ಬೋಲ್ಡ್ ದೃಶ್ಯ, ಕಥೆಯಿಂದಾಗಿಯೇ ಭಾರತದಲ್ಲಿ ಬ್ಯಾನ್ ಆದ ಸಿನಿಮಾಗಳಿವು

Published : Apr 17, 2025, 11:30 AM ISTUpdated : Apr 17, 2025, 11:52 AM IST

ಭಾರತದ ಕೆಲವು ಸಿನಿಮಾಗಳು, ಅದರಲ್ಲಿನ ಬೋಲ್ಡ್ ಕಂಟೆಂಟ್ ಗಳಿಂದಾಗಿ ನಿಷೇಧವಾಗಿದ್ದೂ ಇವೆ. 2014ರವರೆಗೆ 5 ಸಿನಿಮಾಗಳು ಭಾರತದಲ್ಲಿ ನಿಷೇಧವಾಗಿವೆ. ಆ ಸಿನಿಮಾಗಳು ಯಾವುವು ನೋಡೋಣ.   

PREV
16
ಬೋಲ್ಡ್ ದೃಶ್ಯ, ಕಥೆಯಿಂದಾಗಿಯೇ ಭಾರತದಲ್ಲಿ ಬ್ಯಾನ್ ಆದ ಸಿನಿಮಾಗಳಿವು

ಸಿನಿಮಾ ಅಂದ್ರೆ ಮನರಂಜನೆ ನೀಡುವ ಮುಖ್ಯವಾದ ಒಂದು ಮಾರ್ಗವಾಗಿದೆ. ಇವತ್ತಿನ ದಿನಗಳಲ್ಲಿ ತುಂಬಾನೆ ಬೋಲ್ಡ್ ಆಗಿರುವ ಹಾಗೂ ವೈಲ್ಡ್ ಆಗಿರುವ, ಹಿಂಸೆಯಿಂದ ಕೂಡಿರುವ ಹಲವು ಸಿನಿಮಾಗಳು ಬಂದು ಹೋಗಿವೆ. ಆದರೆ 2014ರ ವರೆಗೆ ತನ್ನ ಬೋಲ್ಡ್ ಕಂಟೆಂಟ್ ಮತ್ತು ಹಿಂಸಾತ್ಮಕ ದೃಶ್ಯಗಳಿಂದಾಗಿ ಭಾರತದಲ್ಲಿ ಐದು ಸಿನಿಮಾಗಳು ಬ್ಯಾನ್ ಆಗಿವೆ. ಅವು ಯಾವುವು ನೋಡೋಣ. 
 

26

ಪಾಂಚ್ (2001): 
ಈ ಸಿನಿಮಾವು 1977 ಜೋಶಿ ಅಭ್ಯಂಕರ್ ಸೀರಿಯಲ್ ಮರ್ಡರ್ ಕಥೆಯಿಂದ ಪ್ರೇರಿತವಾಗಿದೆ. ಈ ಸಿನಿಮಾವು ಡಾರ್ಕ್ ಹಾಗೂ ತುಂಬಾನೆ ಇಂಟೆನ್ಸ್ ಆಗಿತ್ತು. ಸಿನಿಮಾದಲ್ಲಿ (Paanch) ಡ್ರಗ್ಸ್, ಹಿಂಸೆ, ಜಗಳ, ಬಂಡಾಯ ಎದ್ದ ಯುವಕರನ್ನು ತೋರಿಸಲಾಯಿತು. ಇದು ತುಂಬಾನೆ ಹಿಂಸೆಯಿಂದ ಕೂಡಿರೋದರಿಂದ ಸಿನಿಮಾವನ್ನು ಬ್ಯಾನ್ ಮಾಡಲಾಯಿತು.

