ಗಾಯಕಿ ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಸಿಂಗ್ ಸಂಬಂಧದಲ್ಲಿ ಬಿರುಕು?

Published : Jun 08, 2023, 03:31 PM IST

ಗಾಯಕಿ ನೇಹಾ ಕಕ್ಕರ್ (Neha Kakkar)  ಜೂನ್ 6 ರಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ  ಸಂದರ್ಭದಲ್ಲಿ, ನೇಹಾ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಪಾರ್ಟಿಯನ್ನು ಆಯೋಜಿಸಿದ್ದರು, ಇದರಲ್ಲಿ ಕ್ರಿಕೆಟಿಗ  ಯುಜ್ವೇಂದ್ರ ಮತ್ತು ಅವರ ಪತ್ನಿ ಧನಶ್ರೀ ಭಾಗವಹಿಸಿದ್ದರು. ಆದರೆ, ನೇಹಾ ಅವರ ಪತಿ ರೋಹನ್‌ಪ್ರೀತ್ ಸಿಂಗ್ ಎಲ್ಲಿಯೂ ಕಾಣಿಸಲಿಲ್ಲ.  ಇದು  ಹಲವು ವದಂತಿಗಳಿಗೆ ಕಾರಣವಾಗಿದೆ?  ಅಷ್ಷಕ್ಕೂ ಯಾವುದು ನಿಜ ಯಾವುದು ಸುಳ್ಳು ಎನ್ನುವುದು ಈ ದಂಪತಿಗಳೇ ಹೇಳಬೇಕಾಗಿದೆ.   

PREV
18
ಗಾಯಕಿ ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಸಿಂಗ್ ಸಂಬಂಧದಲ್ಲಿ ಬಿರುಕು?

ರೋಹನ್‌ಪ್ರೀತ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ನೇಹಾಗೆ ವಿಶ್ ಮಾಡಿಲ್ಲ. ಈಗ ಇದನ್ನೆಲ್ಲಾ ನೋಡಿದ ಅಭಿಮಾನಿಗಳು ನೇಹಾ ಮತ್ತು ರೋಹನ್‌ಪ್ರೀತ್ ಸಂಬಂಧದಲ್ಲಿ ಬಿರುಕು ಮೂಡಿದೆ ಮತ್ತು ಇದರಿಂದಾಗಿ ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ ಎನ್ನುತ್ತಿದ್ದಾರೆ.

28

ನೇಹಾ ಹಂಚಿಕೊಂಡ ಹುಟ್ಟುಹಬ್ಬದ ಫೋಟೋಗಳಲ್ಲಿ, ನೇಹಾ ಅವರ ಪೋಷಕರು ಸೇರಿದಂತೆ ಇಡೀ ಕಕ್ಕರ್ ಕುಟುಂಬವು ಗೋಚರಿಸುತ್ತದೆ. ಇದಲ್ಲದೇ ನೇಹಾ ಗೆಳೆಯರು ಜೊತೆಯಲ್ಲಿದ್ದರು

38

ಆದರೆ ನೇಹಾ ಅವರ ಫೋಟೋಗಳಲ್ಲಿ ಪತಿ ರೋಹನ್‌ಪ್ರೀತ್ ಅವರನ್ನು ಕಾಣುತ್ತಿಲ್ಲ. ನೇಹಾ ಅವರ ಅಂತಹ ವಿಶೇಷ ದಿನದಂದು ಅವರ ಪತಿ ಎಲ್ಲಿದ್ದರು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಉದ್ಭವಿಸುತ್ತಿದೆ.

48

ರೋಹನ್‌ಪ್ರೀತ್  ಅವರು ತುಂಬಾ ಬ್ಯುಸಿಯಾಗಿದ್ದಾರೋ ಅಥವಾ ಅವರ ಪತ್ನಿಯ ಹುಟ್ಟುಹಬ್ಬದ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಸಮಯ ಸಿಗಲಿಲ್ಲವೋ ಅಥವಾ ಉದ್ದೇಶಪೂರ್ವಕವಾಗಿ ನೇಹಾಗೆ ವಿಶ್ ಮಾಡಿಲ್ಲ ಎಂದು ಜನರಲ್ಲಿ ಕುತೂಹಲ ಹುಟ್ಟುಹಾಕಿದೆ.


 

58

ಸೋಶಿಯಲ್‌ ಮೀಡಿಯಾ ಬಳಬಳಕೆದಾರರು ರೋಹನ್ ಅವರ ಈ ನಡವಳಿಕೆಯನ್ನು ಪಬ್ಲಿಸಿಟಿ ಸಂಟ್‌ ಎಂದಿದ್ದಾರೆ.  ನೇಹಾ ಮತ್ತು ರೋಹನ್ ಪ್ರಚಾರಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ.

68

ವಾಸ್ತವವಾಗಿ ನೇಹಾ ಕೆಲವು ವರ್ಷಗಳ ಹಿಂದೆ ಹಾಡಿನ ಪ್ರಚಾರಕ್ಕಾಗಿ  ತನ್ನ ಬೇಬಿ ಬಂಪ್ ಅನ್ನು ತೋರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಅದರ ನಂತರ, ಅವರು 'ಇಂಡಿಯನ್ ಐಡಲ್' ನಲ್ಲಿ ಆದಿತ್ಯ ನಾರಾಯಣ್ ಅವರೊಂದಿಗೆ ಮದುವೆಯ ವದಂತಿಯನ್ನು ಸಹ ಎತ್ತಿದರು.

78

ಈ  ಎಲ್ಲಾ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಪ್ರಚಾರದ ಸ್ಟಂಟ್‌ಗಾಗಿ ಅವಳು ರೋಹನ್‌ನಿಂದ ಬೇರ್ಪಡುವ ವದಂತಿಯನ್ನು ಸಹ ಹರಡಬಹುದು ಎಂದು ಜನರು ಹೇಳುತ್ತಾರೆ. ಆದರೆ, ಈ ವಿಚಾರದಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆ ಎನ್ನುವುದನ್ನು ಈಗ ನೇಹಾ ಮತ್ತು ರೋಹನ್ ಮಾತ್ರ ಹೇಳಬಲ್ಲರು.


 

88

ನೇಹಾ 2020 ರಲ್ಲಿ ರೋಹನ್‌ಪ್ರೀತ್ ಸಿಂಗ್ ಅವರನ್ನು ವಿವಾಹವಾದರು  ಹಾಡಿನ ಚಿತ್ರೀಕರಣದ ವೇಳೆ ಇಬ್ಬರೂ ಭೇಟಿಯಾಗಿದ್ದರು. ಕೆಲವು ತಿಂಗಳ ಸ್ನೇಹದ ನಂತರ, ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಮದುವೆಯಾದರು.

Read more Photos on
click me!

Recommended Stories