ಆರ್ಯನ್ ಶಾರುಖ್ ಧರ್ಮವನ್ನು ಅನುಸರಿಸುತ್ತಾನೆ ಎಂದಿದ್ದ ಗೌರಿ. ಕಾರಣ ಇಲ್ಲಿದೆ

Suvarna News   | Asianet News
Published : Oct 15, 2021, 04:25 PM IST

ಗೌರಿ ಖಾನ್ (Gauri Khan)  ಒಮ್ಮೆ ತಮ್ಮ ಮಗ ಆರ್ಯನ್ ಖಾನ್  (Aaryan Khan)  ಶಾರುಖ್‌ ಖಾನ್‌ (Shahrukh Khan) ಬಗ್ಗೆ ತುಂಬಾ ಪ್ರೀತಿ ಹೊಂದಿದ್ದಾನೆ. ಅದ್ದರಿಂದ ಅವನು ಶಾರುಖ್‌ ಧರ್ಮವನ್ನು ಫಾಲೋ ಮಾಡುತ್ತಾನೆ ಎಂದು ಹೇಳಿದ್ದರು.  ಹೆಚ್ಚಿನ ವಿವರಗಳನ್ನು ಓದಿ.  

PREV
18
ಆರ್ಯನ್ ಶಾರುಖ್  ಧರ್ಮವನ್ನು ಅನುಸರಿಸುತ್ತಾನೆ ಎಂದಿದ್ದ ಗೌರಿ. ಕಾರಣ ಇಲ್ಲಿದೆ

ಮಾದಕ ದ್ರವ್ಯ ಪ್ರಕರಣಕ್ಕೆ (Narcotic Drug Case) ಸಂಬಂಧಿಸಿದಂತೆ ಎನ್‌ಸಿಬಿಯಿಂದ (NCB) ಆರೆಸ್ಟ್‌ ಆಗಿರುವ ಆರ್ಯನ್ ಖಾನ್ ಪ್ರಸ್ತುತ ಆರ್ಥರ್ ರಸ್ತೆ ಜೈಲಿನಲ್ಲಿದ್ದಾನೆ. ಮುಂಬೈನ (Mumbai) ಕರಾವಳಿಯಲ್ಲಿ ಕ್ರೂಸ್ (Cruise) ಮೇಲೆ ದಾಳಿ ಮಾಡಿದ ನಂತರ ಶಾರುಖ್‌ ಖಾನ್‌ ಪುತ್ರ  ಆರ್ಯನ್ ಖಾನ್ ಅನ್ನು ಬಂಧಿಸಿಲಾಗಿದೆ. 
 

28

ಮಗ ಆರ್ಯನ್ ಖಾನ್ ಬಂಧನದ ನಂತರ ಗೌರಿ ಖಾನ್ ಮತ್ತು ಶಾರುಖ್ ಖಾನ್  ಪಾಲಿಗೆ ಇದು ನಿಜಕ್ಕೂ ಸವಾಲಿನ ಸಮಯ (Challenging Time) ವಾಗಿದೆ. 23 ವರ್ಷದ ಆರ್ಯನ್‌ನನ್ನು ಪ್ರಸ್ತುತ ಜೈಲಿನಲ್ಲಿರುವ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ.

38

ಗೌರಿ ಖಾನ್ ಮತ್ತು ಶಾರುಖ್ ಖಾನ್  ಮಗನ ಬಂಧನದ ನಂತರ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಖಾನ್ ದಂಪತಿ. ಆರ್ಯನ್ ಖಾನ್ ಆರೋಗ್ಯದ ಬಗ್ಗೆ ಇಬ್ಬರೂ ನಿರಂತರವಾಗಿ ಕಾಲ್‌ ಮಾಡುತ್ತಿದ್ದಾರೆ. ಆದರೆ, ಆರ್ಯನ್ ಖಾನ್  ಜೊತೆ ನೇರವಾಗಿ ಸಂಪರ್ಕಕ್ಕೆ ಬರಲು ಅವರಿಗೆ ಅನುಮತಿ ಇರಲಿಲ್ಲ. ಆದರೂ, ಒಮ್ಮೆ ವೀಡಿಯೋ ಕಾಲ್ ಮೂಲಕ ಒಮ್ಮೆ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. 

