ಮೇಲೆ, ಕೆಳಗೆ, ಉಬ್ಬು ತಗ್ಗು ಎಲ್ಲಾ ವೀಡಿಯೋ ತೆಗೆದಿದ್ದ; ಪಬ್ಲಿಕ್ ಪ್ಲೇಸ್‌ನಲ್ಲಾದ ಕಿರುಕುಳದ ಬಗ್ಗೆ ಮಾತನಾಡಿದ ನಟಿ!

Published : Oct 03, 2023, 03:20 PM IST

ಸಿನಿಮಾ ನಟ-ನಟಿಯರಿಗೆ ಸಾರ್ವಜನಿಕ ಪ್ರದೇಶದಲ್ಲಿ ಕಿರುಕುಳ ಆಗುವುದು ಹೊಸದೇನಲ್ಲ. ಫ್ಯಾನ್ಸ್ ಎಂದು ಸುತ್ತುವರೆಯುವ ಮಂದಿ ಗುಂಪಿನಲ್ಲೇ ಮೈ ಮೇಲೆ ಕೈ ಹಾಕೋದು, ಅಸಭ್ಯ ಫೋಟೋ, ವಿಡಿಯೋ ತೆಗೆಯೋದು ಮಾಡಿರ್ತಾರೆ. ಹಾಗೆಯೇ ರೆಜಿನಾ ಕ್ಯಾಸಂಡ್ರಾ ಪಬ್ಲಿಕ್ ಪ್ಲೇಸ್‌ನಲ್ಲಿ ತಮಗಾದ ಕೆಟ್ಟ ಅನುಭವ ಹೇಳ್ಕೊಂಡಿದ್ದಾರೆ.

PREV
17
ಮೇಲೆ, ಕೆಳಗೆ, ಉಬ್ಬು ತಗ್ಗು ಎಲ್ಲಾ ವೀಡಿಯೋ ತೆಗೆದಿದ್ದ; ಪಬ್ಲಿಕ್ ಪ್ಲೇಸ್‌ನಲ್ಲಾದ ಕಿರುಕುಳದ ಬಗ್ಗೆ ಮಾತನಾಡಿದ ನಟಿ!

ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ಚೇತನ್‌ ಜೊತೆ ನಟಿಸಿದ್ದ ರೆಜಿನಾ ಕ್ಯಾಸಂಡ್ರಾ ತಮ್ಮ ಬೋಲ್ಡ್‌ ಸ್ಟೇಟ್‌ಮೆಂಟ್‌ಗಳಿಂದಲೇ ಆಗಾಗ ಸುದ್ದಿಯಲ್ಲಿರುತ್ತಾರೆ. ರಿಲೇಶನ್‌ ಶಿಪ್‌, ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡಿ ಟ್ರೋಲ್‌ಗೆ ಗುರಿಯಾಗುತ್ತಾರೆ. ಆದರೆ ಈ ಬಾರಿ ರೆಜಿನಾ ಸಾರ್ವಜನಿಕ ಪ್ರದೇಶದಲ್ಲಿ ತಮಗಾದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. 

27

ಇತ್ತೀಚಿನ ಸಂದರ್ಶನವೊಂದರಲ್ಲಿ ರೆಜಿನಾ, ಪಬ್ಲಿಕ್ ಪ್ಲೇಸ್‌ನಲ್ಲಿ ತನಗೆ ಸಂಭವಿಸಿದ ಕೆಟ್ಟ ವಿಷಯದ ಬಗ್ಗೆ ಮಾತನಾಡಿದ್ದಾರೆ. 'ನಾನು ನಡೆಯುವಾಗ ಒಬ್ಬ ವ್ಯಕ್ತಿ ನನ್ನನ್ನು ಹಿಂಬಾಲಿಸಿ ವೀಡಿಯೊ ಮಾಡುತ್ತಿದ್ದ. ನಾನು ಆರಂಭದಲ್ಲಿ ಇದನ್ನು ಗಮನಿಸಲಿಲ್ಲ. ನಂತರ ನಾನು ಇದನ್ನು ಗಮನಿಸಿದಾಗ ನೇರವಾಗಿ ಹೋಗಿ ಅವನ ಮೊಬೈಲ್ ಹಿಡಿದೆ' ಎಂದು ರೆಜಿನಾ ಹೇಳಿದ್ದಾರೆ.

37

'ಈ ಸಂದರ್ಭದಲ್ಲಿ ವ್ಯಕ್ತಿಯ ಬಳಿ ನಾನು ಯಾಕೆ ನೀವು ನನ್ನ ವೀಡಿಯೊಗಳನ್ನ ತೆಗೆದುಕೊಳ್ಳುತ್ತಿದ್ದೀರಿ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ ನಾನು ಹಾಗೆ ಮಾಡಿಲ್ಲ ಎಂದ. ನಾನು ಆತ ಮೊಬೈಲ್‌ ತೆಗೆದು ಗ್ಯಾಲರಿ ನೋಡಿದಾಗ ಆತ ನಾನು ನಡೆಯುವಾಗ ನನ್ನ ಅಶ್ಲೀಲ ಭಂಗಿಗಳನ್ನು ಸೆರೆಹಿಡಿದಿದ್ದ. ಆ ನಂತರ ಆ ಬಗ್ಗೆ ಕ್ಷಮೆಯಾಚಿಸಿದ' ಎಂದು ನಟಿ ತಿಳಿಸಿದ್ದಾರೆ.