36

ಕಾಮ ಸೂತ್ರ (ಎ ಟೇಲ್ ಆಫ್ ಲವ್) (1996) : 
ಈ ಸಿನಿಮಾ ಇಬ್ಬರು ಬೆಸ್ಟ್ ಫ್ರೆಂಡ್ ಗಳ ಕಥೆಯಾಗಿದೆ, ಇವರು ಫ್ರೆಂಡ್ಸ್ ಆಗಿದ್ದವರು ಕೊನೆಗೆ ಶತ್ರುಗಳಾಗಿ ಬದಲಾಗುತ್ತಾರೆ. ಈ ಸಿನಿಮಾವು (Kamasutra -A Tale of Love) ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಂಡಿದೆ. ಆದರೆ ಭಾರತದಲ್ಲಿ ಬ್ಯಾನ್ ಆಗಿತ್ತು. ಕಾರಣ ಈ ಸಿನಿಮಾದಲ್ಲಿ ಮಹಿಳೆಯರ ಆಸೆಗಳು ಮತ್ತು ಇಂಟಿಮೆಸಿ ಕುರಿತು ಬೋಲ್ಡ್ ಆಗಿ ತೋರಿಸಲಾಗಿದೆ. 

46

ಬಂಡಿತ್ ಕ್ವೀನ್ (1994)
ಈ ಸಿನಿಮಾ ಪೂಲನ್ ದೇವಿಯ (Phoolan Devi) ನಿಜ ಜೀವನವನ್ನು ಆಧರಿಸಿದ ಸಿನಿಮಾವಾಗಿತ್ತು. ಸಿನಿಮಾದಲ್ಲಿ ಆಕೆಯ ಜಾತಿ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧದ ಹೋರಾಟವನ್ನು ತೋರಿಸಲಾಗಿತ್ತು. ಪೂಲನ್ ದೇವಿ ಸ್ವತಃ ಸಿನಿಮಾದ ವಿರುದ್ಧ ನಿಂತಿದ್ದರಿಂದ ಚಿತ್ರವನ್ನು ಬ್ಯಾನ್ ಮಾಡಲಾಯಿತು. 

56

ಅನ್ ಫ್ರೀಡಮ್ (2014): 
ಇದು ಲೆಸ್ಬಿಯನ್ ಗಳ ಲವ್ ಸ್ಟೋರಿಯಾಗಿದ್ದು, ಇದರಲ್ಲಿ ಧರ್ಮಗಳ ಜಗಳ ಕೂಡ ಇದೆ. ಇಂಟಿಮೇಟ್ ದೃಶ್ಯಗಳು ಹಾಗೂ ಸೆನ್ಸಿಟಿವ್ ಟಾಪಿಕ್ ಬಗ್ಗೆ ತೋರಿಸಿದಕ್ಕಾಗಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಈ ಸಿನಿಮಾದ (Unfreedom) ನಿಷೇಧವು ಸ್ವಾತಂತ್ರ್ಯ ಮತ್ತು LGBTQ ಹಾಗೂ ಹಕ್ಕುಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. 

66

ದ ಪಿಂಕ್ ಮಿರರ್ (2004)
ಮಂಗಳಮುಖಿಯರ ಮೇಲೆ ಚಿತ್ರಿಸಲಾದ ಮೊದಲ ಭಾರತೀಯ ಚಿತ್ರ (The Pink Mirror) ಇದಾಗಿತ್ತು, ಈ ಸಿನಿಮಾದಲ್ಲಿ ಮಂಗಳಮುಖಿಯರ ಜೀವನದ ನಿಜವಾದ ಚಿತ್ರಣವನ್ನು ನೀಡಿತ್ತು. ಆದರೆ ಈ ಸಿನಿಮಾದಲ್ಲಿ ಟ್ರಾನ್ಸ್ ಸೆಕ್ಸುವಲ್ ಹಾಗೂ ಹೋಮೊ ಸೆಕ್ಸುವಲ್ ಕಂಟೆಂಟ್ ಇದ್ದ ಕಾರಣ ಸಿನಿಮಾವನ್ನು ಭಾರತದಲ್ಲಿ ನಿಷೇಧಿಸಲಾಯಿತು. 
 

Read more Photos on
click me!

Recommended Stories