ಟಾಲಿವುಡ್ ಬ್ಯೂಟಿ ಕೀರ್ತಿ ಸುರೇಶ್ ದಸರಾ ಚಿತ್ರದ ಬಳಿಕ ಫುಲ್ ಖುಷ್ ಆಗಿದ್ದಾರೆ. ಎನಿ ಟೈಮ್ ಹ್ಯಾಪಿ ಎಂಬಂತೆ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇದೀಗ ಚೆಂದದ ಸೀರೆಯುಟ್ಟು ಫೋಟೋಗಳಿಗೆ ಭರ್ಜರಿ ಪೋಸ್ ಕೊಟ್ಟಿದ್ದಾರೆ.
ಯೆಲ್ಲೋ ಹಾಗೂ ಗೋಲ್ಡ್ ವರ್ಕ್ ಸೀರೆಯಲ್ಲಿ ಮಹಾನಟಿ ಮಿಂಚುತ್ತಿದ್ದಾರೆ. ಕೀರ್ತಿ ಕಣ್ಣು ನೋಡಿ ಅಭಿಮಾನಿಗಳೇ ಕಳೆದು ಹೋಗಿದ್ದಾರೆ. ಕೀರ್ತಿ ಸುರೇಶ್ ಚೆಂದದ ಫೋಟೋಗಳಿಗೆ ಲೈಕ್ ಹಾಗೂ ಕಾಮೆಂಟ್ಗಳ ಸುರಿಮಳೆಯಾಗಿದೆ.
ಸೀರೆಯಲ್ಲಿ ಕೀರ್ತಿ ಸುರೇಶ್ರನ್ನು ನೋಡಿದ ನೆಟ್ಟಿಗರು, ಅಬ್ಬಬ್ಬಾ ಎಷ್ಟೊಂದು ಕ್ಯೂಟ್ ಇವರು, ನಿಮ್ಮ ನಗು ಚೆನ್ನಾಗಿದೆ, ಪ್ರಪಂಚದ ಅತಿ ಸುಂದರವಾದ ಹುಡುಗಿ, ಇಂಡಿಯನ್ ಬ್ಯೂಟಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಕೀರ್ತಿ ಸುರೇಶ್, ಕಿಶೋರ್ ತಿರುಮಲ ನಿರ್ದೇಶನದ ‘ನೇನು ಶೈಲಜಾ’ ಚಿತ್ರದ ಮೂಲಕ ರಾಮ್ ಪೋತಿನೇನಿ ನಾಯಕಿಯಾಗಿ ಟಾಲಿವುಡ್ಗೆ ಎಂಟ್ರಿ ಕೊಟ್ರು. ತೆಲುಗಿನಲ್ಲಿ ಮೊದಲ ಸಿನಿಮಾದಲ್ಲೇ ಮೆಚ್ಚುಗೆ ಗಳಿಸಿದರು. ಆ ನಂತರ ಮಹಾನಟಿ ಚಿತ್ರದ ಮೂಲಕ ಕೀರ್ತಿ ಸುರೇಶ್ ಭಾರೀ ಫೇಮಸ್ ಆದ್ರು.
ಕಳೆದ ವರ್ಷ ಕೀರ್ತಿ ಸುರೇಶ್ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಟ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಯುವ ನಿರ್ದೇಶಕ ಪರುಶುರಾಮ್ ಪೆಟ್ಲ ನಿರ್ದೇಶಿಸಿದ್ದರು. ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಯಿತು.
ಮಹಾನಟಿ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಳಿಸಿದ ಮಲಯಾಳಿ ಮೋಹನಾಂಗಿ ಕೀರ್ತಿ ಸುರೇಶ್, ಈ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಇತ್ತೀಚೆಗಷ್ಟೇ ನಾನಿ ನಾಯಕನಾಗಿ ನಟಿಸಿದ್ದ ‘ದಸರಾ’ ಸಿನಿಮಾದ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಿದ್ದರು.