FIFA 2022 - ಅಧಿಕೃತ ಫುಟ್‌ಬಾಲ್ ಗೀತೆಯನ್ನು ಹಾಡಲಿರುವ ನೋರಾ ಫತೇಹಿ

Published : Nov 10, 2022, 05:02 PM IST

ಈ ದಿನಗಳಲ್ಲಿ ಬಾಲಿವುಡ್‌ ನಟಿ ನೋರಾ ಫತೇಹಿ (Nora Fatehi) ಸುದ್ದಿಯಲ್ಲಿದ್ದಾರೆ.  ನೋರಾ ಫತೇಹಿ  ಲೈಫ್‌ನ ಬೆಸ್ಟ್ ಅವಕಾಶ ಪಡೆದಿದ್ದಾರೆ. ನಟಿ ಈ ವರ್ಷದ ಡಿಸೆಂಬರ್‌ನಲ್ಲಿ ಫಿಫಾ ವಿಶ್ವಕಪ್‌ನಲ್ಲಿ (FIFA World Cup 2022) ಪ್ರದರ್ಶನ ನೀಡಲಿದ್ದಾರೆ. ನೋರಾ ಫತೇಹಿ ರಾಪರ್ ನಿಕಿ ಮಿನಾಜ್ ಅವರೊಂದಿಗೆ ಅಧಿಕೃತ ಫುಟ್‌ಬಾಲ್ ಗೀತೆಯನ್ನು ಹಾಡಲಿದ್ದಾರೆ.  

PREV
17
FIFA 2022 -  ಅಧಿಕೃತ ಫುಟ್‌ಬಾಲ್ ಗೀತೆಯನ್ನು ಹಾಡಲಿರುವ ನೋರಾ ಫತೇಹಿ

ನೋರಾ ಪತೇಹಿ ಡಿಸೆಂಬರ್‌ನಲ್ಲಿ ಫಿಫಾ ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡುವ ಅವಕಾಶ ಪಡೆಯುವ ಮೂಲಕ ಜೆನ್ನಿಫರ್ ಲೋಪೆಜ್ ಮತ್ತು ಶಕೀರಾ ಸಾಲಿಗೆ ಸೇರಿದ್ದಾರೆ. ಈ ಈವೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
 

27

ನೋರಾ ಫತೇಹಿ FIFA ವಿಶ್ವಕಪ್ 2022 ರ ಅಧಿಕೃತ ಫುಟ್‌ಬಾಲ್ ಹಾಡು 'ಲೈಟ್ ದಿ ಸ್ಕೈ' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂತರಾಷ್ಟ್ರೀಯ ಕಲಾವಿದೆ ನಿಕಿ ಮಿನಾಜ್ ಜೊತೆಗೆ ನಟಿ ತಮ್ಮ ಧ್ವನಿಯನ್ನು ನೀಡಲಿದ್ದಾರೆ.
 

37

FIFA ವಿಶ್ವ ಕಪ್ 2022 ಕತಾರ್‌ನಲ್ಲಿ ನವೆಂಬರ್ 20 ರಂದು ಅದ್ದೂರಿ ಮತ್ತು ಕಣ್ಮನ ಸೆಳೆಯುವ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಕತಾರ್‌ನ ಅಲ್-ಖೋರ್‌ನಲ್ಲಿರುವ ಅಲ್-ಬೈತ್ ಕ್ರೀಡಾಂಗಣದಲ್ಲಿ FIFA ವಿಶ್ವಕಪ್ ಉದ್ಘಾಟನಾ ಸಮಾರಂಭವು ಬಾಲಿವುಡ್ ಸೂಪರ್ ಸ್ಟಾರ್ ನೋರಾ ಫತೇಹಿ, ದುವಾ ಲಿಪಾ ಮತ್ತು ಶಕೀರಾ ಅಂತಹ  ಕಲಾವಿದರನ್ನು ಒಳಗೊಂಡಿರುತ್ತದೆ. 

47

ಈ ನಡುವೆ , 'ವಾಕಾ ವಾಕಾ' ಗಾಯಕ ದುವಾ ಲಿಪಾ ಮತ್ತು ಕೊರಿಯನ್ ಕೆ-ಪಾಪ್ ಗುಂಪಿನ ಬಿಟಿಎಸ್ ಜೊತೆಗೂಡಲಿದ್ದಾರೆ. ನೋರಾ ಫತೇಹಿ ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ಕೂಡ ಡ್ರೀಮ್‌ ಟೀಮ್‌ನ ಭಾಗವಾಗಲಿದ್ದಾರೆ.
 

57

ಫೀಫಾ ವಿಶ್ವಕಪ್ 2022 ರ ಅಧಿಕೃತ ಫುಟ್‌ಬಾಲ್ ಹಾಡು ಲೈಟ್ ದಿ ಸ್ಕೈನಲ್ಲಿ ನಟಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ. ಅಂತರಾಷ್ಟ್ರೀಯ ಕಲಾವಿದೆ ನಿಕಿ ಮಿನಾಜ್ ಜೊತೆಗೆ ನಟಿ ತಮ್ಮ ಧ್ವನಿಯನ್ನು ನೀಡಲಿದ್ದಾರೆ.
 

67

ವಿಶ್ವದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ಸ್ಪರ್ಧೆಗಳಲ್ಲಿ ಭಾರತದ ನಟಿಯೊಬ್ಬರು ಭಾರತವನ್ನು ಪ್ರತಿನಿಧಿಸುವುದು ಹೆಮ್ಮೆಯ ಕ್ಷಣವಾಗಿದೆ. ಫಿಫಾ ವಿಶ್ವಕಪ್‌ನಲ್ಲಿ ನೋರಾ  ಅವರು ಅಲ್ಲಿ ನೇರ ಪ್ರದರ್ಶನ ನೀಡಲಿದ್ದಾರೆ. ಈ ಸಂದರ್ಭದಲ್ಲಿ ನಟಿ ಹಿಂದಿ ಹಾಡನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.

77

ಉದ್ಘಾಟನಾ ಸಮಾರಂಭದ ಇತರ ಪ್ರದರ್ಶಕರಲ್ಲಿ ಬ್ಲ್ಯಾಕ್ ಐಡ್ ಪೀಸ್, ಜೆ ಬಾಲ್ವಿನ್ ಮತ್ತು ನೈಜೀರಿಯನ್ ಸಂಗೀತ ಸೂಪರ್‌ಸ್ಟಾರ್ ಪ್ಯಾಟ್ರಿಕ್ ನಾಮೆಕಾ ಒಕೋರಿ ಸೇರಿದ್ದಾರೆ. ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವಿನ ಗ್ರೂಪ್ A ನ ಮೊದಲ ಪಂದ್ಯದ ಮೊದಲು ಫೀಫಾ  ಈ ಸಂದರ್ಭಕ್ಕಾಗಿ ಇನ್ನೂ ತಂಡವನ್ನು ಬಿಡುಗಡೆ ಮಾಡಬೇಕಾಗಿದೆ

 

Read more Photos on
click me!

Recommended Stories