Father's Day 2023: ಬಾಲಿವುಡ್ ತಾರೆಯರ ಪ್ರಸಿದ್ಧ ಅಪ್ಪಂದಿರು ಇವರು!

First Published | Jun 15, 2023, 5:37 PM IST

ಬಾಲಿವುಡ್ ಇಂಡಸ್ಟ್ರಿಯಲ್ಲಿ ಇಂತಹ ಅನೇಕ ತಾರೆಯರಿದ್ದಾರೆ, ಅವರ ತಂದೆ ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಅವರಲ್ಲಿ ಅಭಿಷೇಕ್ ಬಚ್ಚನ್ ಅವರ ತಂದೆ ಅಮಿತಾಬ್ ಬಚ್ಚನ್ ಆಗಲಿ ಅಥವಾ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಆಗಲಿ ಅಥವಾ ಆರ್ಯನ್ ಖಾನ್ ಅವರ ತಂದೆ ಶಾರುಖ್ ಖಾನ್ ಇರಬಹುದು. ಬಾಲಿವುಡ್‌ನ  ಫೇಮಸ್‌ ತಂದೆ ಮಗನ ಜೋಡಿಗಳು ಇವರು.

ಅಮಿತಾಬ್ ಬಚ್ಚನ್-ಅಭಿಷೇಕ್ ಬಚ್ಚನ್:
ಅಭಿಷೇಕ್ ಬಚ್ಚನ್ ಅವರ ತಂದೆ ಅಮಿತಾಭ್ ಬಚ್ಚನ್ ಅವರನ್ನು ವಿಶ್ವದಾದ್ಯಂತ ಮಿಲೇನಿಯಮ್ ಸ್ಟಾರ್ ಎಂದು ಕರೆಯುತ್ತಾರೆ. ಬಿಗ್ ಬಿ ಅವರು ತಮ್ಮ ವೃತ್ತಿಜೀವನದ (Career) ಆರಂಭದಲ್ಲಿ ಅನೇಕ ಹಿನ್ನಡೆಗಳನ್ನು ಎದುರಿಸಿ ಫ್ಲಾಪ್  ಹೀರೋ ಎಂಬ ಟ್ಯಾಗ್ ಪಡೆದಿರಬಹುದು, ಆದರೆ ಜಂಜೀರ್ ಚಿತ್ರ ಬಿಡುಗಡೆಯಾದ ನಂತರ ಅವರು ಹಿಂತಿರುಗಿ ನೋಡಲಿಲ್ಲ. ಒಂದಕ್ಕಿಂತ ಹೆಚ್ಚು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ ಅವರು ಇಂದಿಗೂ 79ರ ಹರೆಯದಲ್ಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

ಸಲೀಂ ಖಾನ್ - ಸಲ್ಮಾನ್ ಖಾನ್:
ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೀರೋ ಆಗಲು ಬಂದು ಕೆಲವು ಚಿತ್ರಗಳಲ್ಲಿ ನಟಿಸಿದ್ದರು, ಆದರೆ  ಸಲೀಮ್ ನಟನಾ ವೃತ್ತಿಜೀವನದಲ್ಲಿ ಹೆಚ್ಚಿನ ಸಕಸ್ಸ್‌ ಕಾಣಲಿಲ್ಲ ಮತ್ತು ಅವರು ಚಿತ್ರಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ಅವರು ಜಾವೇದ್ ಅಖ್ತರ್ ಅವರೊಂದಿಗೆ ಸೇರಿಕೊಂಡರು ಮತ್ತು ಅವರು ಒಂದಕ್ಕಿಂತ ಹೆಚ್ಚು ಹಿಟ್‌ ಚಿತ್ರಗಳ ಕಥೆಯನ್ನು ಬರೆದರು.

Tap to resize

ರಾಜ್ ಕಪೂರ್- ರಿಷಿ ಕಪೂರ್:
ರಿಷಿ ಕಪೂರ್ ಅವರ ತಂದೆ ರಾಜ್ ಕಪೂರ್ ಪ್ರಪಂಚದಾದ್ಯಂತ ಶೋಮ್ಯಾನ್ ಎಂದು ಪ್ರಸಿದ್ಧರಾಗಿದ್ದಾರೆ. ರಾಜ್ ಕಪೂರ್ ನಟನಾ ಲೋಕಕ್ಕೆ ಕಾಲಿಟ್ಟಾಗ ಯಾರಿಂದಲೂ ಬೆಂಬಲ ಸಿಗಲಿಲ್ಲ. ಅವರ ತಂದೆ ಪೃಥ್ವಿರಾಜ್ ಕಪೂರ್ ಅವರನ್ನು ಬೆಂಬಲಿಸಲು ನಿರಾಕರಿಸಿದರು. ರಾಜ್ ಕಪೂರ್ ಚಿಕ್ಕವಯಸ್ಸಿನಲ್ಲೇ ಸ್ವಂತವಾಗಿ ಸಿನಿಮಾ ಮಾಡಿ ನಟಿಸಿದ್ದರು ಎನ್ನಲಾಗಿದೆ. ಅವರ ಚಿತ್ರಗಳಾದ ಶ್ರೀ 420, ಆವಾರಾ, ಬರ್ಸಾತ್ ಇನ್ನೂ ವಿದೇಶಗಳಲ್ಲಿ  ಪ್ರೀತಿಪಾತ್ರರಾಗಿದ್ದಾರೆ.  ರಿಷಿ ಕಪೂರ್ ಮತ್ತು ರಾಜ್‌ ಕಪೂರ್‌ ಇಬ್ಬರೂ ಇಂದು ನಮ್ಮ ಜೊತೆ ಇಲ್ಲ. 

ಸುನೀಲ್ ದತ್‌ - ಸಂಜಯ್ ದತ್:
ಸಂಜಯ್ ದತ್ ಅವರ ತಂದೆ ಸುನೀಲ್ ದತ್ ಅವರ ಯುಗದ ಅದ್ಭುತ ನಟ. ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅವರು ನಟನೆಯೊಂದಿಗೆ ಚಲನಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ತೆಗೆದುಕೊಂಡರು. ಫ್ಲಾಪ್ ಆಗುತ್ತಿದ್ದ ನಟರಿಗೆ ಅವಕಾಶ ನೀಡಿದ ಸ್ಟಾರ್ ಸುನಿಲ್. ಸುನಿಲ್ ದತ್ತಾ ಅವರ ಮದರ್ ಇಂಡಿಯಾ  ಚಲನಚಿತ್ರವು ಮೊದಲ ಬಾರಿಗೆ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಸಿನಿಮಾವಾಗಿದೆ.

ಶಾರುಖ್ ಖಾನ್-ಆರ್ಯನ್ ಖಾನ್:
ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವ ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ಇಂದು ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ. ದೆಹಲಿಯಲ್ಲಿ ರಂಗಭೂಮಿಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಶಾರುಖ್, ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಹೇಮಾ ಮಾಲಿನಿ ಅವರನ್ನು ದಿಲ್ ಆಶ್ನಾ ಹೈ ಚಿತ್ರದ ಮೂಲಕ ಬಾಲಿವುಡ್‌ಗೆ ಕರೆತಂದರೂ, ಅವರ ಮೊದಲ ಚಿತ್ರ ದೀವಾನಾ ಬಿಡುಗಡೆಯಾಯಿತು ಮತ್ತು ಅವರು ರಾತ್ರೋರಾತ್ರಿ ಸ್ಟಾರ್ ಆದರು.

Latest Videos

click me!