ನಟ ವಿಜಯ್ ಸೇತುಪತಿ ಕನ್ನಡಕ್ಕೂ ಬರಲಿದ್ದಾರೆಯೇ ಎನ್ನುವ ಕುತೂಹಲಕ್ಕೆ ಹೌದು ಎನ್ನುತ್ತಿದೆ ‘ಹೆಡ್ ಬುಷ್’ ಚಿತ್ರತಂಡ.
undefined
ಧನಂಜಯ್ ನಾಯಕನಾಗಿ ನಟಿಸುತ್ತಿರುವ, ಅಗ್ನಿ ಶ್ರೀಧರ್ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ, ಅಶು ಬೆದ್ರ ನಿರ್ಮಾಣದ, ಶೂನ್ಯ ನಿರ್ದೇಶಿಸುತ್ತಿರುವ ಈ ಚಿತ್ರಕ್ಕಾಗಿ ವಿಜಯ್ ಸೇತುಪತಿ ಅವರನ್ನು ಕರೆತರುವ ಪ್ಲಾನ್ ನಡೆಯುತ್ತಿದೆ.
undefined
ಹೊಸ ಮಾಹಿತಿ ಪ್ರಕಾರ ಡಾಲಿ ಧನಂಜಯ್ ಅವರ ಜೊತೆ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ನಟಿಸುವ ಸಾಧ್ಯತೆ ಹೆಚ್ಚಿದೆ.
undefined
ವಿಜಯ್ ಸೇತುಪತಿ ಹಾಗೂ ಡಾಲಿ ಧನಂಜಯ್ ಇಬ್ಬರೂ ಹೀರೋಗಳೇ. ಅದೇ ಸಂದರ್ಭದಲ್ಲಿ ಇಬ್ಬರು ವಿಲನ್ ಪಾತ್ರಗಳಲ್ಲಿ ತಮ್ಮದೇ ಸ್ಟೈಲಿನಲ್ಲಿ ಮಿಂಚುತ್ತಿದ್ದಾರೆ.
undefined
ಈಗ ಡಾಲಿ ಹೀರೋ ಆಗಿ, ವಿಜಯ್ ಸೇತುಪತಿ ವಿಲನ್ ಆದರೆ ‘ಹೆಡ್ ಬುಷ್’ ಚಿತ್ರದ ಕ್ರೇಜ್ ದೊಡ್ಡ ಮಟ್ಟಕ್ಕೇರುತ್ತದೆ ಎಂಬುದು ಚಿತ್ರತಂಡದ ಲೆಕ್ಕಾಚಾರ.
undefined
ಅಲ್ಲದೆ ಕತೆಗೂ ವಿಜಯ್ ಸೇತುಪತಿ ಅವರ ಪಾತ್ರ ಪೂರಕವಾಗಿದೆಯಂತೆ. ಚಿತ್ರದ ಕತೆಯನ್ನೂ ಕೇಳಿರುವ ವಿಜಯ್ ಸೇತುಪತಿ ಅವರು ‘ಕತೆ ಚೆನ್ನಾಗಿದೆ.
undefined
ಆಯಿಲ್ ಕುಮಾರ ಪಾತ್ರವನ್ನು ಬೇಕಾದರೆ ಮಾಡುತ್ತೇನೆ’ ಎಂದಿದ್ದಾರೆ ಎಂಬುದು ಸದ್ಯದ ವರ್ತಮಾನ.
undefined
ಬೆಂಗಳೂರು ಭೂಗತ ಲೋಕದ ಕತೆ ಈ ಸಿನಿಮಾದಲ್ಲಿದೆ. ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರದಲ್ಲಿ ಧನಂಜಯ್ ಅವರು ಡಾನ್ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
undefined
ಚಿತ್ರೀಕರಣ ಆರಂಭವಾಗಿರುವ ಈ ಚಿತ್ರಕ್ಕೆ ಈಗಾಗಲೇ ತಮಿಳಿನ ಮತ್ತೊಬ್ಬ ನಟ ಸ್ಯಾಂಡಿ ಜತೆಯಾಗಿದ್ದಾರೆ.
undefined