾತ್ರವಲ್ಲ ಮಕ್ಕಳ ಹಕ್ಕುಗಳ ಚಾಂಪಿಯನ್ ಆಗಿರುವ ಜಾಕ್ವೆಲಿನ್ ತಮ್ಮ ಇಡೀ ವರ್ಷವನ್ನು ಮಕ್ಕಳು ಮತ್ತು ಸಮಾಜದ ಸುಧಾರಣೆಗೆ ಮುಡಿಪಾಗಿಟ್ಟಿದ್ದಾರೆ. ಅವರು YOLOದ ಹೊಸ ವರ್ಷವನ್ನು ಪ್ರಾರಂಭಿಸಲು ಹಿಂದುಳಿದ ಯುವಕರಿಗೆ ವಿಭಿನ್ನ ಚಟುವಟಿಕೆಗಳೊಂದಿಗೆ ಕಾರ್ಯಕ್ರಮವನ್ನು ಏರ್ಪಡಿಸಿದರು. 

46

ಈ ಸಂದರ್ಭವನ್ನು  ಯಶಸ್ವಿಗೊಳಿಸಲು ಮತ್ತು ಮಕ್ಕಳ ಮುಖಗಳಲ್ಲಿ ನಗು ತರಿಸಲು ಮೀಟ್ ಬ್ರೋಸ್, ಟೈಗರ್ ಶ್ರಾಫ್ ಮತ್ತು ಯೋಹಿನಿಯಂತಹ ಹಲವಾರು ಶ್ರೇಷ್ಠ ನಟರ ಸಹಾಯವನ್ನು ನಟಿ ಪಡೆದರು. ಈ ಸಂದರ್ಭದಲ್ಲಿ ಬಾಲಿವುಡ್ ಭಾಯ್ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದು, ಮಕ್ಕಳಿಗೆ ಖುಷಿ ತಂದಿದೆ.

56

NGO ಪ್ರತಿನಿಧಿಗಳು ನಟ  ಜಾಕಿ ಶ್ರಾಫ್‌ ಅವರನ್ನು ಹೊಗಳಿದರು, ಅವರು ಫೌಂಡೇಶನ್‌ನೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ ಮತ್ತು ಅವರು ತಮ್ಮ ಗುರಿಗಳನ್ನು ಸಾಧಿಸಲು ಹೇಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು. 
 

66

ಜಾಕ್ವೆಲಿನ್ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಹಲವಾರು ಸರ್ಕಾರೇತರ ಸಂಸ್ಥೆಗಳೊಂದಿಗೆ (ಎನ್‌ಜಿಒ) ಪಾಲುದಾರಿಕೆ ಹೊಂದಿದ್ದಾರೆ ಮತ್ತು ಒಂದು ವರ್ಷದೊಳಗೆ ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಅವರಿಗೆ ಸಹಾಯ ಮಾಡಿದ್ದಾರೆ.

Read more Photos on
click me!

Recommended Stories