ಬೋಲ್ಡ್ ಫೋಟೊ ಶೂಟ್ ಮೂಲಕ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ ಹರ್ಭಜನ್ ಸಿಂಗ್ ಪತ್ನಿ

First Published | Nov 28, 2024, 5:57 PM IST

ಭಜ್ಜಿ ಪತ್ನಿ ಗೀತಾ ಬಸ್ರಾ ಬೋಲ್ಡ್ ಫೋಟೋಶೂಟ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 40 ನೇ ವಯಸ್ಸಿನಲ್ಲಿ, ಈ ನಟಿ ಕಿಲ್ಲರ್ ಲುಕ್ ನೋಡಿ ಅಭಿಮಾನಿಗಳು ವಾರೆ ವಾಹ್ ಅನ್ನುತ್ತಿದ್ದಾರೆ. 
 

ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಅಂದರೆ ಭಜ್ಜಿ ಯಾರಿಗೆ ಗೊತ್ತಿಲ್ಲ? ಅವರು ಕ್ರಿಕೆಟ್ ಪಿಚ್ನಲ್ಲಿ ದೀರ್ಘಕಾಲದವರೆಗೆ ತಮ್ಮ ಅದ್ಭುತ ಆಟದಿಂದ ಎಲ್ಲರ ಹೃದಯವನ್ನು ಗೆದ್ದಿದ್ದರು, ಈಗ ಅವರು ಮಾತ್ರವಲ್ಲದೆ ಅವರ ಪತ್ನಿ ಗೀತಾ ಬಸ್ರಾ ಕೂಡ ಸುದ್ದಿಯಲ್ಲಿದ್ದಾರೆ. ಅವರು ತಮ್ಮ 40 ನೇ ವಯಸ್ಸಿನಲ್ಲಿ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದು, ಅವರ ಕಿಲ್ಲರ್ ಲುಕ್ ಗೆ ಅಭಿಮಾನಿಗಳು ಸೋತಿದ್ದಾರೆ. 
 

ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದ ಗೀತಾ (Geeta Basra), ಇದೀಗ ಶರ್ಟ್ ಬಟನ್ ತೆರೆದು ಫೋಟೋಶೂಟ್ ಮಾಡಿಸಿದ್ದಾರೆ. ಗೀತಾ ಸ್ಟೈಲ್ ನೋಡಿದ್ರೆ, ಇವರು ಇಬ್ಬರು ಮಕ್ಕಳ ತಾಯಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅವಳ ಈ ಲುಕ್ ಮುಂದೆ, ಬಾಲಿವುಡ್ ನ ಅನೇಕ ಸುಂದರಿಯರು ಸೋಲುತ್ತಾರೆ. ಅಷ್ಟೊಂದು ಸುಂದರವಾಗಿ ಕಾಣಿಸ್ತಿದ್ದಾರೆ ನಟಿ. 
 

Tap to resize

ಶರ್ಟ್ ನೊಂದಿಗೆ ಸಣ್ಣ ಶಾರ್ಟ್ಸ್
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಗೀತಾ ಬಿಳಿ ಬಣ್ಣದ ಶರ್ಟ್ ಧರಿಸಿದ್ದು, ಅದರ ಜೊತೆಗೆ ಡೆನಿಮ್ ಶಾರ್ಟ್ಸ್ ಧರಿಸಿದ್ದಾರೆ. ಅದರ ಉದ್ದವು ಶರ್ಟ್ ನಷ್ಟೇ ದೊಡ್ಡದಾಗಿದೆ. ಇದರಿಂದ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.   ಇವರ ಕಿಲ್ಲರ್ ಲುಕ್ ಗೆ ಜನ ಮನಸೋತಿದ್ದಾರೆ. 

ಶರ್ಟ್ ಅನ್ ಬಟನ್ ಮಾಡುವ ಮೂಲಕ ಗ್ಲಾಮರಸ್ ಟಚ್
ಅಷ್ಟೇ ಅಲ್ಲ, ಗೀತಾ ತನ್ನ ಶರ್ಟ್ ನ ಮಧ್ಯದಲ್ಲಿ ಕೇವಲ ಎರಡು ಬಟನ್ ಗಳನ್ನು ಹಾಕಿದ್ದಾಳೆ. ಡೀಪ್ ವಿ ನೆಕ್ ಶರ್ಟ್ ನಿಂದ ಗೀತಾ ಮತ್ತಷ್ಟು ಹಾಟ್ ಆಗಿ ಕಾಣಿಸುತ್ತಿದ್ದಾರೆ.  ಶರ್ಟ್ ನೊಂದಿಗೆ ಶಾರ್ಟ್ಸ್ ಧರಿಸಿ, ವಿವಿಧ ಪೋಸ್ ಕೊಟ್ಟಿದ್ದಾರೆ. 
 

ಗೀತಾ ಯಾವುದೇ ಆಭರಣಗಳಿಲ್ಲದೆ ನಿರಾಭರಣ ಸುಂದರಿಯಾಗಿ ಕಾಣಿಸ್ತಾ ಇದ್ದಾರೆ. ಆದರೆ  ಮೂಗುತ್ತಿ ಹಾಗೂ ಉಂಗುರ  ಧರಿಸೋದನ್ನ ಮರೆತಿಲ್ಲ. ಇದರಿಂದ ಅವರ ಲುಕ್ ಹೈಲೈಟ್ ಆಗಿದೆ. ಜೊತೆಗೆ ಲೈಟ್ ಮೇಕಪ್ ಹಾಗೂ ಗುಂಗುರು ಕೂದಲು ಗ್ಲಾಮರನ್ನು ಮತ್ತಷ್ಟು ಹೆಚ್ಚಿಸಿದೆ. 
 

ಅಭಿಮಾನಿಗಳು ಗೀತಾ ಅವರ ಫೋಟೋಗಳೀಗೆ ಪ್ರ್ರೀತಿಯ ಮಳೆ ಸುರಿಸುತ್ತಿದ್ದಾರೆ. ಒಬ್ಬರು ಪ್ಯೂರ್ ಬ್ಯೂಟಿ ಎಂದರೆ, ಇನ್ನೊಬ್ಬರು ನಿಮ್ಮ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸೋಕೆ ಸಾಧ್ಯ ಇಲ್ಲ ಎಂದಿದ್ದಾರೆ.  ಮತ್ತೆ ಕೆಲವರು ಇವರು ನೆಪೋ ಕಿಡ್ ಗಳಿಗಿಂತ ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ ಎಂದಿದ್ದಾರೆ. 
 

Latest Videos

click me!