ಮೊದಲ ಡೇಟ್‌ನಲ್ಲೇ ಪ್ರಿಯಾಂಕಾಗೆ ನಿರಾಸೆಗೊಳಿಸಿದ್ದ ನಿಕ್ ಜೊನಾಸ್ !

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾರ ಮದುವೆ ಸಾಕಷ್ಷು ಸುದ್ದಿ ಮಾಡಿತ್ತು. ಪ್ರಿಯಾಂಕ ತನಗಿಂತ ಕಿರಿಯ ಪಾಪ್‌ ಗಾಯಕ ನಿಕ್‌ ಜೊತೆ ಜೀವನ ಶುರು ಮಾಡಿದಾಗ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದರು. ನಿಕ್ ಜೊನಾಸ್ ಜೊತೆ ಮೊದಲ ಡೇಟ್‌ನಲ್ಲೇ ಪ್ರಿಯಾಂಕಾ ಚೋಪ್ರಾ ಅಸಮಾಧಾನಗೊಂಡಿದ್ದರು. ಕಾರಣ ಏನು?

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರ ಡೇಟಿಂಗ್ ರೂಮರ್‌ಗಳು 2017ರಲ್ಲಿ ಹೈಲೈಟ್ಆಗಿತ್ತು.
ಮೊದ ಮೊದಲ ನಿಕ್ ಜೊತೆಗಿನ ಭೇಟಿ ಬಗ್ಗೆಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

ಅವರ ಮೊದಲ ಡೇಟ್‌ ದಿನ ಪರ್ಸನಲ್‌ ಆಗಿ ಮೀಟ್‌ ಮಾಡುವ ಮೊದಲುಕೆಲವು ಮೆಸೇಜ್‌ಗಳನ್ನು ವಿನಿಮಯ ಮಾಡಿಕೊಂಡಿದ್ದರಂತೆ.
ಫಸ್ಟ್‌ ಡೇಟ್‌ಗೆ ಪ್ರಿಯಾಂಕಾ ನಿಕ್‌ರನ್ನು ತಮ್ಮ ಮನೆಗೇ ಆಹ್ವಾನಿಸಿದ್ದರಂತೆ. ಆಗತಾಯಿ ಮಧು ಚೋಪ್ರಾ ತಮ್ಮ ಪಾಡಿಗೆ ತಾವು ಟಿವಿ ವೀಕ್ಷಿಸುತ್ತಿದ್ದರಂತೆ.
2018ರಲ್ಲಿ ವೋಗ್‌ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಮೊದಲ ಡೇಟ್‌ ಬಗ್ಗೆ ಮತ್ತು ಅದರ ಕೊನೆಯಲ್ಲಿ ಪ್ರಿಯಾಂಕಾ ಹೇಗೆ ಸ್ವಲ್ಪ ಅಸಮಾಧಾನಗೊಂಡರು ಎಂಬುದನ್ನು ರಿವೀಲ್‌ ಮಾಡಿದ್ದರು ನಟಿ.
'ನಾವು ಒಟ್ಟಿಗೆ ಸ್ವಲ್ಪ ಸಮಯ ಕಳೆದವು ಮತ್ತು ಅವರು ಹೊರಡುವ ಮೊದಲು ನನ್ನ ಬೆನ್ನನ್ನು ತಟ್ಟಿದರು' ಎಂದು ಪ್ರಿಯಾಂಕಾ ಹೇಳಿದ್ದರು.
'ಒಂದು ಕಿಸ್‌ ಸಹಇಲ್ಲವೆಂದು ಅವಳು ಆ ಬಗ್ಗೆ ಇನ್ನೂ ಅಸಮಾಧಾನಗೊಂಡಿದ್ದಾಳೆ' ಎಂದು ನಿಕ್ .ಹೇಳಿದ್ದರು.
ಅದು ತುಂಬ ಗೌರವದ ರಾತ್ರಿಯಾಗಿತ್ತು, ಪ್ರಿಯಾಂಕ ಅವರ ತಾಯಿ ಕೂಡ ಮನೆಯಲ್ಲಿದ್ದ ಕಾರಣ ಮೂವ್‌ ಮಾಡಲಿಲ್ಲ ಎಂದು ನಿಕ್‌ ಎಲ್ಲಿಯೋ ಒಮ್ಮೆ ಹೇಳಿ ಕೊಂಡಿದ್ದರು.
ಇದಕ್ಕೆ ಪ್ರಿಯಾಂಕಾ ತಮಾಷೆಯಾಗಿ ಹೇಳುತ್ತಾ, 'ನೀವು ನನ್ನನ್ನು ಕೇಳಿದರೆ ತುಂಬಾ ಗೌರವವಾಗಿತ್ತು' ಎಂದರು.
ನಿಕ್ ಮತ್ತು ಪ್ರಿಯಾಂಕಾಗೆ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಫ್ಯಾನ್ಸ್‌ ಇದ್ದಾರೆ.ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಬಾರಿ ಲೈಕ್‌ ಗಳಿಸುತ್ತಾರೆ ಈ ಕಪಲ್‌.
ಕಪಲ್‌ ತಮ್ಮ ದೈನಂದಿನ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

Latest Videos

click me!