ಬಾಲಿವುಡ್ ಸೆಲೆಬ್ರೆಟಿ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಇತ್ತೀಚಿನ ದಿನಗಳಲ್ಲಿ ಭಾರಿ ಸಂಕಷ್ಟ ಎದುರಿಸಿದ್ದಾರೆ. ಇವರಿಬ್ಬರ ಸಂಬಂಧ ಹಳಸಿದೆ, ವಿಚ್ಚೇದನ, ಇಬ್ಬರು ಬೇರೆ ಬೇರೆ ನಿವಾಸದಲ್ಲಿದ್ದಾರೆ ಅನ್ನೋ ಹಲವು ಸುದ್ದಿಗಳು ಹರಿದಾಡಿತ್ತು. ಹಲವು ಕಾರ್ಯಕ್ರಮಗಳಲ್ಲಿ ಈ ಜೋಡಿ ಬೇರೆ ಬೇರೆಯಾಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಹಾರವಾಗಿದ್ದರು. ಆದರೆ ಎಲ್ಲೂ ಕೂಡ ಈ ಜೋಡಿ ಸ್ಪಷ್ಟನೆ ನೀಡುವ ಪ್ರಯತ್ನವಾಗಲಿ, ಟೀಕೆ, ಊಹಾಪೋಗಳನ್ನು ತಳ್ಳಿ ಹಾಕುವ ಪ್ರಯತ್ನವನ್ನೂ ಮಾಡಲಿಲ್ಲ. ಹೀಗಾಗಿ ಅನುಮಾನಗಳು ಹೆಚ್ಚಾಗಿತ್ತು.