ಹಿಂದಿ ಓಟಿಟಿ ಬಿಗ್ ಬಾಸ್ ಸ್ಪರ್ಧಿ ಕಮ್ ಸ್ಟೈಲಿಷ್ ಕಿರುತೆರೆ ನಟಿ ಉರ್ಫಿ ಜಾವೇದ್ ವಿರುದ್ಧ ಎಫ್‌ಐರಾ ದಾಖಲಾಗಿದೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಉರ್ಫಿ ಗರಂ ಆಗಿದ್ದಾರೆ.
ಪಬ್ಲಿಕ್‌ನಲ್ಲಿ ಅತಿ ಹೆಚ್ಚು ಮೈ ಕಾಣುವಂತ ಬಟ್ಟೆ ಧರಿಸಿ ಪ್ರಚೋದನೆಗೆ ಕಾರಣವಾಗುತ್ತಿರುವ ಉರ್ಫಿ ಭಾರತದ ಹೆಣ್ಣು ಮಕ್ಕಗಳ ಮನಸ್ಥಿತಿ ಮೇಲೆ ಪರಿಣಾಮ ಬೀರಲಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಬೀಪ್ ಪದಗಳನ್ನು ಬಳಸುವ ಮೂಲಕ ಮಾತು ಆರಂಭಿಸಿದ ಉರ್ಫಿ 'ನನಗೆ ಪಬ್ಲಿಸಿಟಿ ಬೇಕು ಎಂದು ಜನರು ತಿಳಿದುಕೊಂಡಿದ್ದಾರೆ ಆದರೆ ಯಾರಿಗೂ ಗೊತ್ತಿಲ್ಲ ಹೀಗೆ ಹೇಳುತ್ತಿರುವವರು ನನ್ನನ್ನು ಬಳಸಿಕೊಂಡು ಪಬ್ಲಿಸಿಟಿ ಗಳಿಸುತ್ತಿದ್ದಾರೆ' ಎಂದು ಉರ್ಫಿ ಮಾತನಾಡಿದ್ದಾರೆ.
'ಈ ಪ್ರಪಂಚ ಹೇಗಿದೆ ಅಂದ್ರೆ ರೇಪಿಸ್ಟ್‌ಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿಲ್ಲ ನನ್ನ ಮೇಲೆ ಎಫ್‌ಐಆರ್ ಹಾಕುತ್ತಿದ್ದಾರೆ. ನಾನು ಧರಿಸುವ ಬಟ್ಟೆ ನನ್ನ ಇಷ್ಟ ಬೇರೆ ಅವರಿಗೆ ಯಾಕೆ ಸಮಸ್ಯೆ ಕಾಡುತ್ತಿದೆ'
'ನನ್ನ ಇಷ್ಟ, ಏನು ಬೇಕಿದ್ದರೂ ಧರಿಸುವೆ, ಇದು ತಾಲಿಬಾನ್ ಅಲ್ಲ ಅಫ್ಘಾನಿಸ್ತಾನ ಅಲ್ಲ. ಒಂದು ಹೆಣ್ಣು ಧರಿಸುವ ಬಟ್ಟೆನ ಕಂಟ್ರೋಲ್ ಮಾಡಬೇಕು ಅಂದ್ರೆ ನೀವು ಅಲ್ಲಿಗೆ ಹೋಗಿ ಬಿಡಿ' ಎಂದು ಉರ್ಫಿ ಹೇಳಿದ್ದಾರೆ.
'ಎಫ್‌ಐಆರ್ ಹಾಕಿ ಏನು ಉಪಯೋಗ? ಪೊಲೀಸರ ಬಳಿ ಬೇರೆ ಕೇಸ್‌ಗಳು ಇರುತ್ತದೆ..ರೇಪ್, ಕಿರುಕುಳ, ಮರ್ಡರ್, ಕಳ್ಳತನ ಎಷ್ಟೊಂದು ಅದೆಲ್ಲಾ ಬಿಟ್ಟು ನನ್ನ ಬಟ್ಟೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರಾ?' ಎಂದಿದ್ದಾರೆ ಉರ್ಫಿ.
ಯಾರು ಯಾರ ವಿರುದ್ಧ ಬೇಕಿದ್ದರೂ ದೂರು ನೀಡಬಹುದು...ಪೊಲೀಸರು ತನಿಖೆ ಆರಂಭಿಸಲಿ ಎಂದು ಎಫ್‌ಐಆರ್ ಹಾಕಿದ್ದಾರೆ. ನನ್ನ ಜೀವನ ಬಗ್ಗೆ ಯಾಕೆ ನೀವೆಲ್ಲರೂ ತಲೆ ಕೆಡಿಸಿಕೊಳ್ಳುತ್ತಿರುವುದು ಎಂದು ಉರ್ಫಿ ಪ್ರಶ್ನೆ ಮಾಡಿದ್ದಾರೆ.