ಕರೀನಾರಿಂದ ಆಲಿಯಾವರೆಗೆ ವೇಶ್ಯೆ ಪಾತ್ರದಲ್ಲಿ ಟಾಪ್‌ ನಟಿಯರು!

First Published | Feb 2, 2024, 4:17 PM IST

ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ: ದಿ ಡೈಮಂಡ್ ಬಜಾರ್‌ನ ಟೀಸರ್  ಅನಾವರಣಗೊಳಿಸಲಾಗಿದೆ. ಹೀರಾಮಂಡಿ ತನ್ನ ಫಸ್ಟ್‌ ಲುಕ್‌ನಲ್ಲಿಯೇ ಸಂಪೂರ್ಣವಾಗಿ  ಪ್ರೇಕ್ಷಕರನ್ನು ಬೆರಗುಗೊಳಿಸಿದೆ. ಇದರಲ್ಲಿ   ಮನಿಶಾ ಕೊಯಿರಾಲಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಮತ್ತು ಸಂಜೀದಾ ಶೇಖ್ ಅವರನ್ನು ವೇಶ್ಯೆಯರ ಪಾತ್ರದಲ್ಲಿ ಕಾಣಬಹುದು. ಇದಕ್ಕೂ ಮೊದಲು ಬಾಲಿವುಡ್‌ನ ಹಲವು ಸಿನಿಮಾಗಳು ವೇಶ್ಯಾವಾಟಿಕೆಯ ಕಥೆಯನ್ನು ಆಧರಿಸಿದೆ. ಅಷ್ಟೇ ಅಲ್ಲದೇ ಬಾಲಿವುಡ್‌ನ ಟಾಪ್‌ ನಟಿಯರು ವೇಶ್ಯೆಯರ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನ ಗೆದ್ದಿದ್ದಾರೆ. ವೇಶ್ಯೆಯರ ಪಾತ್ರದಲ್ಲಿ ನಟಿಸಿದ ಫೇಮಸ್​ ನಟಿಯರು ಇವರು.

ಆಲಿಯಾ ಭಟ್‌: ಗಂಗೂಬಾಯಿ ಕಥಿಯಾವಾಡಿ ಚಿತ್ರದ ಚಿತ್ರದಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಮತಿಪುರದ ರೆಡ್ ಲೈಟ್ ಏರಿಯಾದಲ್ಲಿ ಗಂಗೂಬಾಯಿ ಎಂಬ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿಸಿದ್ದಾರೆ.

ಕರೀನಾ ಕಪೂರ್‌: 2004 ರ ಚಮೇಲಿ ಚಲನಚಿತ್ರದಲ್ಲಿ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕರೀನಾ ಅವರು ಬೀದಿ- ವೇಶ್ಯೆಯಾಗಿ ನಟಿಸಿದ್ದಾರೆ.

Tap to resize

ವಿದ್ಯಾ ಬಾಲನ್‌: ಬೇಗಂ ಜಾನ್  ಚಿತ್ರವು 2017 ರಲ್ಲಿ ಬಿಡುಗಡೆಯಾಯಿತು ಮತ್ತು ವಿದ್ಯಾ ಬಾಲನ್ ಬೇಗಂ ಜಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
 

ಕರೀನಾ ಕಪೂರ್: ಕರೀನಾ ಕಪೂರ್‌ ಪ್ರಮುಖ ಪಾತ್ರದಲ್ಲಿರುವ ತಲಾಶ್ ಚಿತ್ರ ಒಂದು ಸೈಕಲಾಜಿಕಲ್ ಹಾರರ್ ಸಿನಿಮಾವಾಗಿದ್ದು, ಈ ಸಿನಿಮಾವು ಲೈಂಗಿಕ ಕಾರ್ಯಕರ್ತೆಯರ ಜೀವನವನ್ನು ಹೊರತರುತ್ತದೆ.  

ಟಬು: ಮಧುರ್ ಭಂಡಾರ್ಕರ್ ನಿರ್ದೇಶಿಸಿದ ಚಾಂದಿನಿ ಬಾರ್ ಚಿತ್ರದಲ್ಲಿ ಟಬು ವೇಶ್ಯೆಯಾಗಿ ನಟಿಸಿದ್ದಾರೆ. ಚಿತ್ರದಲ್ಲಿನ ತನ್ನ ಪವರ್‌ಫುಲ್‌ ಅಭಿನಯಕ್ಕಾಗಿ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದರು.

ಮಾಧುರಿ ದೀಕ್ಷಿತ್‌: ಬಾಲಿವುಡ್‌ನ  ಕ್ಲಾಸಿಕ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗುವ ದೇವದಾಸ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್‌ ಅವರು ಚಂದ್ರಮುಖಿ ಎಂಬ  ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ.ಇದಲ್ಲದೆ  ಕಲಂಕ್‌ ಸಿನಿಮಾದಲ್ಲೂ  ವೇಶ್ಯಾಗೃಹ ನಡೆಸುವ ಬಹರ್ ಬೇಗಂ ಪಾತ್ರದಲ್ಲಿ   ಮಾಧುರಿ ದೀಕ್ಷಿತ್ ಕಾಣಿಸಿಕೊಂಡಿದ್ದಾರೆ.

ಕಲ್ಕಿ ಕೋಚ್ಲಿನ್: 2009ರಲ್ಲಿ ಬಿಡುಗಡೆಯಾದ  ಹಿಂದಿಯಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ದೇವ್‌ ಡಿ ಸಿನಿಮಾದಲ್ಲಿ  ಚಂದಾ ಎಂಬ ಹದಿಹರೆಯದ ಹುಡುಗಿ ಎಂಎಂಎಸ್ ವಿವಾದದಲ್ಲಿ ಸಿಲುಕಿ ಲೈಂಗಿಕ ಕಾರ್ಯಕರ್ತೆಯಾಗಿ ರಹಸ್ಯ ಜೀವನವನ್ನು ನಡೆಸುವ ಪಾತ್ರದಲ್ಲಿ  ಕಲ್ಕಿ ಕೋಚ್ಲಿನ್ ಕಾಣಿಸಿಕೊಂಡಿದ್ದಾರೆ.

ಶಬಾನಾ ಅಜ್ಮಿ: ಶ್ಯಾಮ್ ಬೆನಗಲ್ ನಿರ್ದೇಶಿಸಿದ  1983ರ ಮಂಡಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರವಾಗಿದೆ ಮತ್ತು ಇದರಲ್ಲಿ ವೇಶ್ಯೆಯಾಗಿ ನಟಿ  ಶಬಾನಾ ಅಜ್ಮಿ ತಮ್ಮ  ಅಭಿನಯವನ್ನು ಪ್ರದರ್ಶಿಸಿದರು.
 

Latest Videos

click me!