Yash: ವೇವ್ಸ್‌ ಸಮ್ಮಿಟ್‌ನಲ್ಲಿ ರಾಮಾಯಣ ಫಸ್ಟ್ ಗ್ಲಿಂಪ್ಸ್‌ ಬಿಡುಗಡೆ

Published : Apr 28, 2025, 11:45 AM ISTUpdated : Apr 28, 2025, 11:49 AM IST

ವಿಶ್ವದ ಮೊದಲ ಆಡಿಯೋ ವಿಜ್ಯುವಲ್‌ ಮತ್ತು ಎಂಟರ್‌ಟೇನ್‌ಮೆಂಟ್‌ ಸಮ್ಮಿಟ್‌ ‘ವೇವ್‌’ನಲ್ಲಿ ಜಾಗತಿಕ ಸಿನಿಮಾ ರಂಗದ ಹಲವು ತಾರೆಯರು ಭಾಗವಹಿಸಲಿದ್ದಾರೆ. 

PREV
16
Yash: ವೇವ್ಸ್‌ ಸಮ್ಮಿಟ್‌ನಲ್ಲಿ ರಾಮಾಯಣ ಫಸ್ಟ್ ಗ್ಲಿಂಪ್ಸ್‌ ಬಿಡುಗಡೆ

ಯಶ್‌ ನಟನೆಯ ಬಹುನಿರೀಕ್ಷಿತ ‘ರಾಮಾಯಣ ಪಾರ್ಟ್‌ 1’ ಫಸ್ಟ್‌ ಗ್ಲಿಂಪ್ಸ್‌ ಮೇ 1 ರಿಂದ 4ವರೆಗೆ ಮುಂಬೈಯಲ್ಲಿ ನಡೆಯುವ ವೇವ್ಸ್‌ ಜಾಗತಿಕ ಸಮ್ಮಿಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ.

26

ರಣಬೀರ್‌ ಕಪೂರ್‌ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ವಿಜೃಂಭಿಸುತ್ತಿದ್ದಾರೆ. ವಿಶ್ವದ ಮೊದಲ ಆಡಿಯೋ ವಿಜ್ಯುವಲ್‌ ಮತ್ತು ಎಂಟರ್‌ಟೇನ್‌ಮೆಂಟ್‌ ಸಮ್ಮಿಟ್‌ ‘ವೇವ್‌’ನಲ್ಲಿ ಜಾಗತಿಕ ಸಿನಿಮಾ ರಂಗದ ಹಲವು ತಾರೆಯರು ಭಾಗವಹಿಸಲಿದ್ದಾರೆ. 

36

ಇದರಲ್ಲಿ ಭಾರತದಿಂದ ನಿತೀಶ್‌ ತಿವಾರಿ ಅವರ ‘ರಾಮಾಯಣ’ ಟೀಮ್‌ಗೂ ಕರೆ ಹೋಗಿದೆ. ಈ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಮಾಯಣ ತಂಡ ಅಲ್ಲಿ ಅಪ್‌ಡೇಟ್ ಒಂದನ್ನು ನೀಡಲಿದೆ ಎನ್ನಲಾಗಿದೆ.

46

ಕಳೆದ ಒಂದು ವರ್ಷದಿಂದ ಈ ಸಿನಿಮಾಕ್ಕೆ ಶೂಟಿಂಗ್‌ ನಡೆಯುತ್ತಿದೆ. ಇತ್ತೀಚೆಗೆ ಸಿನಿಮೋತ್ಸವವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ನಾಯಕ ರಣಬೀರ್‌ ಕಪೂರ್‌, ರಾಮಾಯಣದ ಮೊದಲ ಭಾಗದ ನನ್ನ ಪಾತ್ರದ ಶೂಟಿಂಗ್‌ ಬಹುತೇಕ ಮುಕ್ತಾಯಗೊಂಡಿದೆ. 

56

ಈ ಸಿನಿಮಾದ ಮೂಲಕ ಭಾರತದ ಸರ್ವಶ್ರೇಷ್ಠ ಕಥೆಯೊಂದನ್ನು ಜಗತ್ತೇ ಮೆಚ್ಚುವ ರೀತಿಯಲ್ಲಿ ಜನರ ಮುಂದಿಡಲಿದ್ದೇವೆ ಎಂದಿದ್ದಾರೆ. ಯಶ್‌ ಸಹ ಇತ್ತೀಚೆಗೆ ಮಹಾಕಾಲೇಶ್ವರನಿಗೆ ಪೂಜೆ ಸಲ್ಲಿಸಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

66

ಸದ್ಯ ‘ರಾಮಾಯಣ’ದ ಮೊದಲ ಭಾಗದ ಫಸ್ಟ್‌ಲುಕ್‌ಗಾಗಿ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ. ಮುಂದಿನ ವರ್ಷ 2026ರ ದೀಪಾವಳಿ ವೇಳೆ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories