ಮಹೇಶ್ ಭಟ್‌ -ಹೇಮಾ ಮಾಲಿನಿ: ಇಸ್ಲಾಂ ಧರ್ಮ ಸ್ವೀಕರಿಸಿದ ಸೆಲೆಬ್ರೆಟಿಗಳು !

First Published | Oct 14, 2020, 7:05 PM IST

ಈ ದಿನಗಳಲ್ಲಿ ಧರ್ಮ ಸಾಕಷ್ಟು ಚರ್ಚೆಯ ವಿಷಯವಾಗಿದೆ. ಇಂಟರ್‌ನೆಟ್‌ನಲ್ಲಿ ಭಾರಿ ಗದ್ದಲ ಉಂಟುಮಾಡಿದೆ. ಆದರೆ ನಟ ನಟಿಯರು ಬೇರೆ ಧರ್ಮಕ್ಕೆ ಕನ್ವರ್ಟ್‌ ಆದ ಉದಾರಹಣೆಗಳು ಸಹ ಇದೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಸೆಲೆಬ್ರೆಟಿಗಳ ವಿವರಗಳ ಇಲ್ಲಿದೆ.

ಬಾಲಿವುಡ್ ಉದ್ಯಮದ ಅನೇಕ ಸೆಲೆಬ್ರೆಟಿಗಳು ಇಸ್ಲಾಂಗೆ ಮತಾಂತರಗೊಂಡರು. ಕೆಲವರು ನಿರ್ದಿಷ್ಟ ವ್ಯಕ್ತಿಯನ್ನು ಮದುವೆಯಾಗಲು ಮಾಡಿದರೆ, ಕೆಲವರು ಸೂಫಿಸಂ ಕಡೆಗೆ ಆಕರ್ಷಣೆಯಿಂದಾಗಿ ಕನ್ವರ್ಟ್‌ ಆಗಿದ್ದಾರೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಪ್ರಸಿದ್ಧ ವ್ಯಕ್ತಿಗಳು ಇವರು.
ಹೇಮಾ ಮಾಲಿನಿ:1975ರಲ್ಲಿ ಶೋಲೆ ಚಿತ್ರೀಕರಣದ ವೇಳೆ ಪ್ರೀತಿಯಲ್ಲಿ ಸಿಲುಕಿದ ನಂತರ ಹೇಮಾ ಮಾಲಿನಿ ಪತಿ ಧರ್ಮೇಂದ್ರ ಜೊತೆ ಇಸ್ಲಾಂಗೆ ಮತಾಂತರಗೊಂಡರು. ಧರ್ಮೇಂದ್ರರ ಪತ್ನಿ ಪ್ರಕಾಶ್ ಕೌರ್ ಅವರನ್ನು ವಿಚ್ಛೇದನ ನೀಡಲು ನಿರಾಕರಿಸಿದ್ದರಿಂದ ಅವರು ಇಸ್ಲಾಂಗೆ ಮತಾಂತರಗೊಳ್ಳಲು ನಿರ್ಧರಿಸಿದರು.
Tap to resize

ಧರ್ಮೇಂದ್ರ :ಬಾಲಿವುಡ್‌ಗೆ ಬರುವ ಮೊದಲೇ ಧರ್ಮೇಂದ್ರ ಮದುವೆಯಾಗಿದ್ದರು. ನಂತರ ಹೇಮಾ ಮಾಲಿನಿಯನ್ನು ಪ್ರೀತಿಸಿದ ಧರ್ಮೇಂದ್ರ, ಇಬ್ಬರು ಒಂದಾಗಲು ಇಸ್ಲಾಂಗೆ ಮತಾಂತರಗೊಂಡು ದಿಲಾವರ್ ಖಾನ್ ಆದರು. ಇಸ್ಲಾಂಗೆ ಮತಾಂತರಗೊಂಡರೂ ಅದನ್ನು ಅಭ್ಯಾಸ ಮಾಡುವುದಿಲ್ಲ ಎಂದು ಮೂಲಗಳು ಹೇಳುತ್ತವೆ.
ಮಹೇಶ್ ಭಟ್:ಜನಪ್ರಿಯ ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ,ನಟಿ ಆಲಿಯಾ ಭಟ್ ತಂದೆ, ಸೋನಿ ರಜ್ದಾನ್ ಅವರನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡರು. ವರದಿಗಳ ಪ್ರಕಾರ, ಮಹೇಶ್ ಭಟ್ ಇಸ್ಲಾಂ ಧರ್ಮವನ್ನು ಆಚರಿಸುತ್ತಿಲ್ಲ. ಮಹೇಶ್ ಭಟ್ ತಂದೆ ಹಿಂದೂ ಹಾಗೂ ತಾಯಿ ಗುಜರಾತಿ ಮುಸ್ಲಿಂ.
ಅಮೃತಾ ಸಿಂಗ್‌ :80 ಮತ್ತು 90 ರ ದಶಕಗಳ ಜನಪ್ರಿಯ ಬಾಲಿವುಡ್‌ನಟಿ ಸಿಖ್ ಧರ್ಮಕ್ಕೆ ಸೇರಿದವರು. ನಂತರ ಇಸ್ಲಾಂಗೆ ಮತಾಂತರಗೊಂಡರು ಮತ್ತು ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು.
ಶರ್ಮೀಳಾ ಟ್ಯಾಗೋರ್‌:ನಟಿ ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ಫೇಮಸ್‌. ಅವರು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಪ್ರಸಿದ್ಧ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಖಾನ್ ಪಟೌಡಿ ಅವರನ್ನು ಪ್ರೀತಿಸಿ, ಅವರನ್ನು ಮದುವೆಯಾಗಲು ಶರ್ಮಿಳಾ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಮತಾಂತರಗೊಂಡು ಆಯೆಷಾ ಸುಲ್ತಾನ ಎಂದು ಹೆಸರು ಬದಲಾಯಿಸಿಕೊಂಡರು.
ಎ ಆರ್ ರೆಹಮಾನ್ :ಹಿಂದೂ ಕುಟುಂಬದಲ್ಲಿ ಜನಿಸಿದ ಎ ಎಸ್ ದಿಲೀಪ್ ಕುಮಾರ್ ನಂತರ ಅವರು ಇಸ್ಲಾಂಗೆ ಮತಾಂತರಗೊಂಡರು.ಹೆಸರನ್ನು ಎ. ಆರ್. ರಹಮಾನ್ (ಅಲ್ಲಾ ರಕ್ಕಾ ರಹಮಾನ್) ಎಂದು ಬದಲಾಯಿಸಿದರು. ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಸಂಗೀತ ಸಂಯೋಜಕ ಮತ್ತು ಗಾಯಕ 23ನೇ ವಯಸ್ಸಿನಲ್ಲಿ,ತಮ್ಮ ಕುಟುಂಬದೊಂದಿಗೆ ಇಸ್ಲಾಂ ಧರ್ಮಕ್ಕೆ ಹೋದರು. 'ಇದು ನಾಟಕವಲ್ಲ, ನನ್ನ ಕುಟುಂಬವು ಪ್ರತ್ಯೇಕಗೊಳಿಸಲಾಗಿತ್ತು ಮತ್ತು ಸೂಫಿಸಂ ಪರಿಕಲ್ಪನೆಗಳು ನನ್ನ ಮೇಲೆ ಪ್ರಭಾವ ಬೀರಿದಾಗ ನಾನು ಇಸ್ಲಾಂ ಧರ್ಮವನ್ನು ನಂಬಲು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ ರೆಹಮಾನ್‌.
ಯುವನ್ ಶಂಕರ್ ರಾಜ:ಅವರು ಸೌಂಡ್‌ ಟ್ರಾಕ್‌ ಕಂಪೋಸರ್‌ ಮತ್ತು ಹಾಡು-ಬರಹಗಾರಾಗಿರುವ ಯುವನ್‌ ಮುಖ್ಯವಾಗಿ ತಮಿಳು ಚಿತ್ರಗಳಿಗೆ ಸಂಗೀತ ನೀಡುತ್ತಾರೆ. ಎರಡೂವರೆ ವರ್ಷಗಳ ಕಾಲ ಖುರಾನ್ ಅನ್ನು ಓದಿದ ವರು ಅದರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಭಾವಿಸಿ, ತಾಯಿಯ ಮರಣದ ನಂತರ ಅವರು ಇಸ್ಲಾಂಗೆ ಮತಾಂತರಗೊಂಡರು.

Latest Videos

click me!