ನಟಿಸಿದ್ದು ನಾಲ್ಕು ಮತ್ತೊಂದು ಸಿನಿಮಾ, ಖಾತೆಯಿಂದ ಖಾತೆಗೆ ಕೋಟಿ ಕೋಟಿ ಜಮಾ..!

First Published Oct 15, 2021, 3:58 PM IST
  • ಜಾಕ್ವೆಲಿನ್ ನಂತರ ಈಗ ನೋರಾ ಫತೇಹಿಗೂ ಇಡಿ ಕಾಟ
  • 200 ಕೋಟಿ ಅಕ್ರಮ ಹಣಕ್ಕೆ ಸಂಬಂಧಿಸಿ ನೋಟಿಸ್

ಸುಕೇಶ್ ಚಂದ್ರಶೇಖರ್ ಒಳಗೊಂಡ 200 ಕೋಟಿ ರೂಪಾಯಿ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಾಡಿಯನ್ ಡ್ಯಾನ್ಸರ್ ಮತ್ತು ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯ (ED) ಎಂಟು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.

ನೋರಾ ಫತೇಹಿ ಅವರು ಏಜೆನ್ಸಿಯ ದೆಹಲಿ ಕಚೇರಿಯ ಮುಂದೆ ಬೆಳಗ್ಗೆ 11.30 ಕ್ಕೆ ಹಾಜರಾಗಿದ್ದಾರೆ. ರಾತ್ರಿ 8.30 ರವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. 29 ವರ್ಷದ ನಟಿ ಹಣಕಾಸಿನ ವಹಿವಾಟುಗಳ ಸಂಬಂಧ ಕೆಲವು ಸಮಸ್ಯೆ ಎದುರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ವಿಚಾರಣೆಗಾಗಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಶುಕ್ರವಾರ ಇಡಿಯ ದೆಹಲಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೇಳಿಕೆಯನ್ನು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಅನೇಕ ಸಂದರ್ಭಗಳಲ್ಲಿ ದಾಖಲಿಸಿತ್ತು.

ಸುಕೇಶ್ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ನೋರಾ ಫತೇಹಿ ಹೇಳಿಕೆಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಅವರಿಗೆ ಸುಖೇಶ್ ಚಂದ್ರಶೇಖರ್ ಜೊತೆ ಯಾವುದಾದರೂ ಹಣಕಾಸಿನ ವಹಿವಾಟು ನಡೆದಿದೆಯೇ ಎಂದು ಸಂಸ್ಥೆ ತನಿಖೆ ನಡೆಸುತ್ತಿದೆ.

ದೆಹಲಿಯ ರೋಹಿಣಿ ಜೈಲಿನಲ್ಲಿ ಬಂಧಿಯಾಗಿರುವ ಸುಕೇಶ್ ಚಂದ್ರಶೇಖರ್, ಉದ್ಯಮಿಗಳಿಂದ ಒಂದು ವರ್ಷದ ಅವಧಿಯಲ್ಲಿ 200 ಕೋಟಿ ಸುಲಿಗೆ ಮಾಡಿದ ಆರೋಪವಿದೆ. ಆತನ ವಿರುದ್ಧ 20 ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳನ್ನು ದಾಖಲಿಸಲಾಗಿದೆ. 

ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇರುವ ಸುಕೇಶ್ ಅವರ ಸಹವರ್ತಿ - ಲೀನಾ ಮಾರಿಯಾ ಪೌಲ್ ಅವರ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ. ಪಾಲ್, ನಟ, ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹೆಚ್ಚಾಗಿ ಮಾಲಿವುಡ್‌ನಲ್ಲಿ ಕೆಲಸ ಮಾಡಿದ್ದಾರೆ.

click me!