ದೀಪಿಕಾರ ಜೊತೆ ಮನೆ ಮಕ್ಕಳ ಆಸೆಯ ಕನಸು ಹಂಚಿಕೊಂಡ ರಣವೀರ್‌!

First Published | Oct 15, 2021, 3:49 PM IST

ಬಾಲಿವುಡ್‌ನ (Bollywood) ಹ್ಯಾಂಡ್‌ಸಮ್‌ ಹಾಗೂ ಫೇಮಸ್‌ ನಟರಾಗಿರುವ ರಣವೀರ್ ಸಿಂಗ್ (Ranveer Singh)  ಬಿಗ್ ಪಿಕ್ಚರ್ (Big Picture) ಕಾರ್ಯಕ್ರಮದ ನಿರೂಪಕರಾಗಿ (Host) ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ರಣವೀರ್ ಸಿಂಗ್ ತನ್ನ ಪತ್ನಿ ದೀಪಿಕಾ ಪಡುಕೋಣೆಯ  (Deepika Paddukone) ಬಗ್ಗೆ ಮತ್ತು ಅವರ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಏನದು ರಣವೀರ್‌ ಅವರ ಕನಸು? ತಿಳಿಯಲು ಪೂರ್ತಿ ಓದಿ.
 

ದೀಪಿಕಾ ಪಡುಕೋಣೆ ಮತ್ತು  ರಣವೀರ್ ಸಿಂಗ್ ಚಿತ್ರರಂಗದಲ್ಲಿ ಅತ್ಯಂತ ಪ್ರೀತಿಪಾತ್ರರು ಮತ್ತು ಅದ್ಭುತ ಜೋಡಿಗಳು. ಆನ್-ಸ್ಕ್ರೀನ್ ಕೆಮಿಸ್ಟ್ರಿ (On screen chemistry) ಅಥವಾ ರೆಡ್ ಕಾರ್ಪೆಟ್ (Red Carpet) ಕ್ಷಣಗಳು ಅಥವಾ ಕ್ಯೂಟ್‌ PDA ಇರಲಿ, ಅವರಿಬ್ಬರನ್ನು ಒಟ್ಟಿಗೆ ನೋಡಲು ಅವರ ಅಭಿಮಾನಿಗಳು (Fans) ಯಾವಾಗಲೂ ಕಾತುರರಾಗಿರುತ್ತಾರೆ.

ಹಾಗೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಈ ಜೋಡಿ ತಮ್ಮ ಸಂಬಂಧದ (Relatinship) ಮತ್ತು ಕ್ಯೂಟ್‌ ರೋಮ್ಯಾಂಟಿಕ್‌ ಮೂಮೆಂಟ್ಸ್‌ಗಳ (Romantic Moments) ವಿವರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

Tap to resize

ಈಗ ರಣವೀರ್  ಕಿರುತೆರೆಗೆ (Small Screen)  ಕೂಡ ಪಾದಾರ್ಪಣೆ ಮಾಡಿದ್ದಾರೆ. ರಣವೀರ್ ಬಿಗ್ ಪಿಕ್ಚರ್ ಎಂಬ ಶೋ ಹೋಸ್ಟ್‌ ಆಗಿ ಕಾಣಿಸಿಕೊಳ್ಳಲಾಗಿದ್ದಾರೆ. ಈ ಸಮಯದಲ್ಲಿ  ದೀಪಿಕಾ ತನ್ನ ಅತಿ ದೊಡ್ಡ ಚೀಯರ್‌ ಲೀಡರ್ (Cheer Leader) ಎಂದು ರಣವೀರ್ ಬಹಿರಂಗಪಡಿಸಿದರು

ಒಬ್ಬ ಉತ್ತಮ ವ್ಯಕ್ತಿಯಾಗಲು ಸಹಾಯ ಮಾಡುವ ಅವರ ಆತ್ಮೀಯರು ದೀಪಿಕಾ ಮತ್ತು ಅವಳು ತನ್ನ ಜೊತೆಯಲ್ಲಿರುವ ಕಾರಣದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಆತ್ಮವಿಶ್ವಾಸವನ್ನು (Confidence) ಹೊಂದಿದ್ದೇನೆ ಎಂದೂ ಅವರು ಹೇಳಿದರು.   

