ಕೈಯಲ್ಲಾದಷ್ಟು ಕಂಟ್ರೋಲ್ ಮಾಡೋಣ ಎಂದ ಸಮಂತಾ; ವರ್ಷದ ಕೊನೆ ಪೋಸ್ಟ್‌ ವೈರಲ್

First Published | Dec 31, 2022, 1:11 PM IST

ಹೊಸ ವರ್ಷ ಬರ ಮಾಡಿಕೊಳ್ಳುವ ಮುನ್ನವೇ ಹೊಸ ಗೋಲ್ಸ್‌ ಸೆಟ್ ಮಾಡಿಕೊಂಡ ನಟಿ ಸಮಂತಾ....

ಟಾಲಿವುಡ್ ಕ್ಯೂಟಿ ಸಮಂತಾ (Samantha Ruth Prabhu) ರುತ್ ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಹೊಸ ವರ್ಷವನ್ನು ಕೊಂಚ ಬೇಗ ಬರ ಮಾಡಿಕೊಂಡಿದ್ದಾರೆ. 

'ಫಂಕ್ಷನ್ ಫಾರ್ವರ್ಡ್ (ಕೆಲಸ ಮುಂದುವರೆಸಬೇಕು)...ನಮ್ಮ ಕೈಯಲಾದಷ್ಟು ಕಂಟ್ರೋಲ್ ಮಾಡಬೇಕು' ಎಂದು ಸಮಂತಾ ಬರೆದುಕೊಂಡಿದ್ದಾರೆ. 
 

Tap to resize

'ಹೊಸ ಆಲೋಚನೆ ಮತ್ತು ಹೊಸ ನಿರ್ಣಯಗಳನ್ನು ಮಾಡಿಕೊಳ್ಳಲು ಇದು ಸರಿಯಾದ ಸಮಯ. ನಮ್ಮ ಮೇಲೆ ದಯೆ ಮತ್ತು ಸೌಮ್ಯವಾಗಿರುವವರು' ಎಂದಿದ್ದಾರೆ ಸಮಂತಾ.

 ' ದೇವರ ಆಶೀರ್ವಾದ. ಹ್ಯಾಪಿ 2023' ಎಂದು ಹೇಳಿರುವ ಸಮಂತಾ ಸೆಲ್ಫಿ ಫೋಟೋ ಹಂಚಿಕೊಂಡಿದ್ದಾರೆ. ಸ್ಯಾಮ್‌ ಸ್ಕಿನ್‌ ಸಿಕ್ಕಾಪಟ್ಟೆ ಗ್ಲೋ ಅಗುತ್ತಿದೆ. 
 

ಹೊಸ ವರ್ಷ ಆರಂಭವಾಗುವ ಎರಡು ದಿನ ಮುನ್ನವೇ ಹ್ಯಾಪಿ ನ್ಯೂ ಇಯರ್ ಹೇಳಿರುವುದುಕ್ಕೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಪಾರ್ಟಿಯಲ್ಲಿ ಬ್ಯುಸಿಯಾಗಿರುತ್ತೀರಾ? ಎಂದು ಕಾಲೆಳೆದಿದ್ದಾರೆ.

ಸೌತ್‌ ಇಂಡಸ್ಟ್ರಿ ಐಕಾನ್ ಮತ್ತು ಸ್ಟಾರ್ ದಿವಾ ಸಮಂತಾ ರುತ್ ಪ್ರಭು ಅವರಿಗೆ  ಯಾವುದೇ ಪರಿಚಯದ ಅಗತ್ಯವಿಲ್ಲ. ಪುಷ್ಪ: ದಿ ರೈಸ್‌ನ 'ಊ ಅಂತವ' ಚಿತ್ರದ ಬ್ಲಾಕ್‌ಬಸ್ಟರ್ ಹಾಡಿನಲ್ಲಿನ ಆಕರ್ಷಕ ಮೂಮ್ಸ್‌ ಸಮಂತಾರ ಇನ್ನೊಂದು ಮುಖವನ್ನು ಪರಿಚಯಿಸಿದೆ.   ಪ್ರಸ್ತುತ ಸಿನಿಮಾದ ಯಶಸ್ಸನ್ನು ಆನಂದಿಸುತ್ತಿರುವ ಸಮಂತಾ ಸಖತ್‌ ಸದ್ದು ಮಾಡುತ್ತಿದ್ದಾರೆ.

Latest Videos

click me!