ಶ್ರೀದೇವಿಯ ಈ ಸಿನಿಮಾ ನೋಡಿ ಮಾತು ಬಿಟ್ಟಿದ್ದ ಮಗಳು ಜಾನ್ವಿ !

First Published | Feb 24, 2021, 5:59 PM IST

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಶ್ರೀದೇವಿ ನಿಧನರಾಗಿ 3 ವರ್ಷಗಳು ಕಳೆದಿವೆ. ಅವರ ಮಗಳು ಜಾನ್ವಿ ಕೂಡ ಹಿಂದಿ ಸಿನಿಮಾರಂಗದಲ್ಲಿ ನಿಧಾನವಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದರೆ ಮಗಳು ನಟಿಯಾಗುವುದನ್ನು ನೋಡುವ ಆದೃಷ್ಟ ಶ್ರೀದೇವಿಗೆ ಇಲ್ಲ. ಶ್ರೀದೇವಿ ಅವರ ಚಿತ್ರ ಸದ್ಮಾ ನೋಡಿದ ನಂತರ ಜಾನ್ವಿ ಕಪೂರ್ ಹೇಗೆ ಪ್ರತಿಕ್ರಿಯಿಸಿದ್ದರು ಎಂಬುದು ಇಲ್ಲಿದೆ.

ತನ್ನ ಮಗಳು ಜಾನ್ವಿ ಕಪೂರ್ ಸದ್ಮಾ ಸಿನಿಮಾ ನೋಡಿ ಮೂರು ದಿನಗಳು ನನ್ನ ಜೊತೆ ಮಾತನಾಡಲಿಲ್ಲ ಎಂದು ಶ್ರೀದೇವಿ ಒಮ್ಮೆ ಬಹಿರಂಗಪಡಿಸಿದ್ದರು.
undefined
ಜಾನ್ವಿ ಕಪೂರ್ ತನ್ನ ತಾಯಿ ಶ್ರೀದೇವಿ ಅವರ ಸಿನಿಮಾಗಳನ್ನು ನೋಡುವುದನ್ನು ಇಷ್ಟಪಡುತ್ತಾರೆ ಹಾಗೂ ಅವರ ನಟನೆ ಮತ್ತು ತೆರೆಯ ಮೇಲಿನ ಪಾತ್ರಗಳ ಫ್ಯಾನ್ ಕೂಡ ಹೌದು.
undefined
Tap to resize

ಆದರೆ, ಜಾನ್ವಿ ತಾಯಿಯ ಒಂದು ಸಿನಿಮಾ ನೋಡಿ ತುಂಬಾ ಬೇಸರಗೊಂಡಿದ್ದರು ಮತ್ತು ಅವರು ಶ್ರೀದೇವಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರಂತೆ.
undefined
'ಜಾನ್ವಿ ಆರು ವರ್ಷದವಳಿದ್ದಾಗ ಸದ್ಮಾ ಸಿನಿಮಾನೋಡಿದಳು ಮತ್ತು ಅವಳು ನನ್ನೊಂದಿಗೆ ಮೂರು ದಿನಗಳವರೆಗೆ ಮಾತನಾಡಲಿಲ್ಲ' ಎಂದು ದಿನಪತ್ರಿಕೆಯೊಂದಕ್ಕೆ ನೀಡಿದ ಹಳೆಯ ಸಂದರ್ಶನವೊಂದರಲ್ಲಿ ಶ್ರೀದೇವಿ ಹೇಳಿದ್ದರು.
undefined
'ನೀನು ಕೆಟ್ಟ ಅಮ್ಮ. ನೀವು ಅವನಿಗೆ ತುಂಬಾ ಮೋಸ ಮಾಡಿದ್ದಿಯಾ (ಕಮಲ್ ಹಾಸನ್ಪಾತ್ರ) ಎಂದು ಅವಳು ನನಗೆ ಹೇಳಿದ್ದಳು' ಎಂಬದನ್ನು ಶ್ರೀದೇವಿ ಹೇಳಿಕೊಂಡಿದ್ದರು.
undefined
ಅದೇ ಸಂದರ್ಶನದಲ್ಲಿ, ಶ್ರೀದೇವಿ ಜಾನ್ವಿಮದುವೆಯಾಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿ,ಅವರ ಮಗಳ ಆಯ್ಕೆಗೆ ಆದ್ಯತೆ ಎಂದು ಹೇಳಿದರು,
undefined
'ಪೋಷಕರಾಗಿ, ಅವಳು ಮದುವೆಯಾಗುವುದನ್ನು ನೋಡುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. ಆದರೆ ಅವಳ ಸಂತೋಷವು ಹೆಚ್ಚು ಮುಖ್ಯವಾಗಿದೆ, ಮತ್ತು ಅವಳು ನಟಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ನಾನು ಹೆಮ್ಮೆಯ ತಾಯಿಯಾಗುತ್ತೇನೆ. ನಾವು ಸ್ನೇಹಿತರಂತೆ ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ನಮ್ಮ ದಿನಚರಿ ಯಾವಾಗಲೂ ಪರಸ್ಪರ ಅವಲಂಬಿಸಿರುತ್ತದೆ' ಎಂದು ಹೇಳಿದ್ದರು.
undefined
ಆದರೆ ದುಃಖದ ಸಂಗತಿಯೆಂದರೆ ಶ್ರೀದೇವಿಗೆ ತನ್ನ ಮಗಳ ಮೊದಲ ಚಲನಚಿತ್ರ ಧಡಕ್ ನೋಡಲು ಸಾಧ್ಯವಾಗಲಿಲ್ಲ.
undefined
ದುಬೈನ ಹೋಟೆಲ್ ಬಾತ್‌ಟಬ್‌ನಲ್ಲಿ ಅಕಸ್ಮಿಕವಾಗಿ ಮುಳುಗಿ ಈ ಸೂಪರ್‌ಸ್ಟಾರ್‌ ಮೃತಪಟ್ಟಾಗ ಧಡಕ್‌ ಕೊನೆ ಹಂತದ ಶೂಟಿಂಗ್‌ನಲ್ಲಿತ್ತು.
undefined
ತಾಯಿಯ ಹಠಾತ್ ನಿಧನದ ಹೊರತಾಗಿಯೂ, ಜಾನ್ವಿ ತನ್ನ ಚೊಚ್ಚಲ ಚಿತ್ರ ಧಡಕ್ ಅನ್ನು ಸಮಯಕ್ಕೆ ಸರಿಯಾಗಿ ಮುಗಿಸಿದರು.
undefined

Latest Videos

click me!