ಅವರ ಕುಟುಂಬದ ಬಗ್ಗೆ ಮತ್ತು ವಿಶೇಷವಾಗಿ ದಿ ಬಿಗ್ ಪಿಕ್ಚರ್ ಹೋಸ್ಟಿಂಗ್‌ (Hosting) ಬಗ್ಗೆ ದೀಪಿಕಾರ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ. ನಾನು ಬೆಟರ್‌ ಆಗಲು ದೀಪಿಕಾ  ಪ್ರೇರೇಪಿಸುತ್ತಾಳೆ ಎಂದು ಪತ್ನಿಗೆ ಕ್ರೆಡಿಟ್‌ ನೀಡಿದರು.

Actress

ರಣವೀರ್ ತನ್ನ ಜೊತೆಗಾರನಂತೆ ತಾನು ಸಹ ಶಾರ್ಪ್‌ ಮೈಂಡ್‌ (Sharp Mind) ಹೊಂದಿದ್ದಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಅವಳ ಪ್ರೀತಿ (Love) ಮತ್ತು ಬೆಂಬಲ (Support)ದಿಂದ, ಖಂಡಿತವಾಗಿಯೂ ತನ್ನ ಬೆಸ್ಟ್‌ ನೀಡಲು ಸಾಧ್ಯವಾಗುತ್ತದೆ  ಎಂದು ಬಹಿರಂಗಪಡಿಸಿದರು.

ಸಿಂಗ್ ಬಿಗ್ ಪಿಕ್ಚರ್ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಒಂದು ಕ್ವಿಜ್‌ ಶೋ (Quiz Show) ಆಗಿದೆ ಮತ್ತು  ಅದು ಖಂಡಿತವಾಗಿಯೂ ಜನರನ್ನು ಮನರಂಜಿಸುತ್ತದೆ. ಕಾರ್ಯಕ್ರಮವನ್ನು ಹಿಟ್‌ ಮಾಡಲು  ನಿರೂಪಕರಾಗಿ ರಣವೀರ್ ಪರ್ಫೇಕ್ಟ್‌ ಫಿಟ್‌ ಮತ್ತು ಅವರು ತಮ್ಮ ಪತ್ನಿಯ ಬೆಂಬಲದಿಂದ ಖಂಡಿತವಾಗಿಯೂ ಮಿಂಚುತ್ತಾರೆ.  

ದೀಪಿಕಾ ಪಡುಕೋಣೆ ಜೊತೆ ತಾನು ಯಾವ ರೀತಿಯ ಭವಿಷ್ಯವನ್ನು ನೋಡಲು ಬಯಸುತ್ತೇನೆ ಎಂಬುದನ್ನು ರಣವೀರ್ ಬಹಿರಂಗಪಡಿಸಿದ್ದಾರೆ. ತನ್ನ ಕನಸನ್ನು ಹಂಚಿಕೊಳ್ಳುತ್ತಾ, 'ಒಂದು ಪ್ರಿಯವಾದ ಮನೆ ಇರಲಿ, ಅದರಲ್ಲಿ ನನ್ನ ಹೆಂಡತಿ ಹಾಗೂ ಮಕ್ಕಳು ಸಂತೋಷ (happy) ಮತ್ತು ಆರೋಗ್ಯದಿಂದ (Healhty) ಇರಲಿ'  ಇದಕ್ಕಿಂತ ಹೆಚ್ಚಿನದು ಏನು ಆಸೆ ಪಡಬಹುದು? ಎಂದು ಅವರು ಹೇಳಿದರು.

ರಣವೀರ್ ಸಿಂಗ್ ಸರ್ಕಸ್ ಮತ್ತು 83 ರಲ್ಲಿ ಕಾಣಿಸಲಿದ್ದಾರೆ.ದೀಪಿಕಾ  83 ಸಿನಿಮಾದಲ್ಲಿ  ರಣವೀರ್ ಜೊತೆ ಕಪಿಲ್ ದೇವ್ (Kapil Dev) ಪತ್ನಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. 'ದಿ ಬಿಗ್ ಪಿಕ್ಚರ್' ನ ಗ್ರ್ಯಾಂಡ್ ಪ್ರೀಮಿಯರ್' ಅನ್ನು 16 ನೇ ಅಕ್ಟೋಬರ್ 2021 ರಂದು ರಾತ್ರಿ 8 ಗಂಟೆಗೆ, ಕಲರ್ಸ್, ವೂಟ್ ಮತ್ತು ಜಿಯೋ ಟಿವಿಯಲ್ಲಿ  ವೀಕ್ಷಿಸಿ.

Latest Videos

click me!