ಗಿಡ್ಡ ಡ್ರೆಸ್ ತೊಟ್ಟ ವಿಶ್ವ ಸುಂದರಿ, ಝೂಮ್ ಮಾಡಿ, ಟ್ರೋಲ್ ಮಾಡ್ತಿದ್ದಾರೆ ನೆಟ್ಟಿಗರು!

First Published | May 17, 2024, 3:37 PM IST

ಸಿನಿಮಾಗಿಂತ ಬೇರೆ ಬೇರೆ ಕಾರಣಗಳಿಗೆ ಸುಶ್ಮಿತಾ ಸೇನ್ ಸುದ್ದಿಯಾಗುವುದೇ ಹೆಚ್ಚು. ಇದೀಗ ಅವರ ತುಂಡುಡಗೆ ತೊಟ್ಟ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರು ಝೂಮ್ ಮಾಡಿ ಫೋಟೋ ನೋಡುತ್ತಿದ್ದಾರೆ. 

ಸುಶ್ಮಿತಾ ಸೇನ್ ಹಾಗೂ ಐಶ್ವರ್ಯಾ ಒಟ್ಟೊಟ್ಟಿಗೇ ವಿಶ್ವ ಸುಂದರಿಯಾಗಿ ಪ್ರವರ್ಧಮಾನಕ್ಕೆ ಬಂದವರು. ಆದರೆ, ಐಶ್ವರ್ಯಾ ಬಾಲಿವುಡ್‌ನಲ್ಲಿ ಬೇರೂರಿದರೆ, ಸುಶ್ಮಿತಾ ಸೇನ್ ತಮ್ಮದೇ ಛಾಪು ಮೂಡಿಸುವಲ್ಲಿ ವಿಫಲರಾದರು. ಆದರೆ, ಸಿನಿಮಾಕ್ಕಿಂತ ಬೇರೆ ಬೇರೆ ವಿಷಯಗಳಿಗೇ ಹೆಚ್ಚು ಹೆಡ್ಲೈನ್‌ನಲ್ಲಿ ರಾರಾಜಿಸುತ್ತಾರೆ. ಇದೀಗ ಇವರ ಯೊವುದೋ ಒಂದು ತುಂಡುಡುಗೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಝೂಮ್ ಮಾಡಿ ಒಳ ಉಡುಪು ನೋಡುತ್ತಿದ್ದಾರೆ. 

ಮಾಜಿ ವಿಶ್ವ ಸುಂದರಿ, ಬಾಲಿವುಡ ನಟಿ ಸುಶ್ಮಿತಾ ಸೇನ್‌ ಅವರ  ಲವ್‌ ಲೈಫ್‌  ಯಾವಾಗಲೂ ಸುದ್ದಿಯಲ್ಲಿರುತ್ತದೆ. ತಮಗಿಂತ ಅತ್ಯಂತ ಕಿರಿಯ ರೋಹ್ಮನ್ ಶಾಲ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಸುಶ್ಮಿತಾ, ಇದ್ದಕ್ಕಿದ್ದಂತೆ ಲಲಿತ್ ಮೋದಿ ಜೊತೆ ಫೋಸ್ ಕೊಟ್ಟು ದೊಡ್ಡ ಸುದ್ದಿಯಾದರು. 

Tap to resize

ಯಾವಾಗ ಲಲಿತ್ ಮೋದಿ ಜೊತೆ ಪೋಟೋ ವೈರಲ್ ಆಯಿತೋ, ಆಗ ಸುಶ್ಮಿತಾ ಬಗ್ಗೆ ನೆಟ್ಟಿಗರು ಕೆಟ್ಟದಾಗಿ ಮಾತನಾಡಲು ಶುರು ಮಾಡಿದರು. ಅದ್ಯಾವ ಆ್ಯಂಗಲ್‌ನಲ್ಲಿ ನೋಡಿದರೂ ಸುಶ್ಮಿತಾಗೆ ಲಲಿತ್ ಸೂಟ್ ಆಗ್ತಾರೆ ಅಂತ ಜನರಿಗೆ ಅನಿಸಲೇ ಇಲ್ಲ. 
 

