ಪಾಯಲ್ ಘೋಷ್‌ಗೆ ಪ್ರೀತಿಯಲ್ಲಿ ಮೋಸ ಮಾಡಿದ್ದರಂತೆ ಕ್ರಿಕೆಟಿಗ ಇರ್ಫಾನ್ ಪಠಾಣ್ !

First Published | Sep 26, 2020, 4:49 PM IST

ಪ್ರಸ್ತುತ ನಟಿ ಪಾಯಲ್ ಘೋಷ್ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಚಲನಚಿತ್ರ  ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಾಡಿದ್ದಾರೆ. ಇದಕ್ಕೂ ಮೊದಲು ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರೀತಿಯಲ್ಲಿ ಮೋಸ ಮಾಡಿದ್ದರು ಎಂದು  ಪಾಯಲ್ ಘೋಷ್  ಅರೋಪಿಸಿದ್ದರು. 

ಬಾಲಿವುಡ್ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಾಡಿದ್ದಾರೆ ನಟಿ ಪಾಯಲ್ ಘೋಷ್.
ಈ ವಿವಾದದ ಮಧ್ಯೆ, ಪಯಾಲ್ ಘೋಷ್ ಹಾಗೂ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಹಿಂದಿನ ಸಂಬಂಧವು ಬೆಳಕಿಗೆ ಬಂದಿದೆ.
Tap to resize

ಅನುರಾಗ್‌ ಕಶ್ಯಪ್‌ಗಿಂತ ಮೊದಲು, ಪಯಾಲ್ ಘೋಷ್‌ಗೆ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರೀತಿಯಲ್ಲಿ ಮೋಸ ಮಾಡಿದ್ದರು ಎಂದು ಆರೋಪಿಸಿದ್ದರು.
ಅನುರಾಗ್‌ರನ್ನು ಸಪೋರ್ಟ್‌ ಮಾಡುತ್ತಾ ಚಲನಚಿತ್ರ ತಯಾರಕ ಆನಂದ್ ಕುಮಾರ್ಪಾಯಲ್ ಘೋಷ್ ಅವರ ಹಿಂದಿನ ಟ್ವೀಟನ್ನುಹೊರಗೆಳಿದಿದ್ದಾರೆ .
ಈ ನಟಿ ಇರ್ಫಾನ್ ಪಠಾಣ್ ಅವರು ಮೋಸ ಮಾಡಿದ್ದಕ್ಕಾಗಿ ಈ ಹಿಂದೆ ಹೇಗೆ ಆರೋಪಿಸಿದರು ಹಾಗೂ ಇವರಿಗೆ ಜನರ ಮೇಲೆ ಆರೋಪ ಹೊರಿಸುವ ಅಭ್ಯಾಸವಿದೆ ಎಂದು ಆನಂದ್ ಕುಮಾರ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಹಳೆಯ ಟ್ವೀಟಿನಲ್ಲಿಕ್ರಿಕೆಟಿಗ ಇರ್ಫಾನ್ ಪಠಾಣ್ ಪಾಯಲ್‌ಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು ನಟಿ.
ಇರ್ಫಾನ್ ತನ್ನನ್ನು ಮೋಸಗೊಳಿಸಿದ ನಂತರ ತಾನು ಖಿನ್ನತೆಗೆ ಒಳಗಾಗಿದ್ದೆ ಎಂದು 2011 ರಲ್ಲಿ ಪಾಯಲ್ ಘೋಷ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಈ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ನಂತರ ಪಾಯಲ್ ಘೋಷ್ ಡಿಲೀಟ್‌ ಮಾಡಿದ್ದಾರೆ. ಆದರೂ ಇದನ್ನು ಗಣನೆಗೆ ತೆಗೆದುಕೊಂಡು ಈ ನಿರ್ದಿಷ್ಟ ಪೋಸ್ಟ್‌ನ ದಾಖಲೆಗಳನ್ನು ಹುಡುಕಬೇಕು ಎಂದು ಮುಂಬೈ ಪೊಲೀಸರಿಗೆ ಆನಂದ್ ಕುಮಾರ್ ವಿನಂತಿಸಿದ್ದಾರೆ.
ಪಾಯಲ್ ಘೋಷ್ ಮತ್ತು ಇರ್ಫಾನ್ ಪಠಾಣ್ ನಡುವಿನ ಹಳೆಯ ಸಂಬಂಧದ ಸುದ್ದಿ ಅಂತರ್ಜಾಲದಲ್ಲಿ ವೈರಲ್‌ ಆಗಿದೆ.
ನಟಿ ಮಾಡಿದ ಆರೋಪವನ್ನು ಅನುರಾಗ್ ಕಶ್ಯಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿರಾಕರಿಸಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಅವರ ಮಾಜಿ ಪತ್ನಿ ಕಲ್ಕಿ ಕೋಚ್ಲಿನ್ ಸಹ ಅವರ ಬೆಂಬಲಕ್ಕೆ ನಿಂತಿದ್ದಾರೆ.

Latest Videos

click me!