ಚಿಕ್ಕ ಸ್ಕರ್ಟ್‌ನಲ್ಲಿ ಫೋಸ್ ನೀಡಿದ ಗಿಚ್ಚಿ ಗಿಲಿಗಿಲಿ ಜಾನ್ವಿ; ಸೆಕೆಂಡ್ ಸೋನು ಗೌಡ ಬಂದ್ಲು ಎಂದ ನೆಟ್ಟಿಗರು

First Published | Oct 17, 2023, 5:46 PM IST

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಕಾರ್ತಿಕ್‌. ಯಾವಾಗ್ಲೂ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ತಾರೆ. ಸದ್ಯ ಮೊಣಕಾಲು ಮೇಲಿನ ಚಿಕ್ಕದಾಗಿರುವ ವೈಟ್‌ ಸ್ಕರ್ಟ್ ಹಾಗೂ ಬ್ಕ್ಯಾಕ್ ಟಾಪ್ ಹಾಕ್ಕೊಂಡು ಜಾಹ್ನವಿ ಫೋಸ್‌ ಕೊಟ್ಟಿದ್ದಾರೆ. ನೆಟ್ಟಿಗರು ಸೆಕೆಂಡ್ ಸೋನು ಬಂದ್ಲು ಎಂದು ಕಾಮೆಂಟ್ ಮಾಡಿದ್ದಾರೆ.

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಕಾರ್ತಿಕ್‌. ಯಾವಾಗ್ಲೂ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ತಾರೆ. ಡಿಫರೆಂಟ್‌ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರ್ತಾರೆ. ಹಾಗೆಯೇ ಇತ್ತೀಚಿಗೆ ಅವ್ರು ಮಾಡಿರೋ ಫೋಟೋ ಶೂಟ್ ಸಖತ್ ವೈರಲ್ ಆಗಿದೆ.

ಮೊಣಕಾಲು ಮೇಲಿನ ಚಿಕ್ಕದಾಗಿರುವ ವೈಟ್‌ ಸ್ಕರ್ಟ್ ಹಾಗೂ ಬ್ಕ್ಯಾಕ್ ಟಾಪ್ ಹಾಕ್ಕೊಂಡು ಜಾಹ್ನವಿ ಫೋಸ್‌ ಕೊಟ್ಟಿದ್ದಾರೆ. ಸಖತ್‌ ಹಾಟ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಯೂಟಿಫುಲ್‌, ಸೂಪರ್, ಹಾಟಿ, ಸ್ವೀಟ್ ಬೇಬಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

Latest Videos


ಮತ್ತೊಬ್ಬರು, ಸೆಕೆಂಡ್ ಸೋನು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಸ್ಪಲ್ಪ ಸ್ಪಲ್ಪನೇ ಹಾಕೋ ಡ್ರೆಸ್ ಮೇಲಕ್ಕೆ ಹೋಗ್ತಿದ್ಯಲ್ಲಾ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಇದೇ ತರ ಫೋಟೋಸ್ ಪೋಸ್ಟ್ ಮಾಡ್ತಾ ಇರಿ' ಎಂದಿದ್ದಾರೆ.

ಟಿವಿ ವಾಹಿನಿಯ ನಿರೂಪಕಿಯಾಗಿದ್ದ ಜಾನ್ವಿ ಇಂದು ಸ್ಯಾಂಡಲ್‌ವುಡ್‌ ನಟಿ. ಕಿರುತೆರೆಯಲ್ಲಿ ಗಿಚ್ಚಿ ಗಿಲಿಗಿಲಿ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ರನ್ನರ್‌ಅಪ್‌ ಆಗಿದ್ದ ಜಾನ್ವಿ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ

ನಿರೂಪಕಿಯಾಗಿ ಬಳಿಕ ಕಿರುತೆರೆಗೆ ಕಾಲಿಟ್ಟು ಈಗ ಸ್ಯಾಂಡಲ್‌ವುಡ್‌ ನಟಿಯಾಗುವ ಹಂತಕ್ಕೆ ಬೆಳೆದಿದ್ದಾರೆ ನಟಿ ಜಾನ್ವಿ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಜಾನ್ವಿ ಕಿರುತರೆಗೆ ಪ್ರವೇಶಿಸಿದ್ದರು.
 

ಇತ್ತೀಚೆಗೆ ಅವರು ಮಾಡಿಸಿಕೊಂಡಿರುವ ಎರಡು ಫೋಟೋಶೂಟ್‌ಗಳು ಭಾರೀ ವೈರಲ್‌ ಆಗಿದೆ. ಅದಕ್ಕೆ ಕಾರಣ ಎರಡೂ ಫೋಟೋಶೂಟ್‌ಗಳಲ್ಲಿ ಜಾನ್ವಿ ಬಹಳ ಮುದ್ದಾಗಿ ಕಂಡಿದ್ದಾರೆ. ಬಿಳಿ ಕುದುರೆ ಹಾಗೂ ಕರಿಕುದುರೆಗಳ ಜೊತೆ ಅವರು ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಇನ್ಸ್‌ಟಾಗ್ರಾಮ್‌ನಲ್ಲಿ ಅವರ ಚಿತ್ರಗಳನ್ನು ಬಹಳ ಮೆಚ್ಚಿಕೊಂಡಿದ್ದಾರೆ.

ನನ್ನಮ್ಮ ಸೂಪರ್‌ಸ್ಟಾರ್‌, ಗಿಚ್ಚಿ ಗಿಲಿಗಿಲಿ ಸೀಸನ್‌ 2ನಲ್ಲಿ ಭಾಗವಹಿಸಿದ್ದ ಜಾನ್ವಿ ಈಗ ಹೊಸ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಸಿನಿಮಾದ ಹೆಸರು ಕೂಡ ಅನೌನ್ಸ್‌ ಆಗಿದೆ. ವೈಯಕ್ತಿಕ ಜೀವನದಲ್ಲಿ ಕೊಂಚ ಹಿನ್ನಡೆ ಕಂಡು ವಿಚ್ಛೇದನಕ್ಕೆ ಒಳಗಾಗಿರುವ ಜಾನ್ವಿ, ಅಧಿಪತ್ರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬರಲು ಅಣಿಯಾಗಿದ್ದಾರೆ.

ಅಧಿಪತ್ರ ಚಿತ್ರದಲ್ಲಿ ಜಾನ್ವಿ ಅವರು ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ ಅವರಿಗೆ ನಾಯಕಿಯಾಗಲಿದ್ದಾರೆ. ಇತ್ತೀಚೆಗೆ ಚಿತ್ರದ ಮಹೂರ್ತ ಕೂಡ ನೆರವೇರಿದೆ.ಇತ್ತೀಚೆಗೆ ರೂಪೇಶ್‌ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಅಧಿಪತ್ರ ಸಿನಿಮಾ ಸೆಟ್ಟೇರಿತ್ತು. ಈ ವೇಳೆ ಹೀರೋಯಿನ್‌ ಆಗಿ ಜಾನ್ವಿ ಹೆಸರು ಘೋಷಿಸಲಾಗಿತ್ತು.

click me!