Shilpa Shetty: ಕೋಟಿಗಳ ವಂಚನೆ, ದಂಪತಿ ವಿರುದ್ಧ FIR ದಾಖಲು

Published : Nov 14, 2021, 01:43 PM ISTUpdated : Nov 14, 2021, 02:17 PM IST

Shilpa Shetty: ಬಾಲಿವುಡ್ ಕುಂದ್ರಾ ದಂಪತಿ ವಿರುದ್ಧ ಕೇಸ್ ಕೋಟಿಗಳ ವಂಚನೆ ಆರೋಪ, ಸ್ಟಾರ್ ದಂಪತಿಗೆ ಸಂಕಷ್ಟ

PREV
17
Shilpa Shetty: ಕೋಟಿಗಳ ವಂಚನೆ, ದಂಪತಿ ವಿರುದ್ಧ FIR ದಾಖಲು

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಉದ್ಯಮಿ ಪತಿ ರಾಜ್ ಕುಂದ್ರಾಗೆ ಮತ್ತೊಂದು ದೊಡ್ಡ ತೊಂದರೆ ಎದುರಾಗಿದೆ. ಶೆರ್ಲಿನ್ ಚೋಪ್ರಾ ನಡುವಿನ ಜಾಟಪಟಿ ಮಧ್ಯೆ ಇತ್ತೀಚಿನ ಸುದ್ದಿಯೊಂದರಲ್ಲಿ ಇಬ್ಬರೂ 1.51 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

27

ಮುಂಬೈ ಪೊಲೀಸ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪುಣೆಯ ಯುವಕ ಯಶ್ ಬರಾಯ್ ವಂಚನೆ ಮತ್ತು ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ದಂಪತಿ ಹಾಗೂ ಫ್ಯಾಷನ್ ಟಿವಿ ಎಂಡಿ ಕಾಶಿಫ್ ಖಾನ್ ವಿರುದ್ಧ ದೂರು ನೀಡಿದ್ದಾರೆ.

37

ಘಟನೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಮುಖವಾಗಿ, ಎಫ್‌ಐಆರ್ ಅನ್ನು ಹಲವು ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ. ಈ ಘಟನೆ ಜುಲೈ 2014 ರಲ್ಲಿ ನಡೆದಿದೆ ಎನ್ನಲಾಗುತ್ತಿದೆ.

47

ದೂರುದಾರರು ತಮ್ಮ ದೂರಿನಲ್ಲಿ ಕಾಶಿಫ್ ಖಾನ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು ಇತರರು ಫಿಟ್‌ನೆಸ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಕೇಳಿದರು. ಲಾಭದ ಭರವಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

57

ಆದರೆ ಅದು ನಡೆಯದ ಕಾರಣ ದೂರುದಾರರು ಹಣ ಕೇಳಿದಾಗ ಬೆದರಿಕೆ ಹಾಕಿದ್ದಾರೆ. ಆಪಾದಿತ ಅಶ್ಲೀಲ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ ಸಮಯದಿಂದ, ಕುಟುಂಬದ ಮೇಲೆ ಕಾನೂನು ತೊಂದರೆಗಳು ಹೆಚ್ಚುತ್ತಿರುವುದನ್ನು ಕಾಣಬಹುದು.

67

ಉದ್ಯಮಿ ಎರಡು ತಿಂಗಳ ಕಾಲ ಆರ್ಥರ್ ರೋಡ್ ಜೈಲಿನಲ್ಲಿದ್ದರು. ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಇತ್ತೀಚೆಗೆ, ಅವರು ಮತ್ತು ಶಿಲ್ಪಾ ಶೆಟ್ಟಿ ಅವರ ಹಿಮಾಚಲ ಪ್ರದೇಶ ಪ್ರವಾಸ ತೆರಳಿದ್ದರು. ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

77
Shilpa Shetty

ಆದರೆ ನಟಿ ನಗರಕ್ಕೆ ಹಿಂತಿರುಗಿದಾಗ ಅವರು ಒಬ್ಬಂಟಿಯಾಗಿ ಕಾಣಿಸಿಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ರಾಜ್ ಕುಂದ್ರಾ ಅವರೊಂದಿಗೆ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ, ಪ್ರವಾಸದಲ್ಲಿ ನಟಿ ತನ್ನ ಮಗಳು ಮತ್ತು ಮಗ ಜೊತೆಗಿದ್ದರು. ಕೆಲಸದ ಮುಂಭಾಗದಲ್ಲಿ, ಶಿಲ್ಪಾ ಹಂಗಾಮಾ 2 ಚಿತ್ರದೊಂದಿಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ.

Read more Photos on
click me!

Recommended Stories