48

ಇದರ ನಡುವೆ, ಗೌರಿ ಖಾನ್ ಅವರ ಹಳೆಯ ಸಂದರ್ಶನವೊಂದು ಮತ್ತೆ ಪ್ರಚಾರ ಪಡೆಯುತ್ತಿದೆ.ಅದು   ಕಾಫಿ ವಿಥ್ ಕರಣ್ ಶೋನಲ್ಲಿ  ಕರಣ್ ಜೋಹರ್ ಜೊತೆಗಿನ ಗೌರಿ ಅವರ ಮಾತುಕತೆಯಾಗಿದೆ. ಎಸ್‌ಆರ್‌ಕೆ ಅವರ ಪೋಷಕರು ಇನ್ನಿಲ್ಲದ ಕಾರಣ, ಅವರು ಮನೆಯಲ್ಲಿ ಹಬ್ಬಗಳು ಮತ್ತು ಆಚರಣೆಗಳ ಉಸ್ತುವಾರಿ ವಹಿಸುತ್ತಾರೆ ಎಂದು ಗೌರಿ ಹೇಳಿದ್ದರು. 

58

ಅದೇ ಸಂಭಾಷಣೆಯಲ್ಲಿ, ಅವರ ನಡುವೆ ಬ್ಯಾಲೆನ್ಸ್‌  ಇರುವುದರಿಂದ ತಾನು ಮುಸ್ಲಿಂ ಆಗಿ ಕನ್ವರ್ಟ್‌ ಆಗಬೇಕಾಗಿಲ್ಲ, ಮತ್ತು ಮದುವೆಯಲ್ಲಿ ಅವರಿಬ್ಬರೂ ಪರಸ್ಪರ ಧರ್ಮವನ್ನು ಗೌರವಿಸುತ್ತಾರೆ ಎಂದು ಗೌರಿ ಹೇಳಿದರು. ಅಂತರ್ ಧರ್ಮೀಯ ವಿವಾಹಗಳ ನಡುವೆ ಯಾವುದೇ ಅಗೌರವ ಇರಬಾರದು ಎಂದು ಅವರು ಹೇಳಿದರು.

68

ಶಾರುಖ್ ಖಾನ್ ಒಬ್ಬ ಮುಸ್ಲಿಂ, ಗೌರಿ ಹಿಂದೂ. ಈ ಕುಟುಂಬವು ಪರಸ್ಪರ ತಮ್ಮ ಧರ್ಮದ ಪ್ರತಿಯೊಂದು ಹಬ್ಬವನ್ನು ಆಚರಿಸುತ್ತದೆ. ಒಮ್ಮೆ ಗೌರಿ ಆರ್ಯನ್ ಖಾನ್ ಅವರ ಧಾರ್ಮಿಕ ಆದ್ಯತೆಗಳ ಬಗ್ಗೆ ಪ್ರತಿಕ್ರಿಯಿಸಿದರು.

78

ಗೌರಿಯನ್ನು ಮಗನ ಧರ್ಮಾಚರಣೆಯ ಬಗ್ಗೆ   ಕೇಳಿದಾಗ, ಆರ್ಯನ್ ಬೆಳೆದ ಮೇಲೆ ಎಸ್‌ಆರ್‌ಕೆ ಧರ್ಮವನ್ನು ಅಭ್ಯಾಸ ಮಾಡಬಹುದು ಎಂದು ಅವರು ಭಾವಿಸಿದರು. ಏಕೆಂದರೆ ಮಗ ತುಂಬಾ ತಂದೆಯಂತೆ  ಇದ್ದಾನೆ ಎಂದು ಗೌರಿ ಅಭಿಪ್ರಾಯ ಪಟ್ಟಿದ್ದರು.

88

ಎಸ್‌ಆರ್‌ಕೆ ಕೂಡ ಈ ಬಗ್ಗೆ ಹಲವು ಬಾರಿ ಮಾತಾನಾಡಿದ್ದಾರೆ. ತಮ್ಮ ಮಕ್ಕಳಿಗೆ   ಹಿಂದೂ ಅಥವಾ ಮುಸ್ಲಿಂ ಎಂದು ಗುರುತಿಸುವುದ್ದಿಲ್ಲ ಮತ್ತು ಹಿಂದೂಸ್ತಾನಿ (ಭಾರತೀಯ) ಅವರ ಧರ್ಮ ಎಂದು ಕಲಿಸಿರುವುದಾಗಿ  ಶಾರುಖ್‌ ಹೇಳಿದರು.

click me!

Recommended Stories