ನಟಿ ಖುಷ್ಬೂ ಕೂದಲು ಪಳಪಳ ಹೊಳೆಯುವುದಕ್ಕೆ ಕಾರಣವೇ ಈ ಹೇರ್‌ಪ್ಯಾಕ್‌!

ಬಹುಭಾಷಾ ನಟಿ ಖುಷ್ಬೂ 49 ಆದರೂ ಇನ್ನೂ ಪ್ರಾಯದ ಚೆಲುವೆಯಂತೆ ಕಂಗೊಳ್ಳಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಆಕೆ ಶೇರ್ ಮಾಡಿಕೊಳ್ಳುವ ಪೋಟೋಗಳು. ಸ್ಮೂತ್‌ ಹಾಗೂ ಸಿಲ್ಕಿ ಕೂದಲು ಬಗ್ಗೆ ಅಭಿಮಾನಿಗಳು ಅವರನ್ನು ಕೇಳುತ್ತಲೇ ಇದ್ದ ಪ್ರಶ್ನೆಗೆ ಈಗ ಉತ್ತರಿಸಿದ್ದಾರೆ.

ಬಹುಭಾಷಾ ನಟಿ ಖುಷ್ಬೂ ಬ್ಯೂಟಿ ಬಗ್ಗೆ ಪ್ರಶ್ನೆ ಕೇಳುತ್ತಿದ್ದ ಅಭಿಮಾನಿಗಳು.
ಫಾರ್‌ಎವರ್‌ ಎಂಗ್ ಆಗಿ ಕಾಣಿಸಲು ಕಾರಣವೇನು ಎಂದು ಇದೀಗ ರಿವೀಲ್ ಮಾಡಿದ್ದಾರೆ.

ವಿಭಿನ್ನವಾಗಿ ಕೂದಲು ವಿನ್ಯಾಸ ಮಾಡಿಕೊಳ್ಳುವ ಖುಷ್ಬೂ ಹೇರ್‌ ಕೇರ್‌ ಹೇಗಿದೆ ಗೊತ್ತಾ?
ತಮ್ಮ ಕೂದಲು ಆರೋಗ್ಯವಾಗಿರಲು ಕಾರಣವೇ ಅವರು ಮನೆಯಲ್ಲಿ ತಯಾರಿಸಿಕೊಳ್ಳುವ ಹೇರ್ ಮಾಸ್ಕ್‌ ಅಂತೆ.
ಮೊಸರು, ಮೊಟ್ಟೆ, ಆಲಿವ್‌ ಎಣ್ಣಿ, ದಾಸವಾಳದ ಹೂವು ಹಾಗೂ ಎಳೆ ಎಲೆ, ಜೇನು ತುಪ್ಪ ಮತ್ತು ರೋಸ್‌ ಮೇರಿ ಎಣ್ಣೆಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್‌ ರೀತಿಯಲ್ಲಿ ಮಾಸ್ಕ್ ತಯಾರಿಸಿಕೊಳ್ಳುತ್ತಾರೆ.
ಈ ಪೇಸ್ಟ್ ಬಳಸುವ ಮುನ್ನ ತಮ್ಮ ಕೂದಲಿಗೆ ಎಣ್ಣೆ ಹಚ್ಚಬೇಕು.
ಖುಷ್ಬೂ ಶೇರ್ ಮಾಡಿಕೊಂಡ ಪ್ಯಾಕ್‌ ಬಗ್ಗೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಕೆಲವರು ಅದನ್ನು ಪ್ರಯತ್ನಿಸಿ ಫಲವಾದ ಕಾರಣ ಥ್ಯಾಂಕ್ಸ್ ಎಂದು ಕಾಮೆಂಟ್ ಮಾಡಿದ್ದಾರೆ.
ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಖುಷ್ಬೂ ಮನೆಯಲ್ಲಿಯೇ ವರ್ಕೌಟ್ ಮಾಡಲು ಪ್ರಾರಂಭಿಸಿದ್ದರು. ಫೋಟೋಗಳನ್ನು ಶೇರ್ ಮಾಡಿಕೊಂಡು 'ಆರೋಗ್ಯವೇ ಭಾಗ್ಯ' ಎಂದು ಬರೆದುಕೊಂಡಿದ್ದರು.
ಅಲ್ಲದೇ ಅಭಿಮಾನಿಗಳ ಜೊತೆ ಫೇಸ್‌ ಪ್ಯಾಕ್‌ ಬಗ್ಗೆಯೂ ಹಂಚಿಕೊಂಡಿದ್ದಾರೆ.
ಮನೆಯಲ್ಲಿದ್ದ ಬಟರ್‌ಫ್ರೋಟ್‌ ಹಾಗೂ ಅರಿಶಿಣ ಪುಡಿ ಮಿಕ್ಸ್‌ ಮಾಡಿಕೊಂಡು ಪ್ಯಾಕ್‌ ರೀತಿಯಲ್ಲಿ ಬಳಸಿದ್ದಾರೆ. ಇದರಿಂದ ಮುಖ ಕಾಂತಿಯುತವಾಗುತ್ತದೆ ಎಂದು ಹೇಳಿದ್ದರು.

Latest Videos

click me!