ಬ್ರಾಂಡೆಡ್‌ ಡ್ರೆಸ್‌ ಅಲ್ಲ ಸರೋಜಿನಿ ನಗರದ ಸಲ್ವಾರ್ ‌ಇಷ್ಟ ಅಂತೆ ಈ ನಟಿಗೆ!

First Published | Feb 24, 2021, 5:17 PM IST

ಸಾರಾ ಆಲಿ ಖಾನ್‌ ಬಾಲಿವುಡ್‌ನ ಯಂಗ್‌ ನಟಿಯರಲ್ಲಿ ಸಖತ್‌ ಫೇಮಸ್‌. ಇವರು ತಮ್ಮ ಅಭಿನಯ ಹಾಗೂ ಚೆಲುವಿನಿಂದ ಎಲ್ಲರ ಮನಗೆದಿದ್ದಾರೆ. ಸ್ಟೈಲ್‌ ಹಾಗೂ ಡ್ರೆಸ್ಸಿಂಗ್‌ ಸೆನ್ಸ್‌ನಲ್ಲೂ ಎತ್ತಿದ ಕೈ ಸೈಫ್‌ ಪುತ್ರಿಯದು. ಆದರೆ ಸಾರಾಗೆ ಬ್ರಾಂಡೆಡ್‌ ಬಟ್ಟೆಗಳಿಗಿಂತ ಲೋಕಲ್‌ ಮಾರುಕಟ್ಟೆಯ ಡ್ರೆಸ್‌ ಇಷ್ಷವಂತೆ. ಇಲ್ಲಿದೆ ನೋಡಿ ವಿವರ. 

ಸಾರಾ ಕೆಲವು ದಿನಗಳ ಹಿಂದೆ ಎಲ್ಲೆ ಮ್ಯಾಗ್‌ಜೀನ್‌ನ ಕವರ್‌ ಪೇಜ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.ಯಾವಾಗಲೂ ತಮ್ಮ ಕೂಲ್‌ ಡ್ರೆಸ್ಸಿಂಗ್‌ ಸೆನ್ಸ್‌ಗೆ ಫೇಮಸ್‌ ಈ ನಟಿ.
undefined
ಬ್ರಾಂಡ್ ಕಾನ್ಷಿಯಸ್‌ ಹೊಂದಿಲ್ಲ ಮತ್ತು ಸರೋಜಿನಿ ನಗರದ ಬಟ್ಟೆಗಳನ್ನು ಇಷ್ಟ ಪಡುತ್ತಾರೆ ಎಂದು ಇತ್ತೀಚೆಗೆ ಸಾರಾ ಅಲಿ ಖಾನ್ ಬಹಿರಂಗಪಡಿಸಿದ್ದಾರೆ.
undefined
Tap to resize

'ನನಗೆ ತುಂಬಾ ಹಣ ಖರ್ಚು ಮಾಡುವುದು ಇಷ್ಟವಿಲ್ಲ. ನಾನು ಬ್ರ್ಯಾಂಡ್ ಪ್ರಜ್ಞೆ ಹೊಂದಿಲ್ಲ. ನನ್ನ ತಿಂಗಳ ಆದಾಯಕ್ಕಿಂತ ಹೆಚ್ಚು ಬೆಲೆಯ ಬ್ರಾಂಡ್‌ಗಳಿಗಿಂತ ಸರೋಜಿನಿ ನಗರದ ನನ್ನ ಸಲ್ವಾರ್ ಕಮೀಜ್‌ ಹಾಗೂ ಚಪ್ಪಲಿಗಳಿಂದ ನನಗೆ ಸಂತೋಷವಾಗುತ್ತದೆ' ಎಂದು ಸಾರಾ ತನ್ನ ಫ್ಯಾಷನ್ ಆಯ್ಕೆಗಳ ಬಗ್ಗೆ ಮಾತನಾಡುವಾಗ ಎಲ್ಲೆ ಮ್ಯಾಗ್‌ಜೀನ್‌ಗೆ ಹೇಳಿದರು.
undefined
ಬ್ರಾಂಡೆಡ್‌ ಡ್ರೆಸ್‌ ಅಲ್ಲ ಸರೋಜಿನಿ ನಗರದ ಸಲ್ವಾರ್‌ ಕಮೀಜ್‌ ಇಷ್ಟ ಅಂತೆ ಈ ನಟಿಗೆ.
undefined
ಸಾರಾ ಇಂಡಿಯನ್‌ ಎಥ್ನಿಂಕ್‌ ಔಟ್‌ಫಿಟ್‌ಗಳನ್ನು ಬಹಳ ಇಷ್ಟ ಪಡುತ್ತಾರೆ.
undefined
ಪಾಟಿಯಾಲಾ, ಪಾಲ್ಜೊ ಯಿಂದ ಹಿಡಿದು ಸಲ್ವಾರ್‌ ಕಮೀಜ್‌ಗಳಂತಹ ಡ್ರೆಸ್‌ಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ ಸಾರಾ.
undefined
ನನ್ನ ಸಂತೋಷ ಜನರು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಅವಲಂಬಿಸಿಲ್ಲ. ನಾನು ಕಾಣುವ ರೀತಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾರಾ ಹೇಳಿದ್ದಾರೆ.
undefined
ಸಾರಾ ಕೊನೆಯ ಬಾರಿಗೆ ಕೂಲಿ ನಂ1 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
undefined
ಪ್ರಸ್ತುತ ನಟಿಯ ಮಲ ತಾಯಿ ಕರೀನಾ ಕಪೂರ್‌ ತಮ್ಮ ಎರಡನೇ ಮಗುವಿನ ತಾಯಿಯಾಗಿದ್ದು ಸಾರಾ ಮತ್ತೊಮ್ಮೆ ಅಕ್ಕ ಆಗಿದ್ದಾರೆ.
undefined

Latest Videos

click me!