ಅದಕ್ಕೆ ಶುಗರ್ ಡ್ಯಾಡಿ ಪಟ್ಟ ಕೊಟ್ಟು ಕಾಲೆಳೆದರು. ಅದೇನಾಯಿತೋ ಇವರಿಬ್ಬರ ಮಧ್ಯೆ. ಮದ್ವೆಯಾಗುತ್ತಾರೆ ಎಂದು ಸುದ್ದಿ ಬಂದಷ್ಟೇ ವೇಗವಾಗಿ, ಬ್ರೇಕಪ್ ಆದ ಸುದ್ದಿಯೂ ಹೊರ ಬಂತು. ಆದರೆ, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರೋಲ್ಲ ಅನ್ನೋ ರೀತಿ ಸುಶ್ಮಿತಾ ಬಗ್ಗೆ ಇದ್ದ ಅಭಿಪ್ರಾಯ ಜನರಲ್ಲಿ ಈ ಸಂಬಂಧದಿಂದ ಬದಲಾಗಿದ್ದಂತೂ ಸುಳ್ಳಲ್ಲ. 

ಹಾರ್ಟ್ ಅಟ್ಯಾಕ್ ಆಗಿದೆ ಅಂತ ಹೇಳಿದ ಸುಶ್ಮಿತಾ ಮತ್ತೆ ಸುದ್ದಿಯಾಗಿದ್ದರು. ಅದ್ಯಾವ ಪರಿ ಅವರನ್ನು ಒತ್ತಡ ಕಾಡುತ್ತಿದೆಯೋ ಗೊತ್ತಿಲ್ಲ. ಆದರೆ, ಇದೀಗ ಹುಷಾರಾಗಿದ್ದೀನಿ ಅಂದಿದ್ದಲ್ಲದೇ, ಮದ್ವೆಯೂ ಆಗುವುದಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿ ಮತ್ತೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು.
 

ಎಲ್ಲದಕ್ಕಿಂದ ಹೆಚ್ಚಾಗಿ ಸುಶ್ಮಿತಾ ಸೇನ್ ಜನರ ಸಿಂಪಥಿ ಪಡೆಯಲು ಮತ್ತೊಂದು ಕಾರಣ ಹೆಣ್ಣು ಮಗುವನ್ನ ದತ್ತು ಪಡೆದಿದ್ದು. ಒಂಟಿ ಹೆಣ್ಣಿಗೆ ದತ್ತು ಕೊಡುವ ಸಂಬಂಧ ಯಾವುದೂ ಕಾನೂನು ಸಹ ಇರಲಿಲ್ಲ. ಕೋರ್ಟಲ್ಲಿ ಹೋರಾಡಿ, ಸಿಂಗಲ್ ಪೇರೆಂಟ್ ಆಗುವುದಾಗಿ ಹೇಳಿ ಹೆಣ್ಣು ಮಕ್ಕಳನ್ನು ದತ್ತು ಪಡೆಯುವಲ್ಲಿ ಈ ಸುಂದರಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದ ಕ್ರಿಕೆಟಿಗನ ಜೊತೆ ಲವ್ ಅಫೇರ್ ಸೇರಿ ಬೇರೆ ಬೇರೆ ಕಾರಣಗಳಿಂದ ಸದಾ ಸುದ್ದಿಯಲ್ಲಿರೋ ಸುಶ್ಮಿತಾ, ತಮ್ಮ ಲೈಂಗಿಕ ಜೀವನವನ್ನು ಎಂದಿಗೂ ಜನರಿಂದ ಮುಚ್ಚಿಟ್ಟಿಲ್ಲ ಎನ್ನುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದರು. 

ಹೃದಯಾಘಾತವನ್ನು ಹೇಗೆ ಮನೋಹರವಾಗಿ ಎದುರಿಸುವುದೂ ಎಂದೂ ಹಂಚಿಕೊಂಡ ನಟಿ ಬಗ್ಗೆ ಅಭಿಮಾನಿಗಳಿಗೆ ಅಚ್ಚರಿಗೊಳಿಸಿದ ನಟಿ, ಮಾಜಿ ಪ್ರೇಮಿಗಳೊಂದಿಗಿನ ಸ್ನೇಹ, ಸಾಮರ್ಥ್ಯ ಮತ್ತು ಮದುವೆ ಬಗ್ಗೆ ಅವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

ತಮ್ಮ ಜೀವನವನ್ನು ತೆರೆದ ಪುಸ್ತಕವೆಂದು ಹೇಳಿಕೊಳ್ಳುವ ಸುಶ್ಮಿತಾ, ಯಾರಿಗೂ ಹೆದರದೇ, ಪ್ರಾಮಾಣಿಕವಾಗಿ ತನ್ನಿಷ್ಟದಂತೆ ಬದುಕಿದ್ದೇನೆ ಎನ್ನುತ್ತಾರೆ. ಯಾರಿಗೂ ದ್ರೋಹ ಬಗೆಯಬಾರದೆಂಬ ಎಚ್ಚರಿಕೆಯ ಮಾತುಗಳನ್ನೂ ಆಡುತ್ತಾರೆ. 

ಆದರೆ, ನಮಗೆ ಸರಿ ಬಾರದವರ ಜೊತೆ ಹೆಚ್ಚು ಸಮಯ ಕಳೆಯಬಾರದೆಂಬುದು ಈ ಬೆಡಗಿಯ ಬಿನ್ನಹ. ಅಕಸ್ಮಾತ್ ನಮ್ಮ ಜೊತೆಗಿರೋರು ನಮ್ಮ ನಂಬಿಕೆಗೆ ಅರ್ಹರಲ್ಲಿ ಅನಿಸಿದರೆ ಆ ಸಂಬಂಧವನ್ನು ಕಡಿದುಕೊಳ್ಳಬೇಕೆನ್ನುತ್ತಾರೆ. 
 

ಸೌಂದರ್ಯವಾಗಲಿ, ಆರೋಗ್ಯವಾಗಲಿ ಅಥವಾ ಫಿಟ್ನೆಸ್ ಮಂತ್ರವಾಗಲಿ ಎಲ್ಲರನ್ನೂ ಕನ್ವೀನ್ಸ್ ಮಾಡುವಂತೆ ಮಾಡಬಲ್ಲರು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್. 

ಫಿಟ್ನೆಸ್‌ಗಾಗಿ ಸಕತ್ತೂ ವರ್ಕ್‌ಔಟ್ ಮಾಡೋ ಸುಶ್ಮಿತಾ ಸೇನ್, ಅಷ್ಟೇನೂ ಚಿತ್ರದಲ್ಲಿ ನಟಿಸೋಲ್ಲ. ಅದು, ಇದೂ ಬ್ರ್ಯಾಂಡ್ ಪ್ರಮೋಟ್ ಮಾಡಿ ಗಳಿಸುವ ಜೊತೆ, ಮತ್ತೆ ಹೇಗೆ ದುಡಿಯುತ್ತಾರೋ ಗೊತ್ತಿಲ್ಲ. 

ಇದೀಗ ಇವರ ಯಾವುದೋ ಕಾರ್ಯಕ್ರಮದಲ್ಲಿ ತುಂಡುಡುಗೆ ತೊಟ್ಟ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ತರಹೇವಾರಿ ಕಮೆಂಟ್ಸ್ ಬರುತ್ತಿವೆ. ಜನರು ಝೂಮ್ ಮಾಡಿ ಮಾಡಿ ಫೋಟೋ ನೋಡುತ್ತಿದ್ದಾರೆ. 
 

Latest Videos

click me!