ಅರ್ಜುನ್‌ ಕಪೂರ್‌ ಜೊತೆ ಮದುವೆಗೆ yes ಅಂದ ಮಲೈಕಾ ಅರೋರಾ?

Published : Nov 10, 2022, 05:20 PM IST

ಬಾಲಿವುಡ್ ದಿವಾ ಮಲೈಕಾ ಅರೋರಾ (Malaika Arora) ತಮ್ಮ ಕೆಲಸಗಳಿಗಿಂತ ಹೆಚ್ಚಾಗಿ ಪ್ರೇಮ ಸಂಬಂಧಕ್ಕಾಗಿ ಮುಖ್ಯಾಂಶಗಳನ್ನು ಪಡೆದುಕೊಳ್ಳುತ್ತಾಳೆ. ತಮಗಿಂತ ಕಿರಿಯ ಬಾಯ್‌ಫ್ರೆಂಡ್‌ ಅರ್ಜುನ್ ಕಪೂರ್ (Arjun Kapoor) ಜೊತೆಗಿನ ನಿಕಟತೆಯಿಂದಾಗಿ ಅವರು ಚರ್ಚೆಯಲ್ಲಿದ್ದಾರೆ. ಅರ್ಬಾಜ್ ಖಾನ್‌ನಿಂದ ಬೇರ್ಪಡುವ ಮೊದಲೇ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ ಅದೇ ಸಮಯದಲ್ಲಿ, ಇತ್ತೀಚಿನ ಅಪ್‌ಡೇಟ್‌  ಪ್ರಕಾರ, ಮಲೈಕಾ   ಮದುವೆಯಾಗಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಮಲೈಕಾರ ಇನ್‌ಸ್ಟಾಗ್ರಾಮ್‌ನ ಪೋಸ್ಟ್‌ ಆಗಿದೆ. ಅಷ್ಟಕ್ಕೂ ಅಂತದೇನಿದೆ ಅದರಲ್ಲಿ?

PREV
16
  ಅರ್ಜುನ್‌ ಕಪೂರ್‌ ಜೊತೆ ಮದುವೆಗೆ yes ಅಂದ  ಮಲೈಕಾ ಅರೋರಾ?

ಮಲೈಕಾ ಅರೋರಾ ಅವರು  ಕೆಲವು ಗಂಟೇಗಳ ಹಿಂದೆ ತಮ್ಮ ಈ ಪೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಜೊತೆಗೆ  ಫೋಟೋಗೆ ಅವರು ನೀಡಿದ ಶೀರ್ಷಿಕೆ ಅಭಿಮಾನಿಗಳನ್ನು ಯೋಚಿಸುವಂತೆ ಮಾಡಿದೆ. 

26

ಮಲೈಕಾ ಅರೋರಾ ತಮ್ಮ ಸುಂದರವಾದ ಪೋಟೋಗೆ 'I said YESಎಂದು ಕ್ಯಾಪ್ಷನ್‌ ನೀಡಿದ್ದಾರೆ.ಈ ಶೀರ್ಷಿಕೆ ಕಾರಣದಿಂದ ತಕ್ಷಣವೇ ಅರ್ಜುನ್‌ ಕಪೂರ್‌ ಜೊತೆಯ ಮಲೈಕಾರ ಮದುವೆಯ ಸುದ್ದಿ ವೈರಲ್‌ ಆಗಿದೆ.

36

ಆದರೆ ಮಲೈಕಾ ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಅರ್ಜುನ್ ಕಪೂರ್ ಅವರನ್ನು  ಟ್ಯಾಗ್ ಮಾಡಿಲ್ಲ  ಅಥವಾ ಅರ್ಜುನ್‌ ಸಹ  ಏನು ಪ್ರತಿಕ್ರಿಯಿಸಿಲ್ಲ ಮತ್ತು  ಇದುವರೆಗೆ ಇಬ್ಬರಿಂದ ಈ ಬಗ್ಗೆ  ಯಾವುದೇ ತರಹದ ಅಧಿಕೃತ ಘೋಷಣೆ ಬಂದಿಲ್ಲ.

46

ಅರ್ಜುನ್ ಕಪೂರ್ ಮತ್ತು  ಮಲೈಕಾ ಅರೋರಾ ಅವರನ್ನು ಬಾಲಿವುಡ್‌ನ ಅತ್ಯಂತ ಸುಂದರ ಜೋಡಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಈ ಹಾಟ್ ಜೋಡಿ ಅಭಿಮಾನಿಗಳ ಫೇವರೇಟ್‌ ಕೂಡ ಹೌದು.


 

56

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ  ತಮ್ಮ ಪ್ರೀತಿಯನ್ನು ಆಗಾಗ್ಗೆ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ.


 

66

ಮಲೈಕಾ ಈ ಪೋಸ್ಟ್ ಅನ್ನು ಅರ್ಜುನ್ ಕಪೂರ್ ಎಂದು ಟ್ಯಾಗ್ ಮಾಡಿಲ್ಲ. ಇದರ ಹೊರತಾಗಿಯೂ ಮಲೈಕಾ ಮತ್ತು ಅರ್ಜುನ್ ಅವರಿಗೆ ಶುಭ ಹಾರೈಸಲು ಪ್ರಾರಂಭಿಸಿದ್ದಾರೆ. ಫ್ಯಾನಸ್‌ ಜೊತೆ ಕೆಲವು ಸೆಲಬ್ರೆಟಿಗಳು ಸಹ ಕಾಮೆಂಟ್‌ ಮಾಡಿದ್ದಾರೆ.

Read more Photos on
click me!

Recommended Stories