47

ಎಜಿಎಸ್ ಎಂಟರ್‌ಟೈನ್‌ಮೆಂಟ್‌ನ ಮುಂಬರುವ ಯೋಜನೆಗೆ ಕಂಜ್ಯೂರಿಂಗ್ ಕಣ್ಣಪ್ಪನ್ ಎಂದು ಹೆಸರಿಡಲಾಗಿದೆ. ಹೊಸಬರಾದ ಸೆಲ್ವಿನ್ ರಾಜ್ ಕ್ಸೇವಿಯರ್ ನಿರ್ದೇಶನದ ಈ ಚಿತ್ರದಲ್ಲಿ ರೆಜಿನಾ ಕಸಾಂಡ್ರಾ ಮತ್ತು ಸತೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ನಟಿ ಇತ್ತೀಚಿಗೆ ಸೆಕ್ಷನ್‌ 108, ಫ್ಲ್ಯಾಶ್‌ಬ್ಯಾಕ್‌, ರಾಕೆಟ್ ಬಾಯ್ಸ್‌ 2 ಮೊದಲಾದ ಸಿನಿಮಾ ಹಾಗೂ ವೆಬ್‌ಸಿರೀಸ್‌ನಲ್ಲಿ ನಟಿಸಿದ್ದಾರೆ. 

57

2005ರಿಂದಲೂ ಸಿನಿಮಾ ರಂಗದಲ್ಲಿರುವ ತಮಿಳು-ತೆಲುಗು ಚಿತ್ರರಂಗದ ಈ ಖ್ಯಾತ ನಟಿ ಇತ್ತೀಚಿಗೆ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದರು. ಮೀ ಟೂ ಮಾತ್ರವಲ್ಲ ಕಾಸ್ಟಿಂಗ್‌ ಕೌಚ್‌ ಎನ್ನುವುದು ಕೂಡ ಸಿನಿಮಾ ರಂಗದಲ್ಲಿ ವ್ಯಾಪಕವಾಗಿದೆ. ಸಿನಿಮಾ ರಂಗಕ್ಕೆ ಕಾಲಿಡುವ ಆರಂಭದ ದಿನಗಳಲ್ಲಿ ನನಗೂ ಇದರ ಅನುಭವ ಆಗಿತ್ತು ಎಂದು ರೆಜಿನಾ ಹೇಳಿಕೊಂಡಿದ್ದರು.

67

ಈ ಹಿಂದೆ ಸೆಕ್ಸ್‌ ಬಗ್ಗೆಯೂ ನಟಿ ಬೋಲ್ಡ್ ಆಗಿ ಮಾತನಾಡಿದ್ದರು. 'ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. ಅದನ್ನು ಇಲ್ಲಿ ಹೇಳುವುದೋ ಬೇಡವೋ ಅಂತ ಗೊತ್ತಾಗ್ತಿಲ್ಲ' ಅಂತ ಹೇಳಿ ಸ್ವಲ್ಪ ಹೊತ್ತು ಯೋಚನೆ ಮಾಡಿದರು, ಆಮೇಲೆ ಧೈರ್ಯ ಮಾಡಿ ಹೇಳಿಯೇ ಬಿಟ್ಟರು. 'ಹುಡುಗರ ಸೆಕ್ಸ್ ಸಾಮರ್ಥ್ಯ ಮಾಗಿ ಥರ. ಎರಡೇ ನಿಮಿಷದಲ್ಲಿ ಆಗಿ ಬಿಡುತ್ತೆ' ಅಂದು ಬಿಟ್ಟರು! ಆಮೇಲೆ ತಮ್ಮ ಜೋಕಿಗೆ ತಾವೇ ನಕ್ಕರು. 

77

ಸೋಷಿಯಲ್ ಮೀಡಿಯಾದಲ್ಲಂತೂ ಈಕೆಯ ಮಾತು ಸಖತ್ ಜೋರಾಗಿಯೇ ಚರ್ಚೆಗೆ ಕಾರಣವಾಯ್ತು. ಇದರ ಬಗ್ಗೆ ನಟಿಯಂತೂ ತಲೆ ಕೆಡಿಸಿಕೊಳ್ಳಲ್ಲಿಲ್ಲ. ಅವರು ತಾನೊಂದು ಜೋಕ್ ಹೇಳಿದ್ದಷ್ಟೇ ಅಂದುಕೊಂಡು ಸುಮ್ಮನಾಗಿದ್ದರು. ಆದರೆ ನೆಟಿಜನ್ಸ್ ಮಾತ್ರ, 'ನಿಮಗಿನ್ನೂ ಮದ್ವೆ ಆಗಿಲ್ಲ ಅಲ್ವಾ, ನಿಮಗಿದು ಹೇಗೆ ಗೊತ್ತು?' ಅಂತೆಲ್ಲ ತಮ್ಮ ಅತಿ ಜಾಣತನ ಪ್ರದರ್ಶನ ಮಾಡುವ ಪ್ರಶ್ನೆ ಕೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories