ಈ ನಟರಿಗೆ ವಯಸ್ಸಾಗಿದೆ ಅನ್ಬೇಡಿ… 50 ವರ್ಷವಾದರೂ ಇವರ ಚಿತ್ರಗಳು ಗಳಿಸಿವೆ 500 ಕೋಟಿ!

Published : Sep 12, 2023, 01:02 PM IST

ಕೆಲವರ ಸಾಧನೆ ನೋಡಿದಾಗ ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋ ಮಾತು ಮತ್ತೆ ಮತ್ತೆ ನೆನಪಾಗುತ್ತೆ ಅಲ್ವಾ? ವಯಸ್ಸು 50 ದಾಟಿದರೂ ಅವರ ಸಾಧನೆಗಳಿಗೆ ಏನೂ ಕಮ್ಮಿ ಇರೋದಿಲ್ಲ. ಅಂತಹ ಸಾಧಕರು ಸಿನಿಮಾ ಇಂಡಸ್ಟ್ರಿಯಲ್ಲೂ ಸಹ ಇದ್ದಾರೆ. ಅವರ ಬಗ್ಗೆ ತಿಳಿಯೋಣ.   

PREV
17
ಈ ನಟರಿಗೆ ವಯಸ್ಸಾಗಿದೆ ಅನ್ಬೇಡಿ… 50 ವರ್ಷವಾದರೂ ಇವರ ಚಿತ್ರಗಳು ಗಳಿಸಿವೆ 500 ಕೋಟಿ!

ನಟರಿಗೆ ವಯಸ್ಸಾಗೋದಿಲ್ಲ ಎನ್ನುತ್ತಾರೆ. ಅಥವಾ ಅವರಿಗೆ ವಯಸ್ಸು ಅನ್ನೋದು ಜಸ್ಟ್ ನಂಬರ್ (age is just a number)ಅಷ್ಟೇ. ಯಾಕೆಂದ್ರೆ ಕನ್ನಡ ಆಗಿರಲಿ, ಹಿಂದಿ, ತಮಿಳು, ಯಾವುದೇ ಭಾಷೆಯಾಗಿರಲಿ ಅಲ್ಲಿ ಇಂದಿಗೂ ಸಹ ವಯಸ್ಸು 50 ಕಳೆದ ನಾಯಕರೂ ನಂಬರ್ 1 ಆಗಿದ್ದಾರೆ. ವಯಸ್ಸು 55 ದಾಟಿದ ನಟರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಹಾಗಿದ್ರೆ 55 ಪ್ಲಸ್ ದಾಟಿದ ಯಾವೆಲ್ಲಾ ನಾಯಕರು ಗಲ್ಲಾ ಪೆಟ್ಟಿಗೆಯಲ್ಲಿ 500 ಕೋಟಿ ಗಳಿಸಿದ ಸಿನಿಮಾ ನೀಡಿದ್ದಾರೆ ನೋಡೋಣ. 
 

27

ಸನ್ನಿ ಡಿಯೋಲ್ (Sunney deol)
ಸನ್ನಿ ಡಿಯೋಲ್ ಅವರಿಗೆ ಇದೀಗ 65 ವರ್ಷ. ಇವರು ತಮ್ಮ ಕರಿಯರ್ ನಲ್ಲಿ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ತಮ್ಮ 65 ವಯಸ್ಸಿನಲ್ಲಿ ಅಭಿನಯಿಸಿದ 'ಗದರ್ 2' ಸಿನಿಮಾ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಮೂಲಕ ಸನ್ನಿ ಡಿಯೋಲ್ ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋದನ್ನು ಸಾಬೀತುಪಡಿಸಿದ್ದಾರೆ. 
 

37

ರಜನಿಕಾಂತ್ (Rajni Kanth)
ರಜನಿಕಾಂತ್ ಸಿನಿಮಾ ಎಂದರೆ ಸಾಕು ಬರೀ ದೇಶ ಅಷ್ಟೇ ಅಲ್ಲ, ಪ್ರಪಂಚದ ಮೂಲೇ ಮೂಲೆಯಲ್ಲಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ವಯಸ್ಸು 72 ಆದರೂ ರಜನಿಕಾಂತ್ ನಟನೆ, ಸ್ಟೈಲ್, ಆಕ್ಷನ್ ನೋಡೋದೇ ಅಭಿಮಾನಿಗಳಿಗೆ ಸಂಭ್ರಮ. ರಜನಿಕಾಂತ್ ಅವರ 'ಜೈಲರ್' ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 500 ಕೋಟಿಗೂ ಹೆಚ್ಚು ಗಳಿಸಿದೆ.

47

ಶಾರುಖ್ ಖಾನ್ (Shah Rukh Khan)
ಶಾರುಖ್ ಖಾನ್ ಅವರ ಜವಾನ್ 4 ದಿನಗಳಲ್ಲಿ ವಿಶ್ವಾದ್ಯಂತ 500 ಕೋಟಿಗೂ ಹೆಚ್ಚು ಗಳಿಸಿದೆ. ಇವರು ನಟಿಸಿದ ಪಠಾನ್ ಚಿತ್ರ ಸಹ 500 ಕೋಟಿ ಗಳಿಸಿತ್ತು. ಬಾಲಿವುಡ್ ನ ಈ ಕಿಂಗ್ ಆಫ್ ರೊಮಾನ್ಸ್ ವಯಸ್ಸು ಈಗ 57, ಆದರೂ ತಮ್ಮ ನಟನೆ, ಡ್ಯಾನ್ಸ್, ಫೈಟಿಂಗ್ ಮೂಲಕ ಯಾವ ಯುವ ನಾಯಕನಿಗೂ ಕಮ್ಮಿ ಇಲ್ಲ ಎನ್ನುವಂತೆ ನಟಿಸುತ್ತಾರೆ. 
 

57

ಸಲ್ಮಾನ್ ಖಾನ್ (Salman Khan)
57 ವರ್ಷದ ನಟ ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಮತ್ತು ಸುಲ್ತಾನ್ ಚಿತ್ರಗಳು ವಿಶ್ವಾದ್ಯಂತ 500 ಕೋಟಿಗೂ ಹೆಚ್ಚು ವ್ಯವಹಾರ ಮಾಡಿವೆ. ಇವರ ನಟನೆಯ ಪ್ರತಿಯೊಂದು ಸಿನಿಮಾ ಸಹ ಅಭಿಮಾನಿಗಳಲ್ಲಿ ಸಂಭ್ರಮ ಹುಟ್ಟಿಸುತ್ತೆ. 
 

67

ಅಮೀರ್ ಖಾನ್ (Aamir Khan)
ಬಾಲಿವುಡ್ ನಲ್ಲಿ ದಿನಕ್ಕೊಬ್ಬರಂತೆ ಹೊಸ ಹೊಸ ನಟರು ಹುಟ್ಟಿಕೊಳ್ಳುತ್ತಾರೆ. ಆದರೆ ತನ್ನ ಪರ್ಫೆಕ್ಟ್ ನಟನೆಯ ಮೂಲಕ ಯಾವ ಪಾತ್ರಕ್ಕೂ ಸೈ ಎನಿಸುವ ಅಮೀರ್ ಖಾನ್ ರನ್ನು ಮೀರಿಸಲು ಸಾಧ್ಯವಿಲ್ಲಾ ಅಲ್ವಾ? 58 ವರ್ಷದ ನಟನ ಪಿಕೆ, ಸೀಕ್ರೆಟ್ ಸೂಪರ್ ಸ್ಟಾರ್ ಮತ್ತು ದಂಗಲ್ ನಂತಹ ಚಿತ್ರಗಳು ವಿಶ್ವಾದ್ಯಂತ 500 ಕೋಟಿಗೂ ಹೆಚ್ಚು ಗಳಿಸಿವೆ

77

ಕಮಲ್ ಹಾಸನ್  (Kamal Hasan)
ದೇಶ ಕಂಡ ಅದ್ಭುತ ನಟರ ಸಾಲಿನಲ್ಲಿ ಕಮಲ್ ಹಾಸನ್ ನಿಲ್ಲುತ್ತಾರೆ. ಅವರು ನಟಿಸಿರದ ಪಾತ್ರಗಳೇ ಇಲ್ಲ. ಪ್ರತಿಯೊಂದು ಪಾತ್ರಕ್ಕೂ ಜೀವತುಂಬುವ ಇವರ ನಟನೆಯ ಚಿತ್ರಗಳು ಗಲ್ಲಾಪೆಟ್ಟಿಗೆ ಲೂಟಿ ಮಾಡೋದು ಖಚಿತ. 68 ವರ್ಷದ ಕಮಲ್ ನಟಿಸಿರುವ ವಿಕ್ರಮ್ ಸೇರಿ ಹಲವು ಸಿನಿಮಾಗಳು 500 ಕೋಟಿಗೂ ಅಧಿಕ ಗಳಿಸಿದೆ. 

Read more Photos on
click me!

Recommended Stories