ಇತ್ತೀಚೆಗೆ ಇನ್‌ಸ್ಟ್ರಾಮ್‌ನಲ್ಲಿ ಆಯೋಜಿಸಲಾದ ಪ್ರಶ್ನೋತ್ತರ ಸೆಶನ್‌ನಲ್ಲಿ ಮಸಾಬಾ ಗುಪ್ತಾ ತಮ್ಮ ಡಯಟ್ ಮತ್ತು ಪಿಸಿಒಡಿಯನ್ನು ಕಂಟ್ರೋಲ್ ಮಾಡಲು ಕೆಲವು ಆಹಾರವನ್ನು ಹೇಗೆ ಆವಾಯಿಡ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಈ ಡಿಸೈನರ್ ಅವರ ಆಹಾರ, ಫಿಟ್ನೆಸ್ ಮಂತ್ರ ಮತ್ತು ನಟಿ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳಿಗೆ ಬೋಲ್ಡ್ ಆಗಿ ಉತ್ತರಿಸಿದ್ದಾರೆ.
ಆರೋಗ್ಯಕರ ಪಾನೀಯವಾಗಿ, ಬೂದ ಕುಂಬಳದ ಜ್ಯೂಸ್‌ಗೆ ಸ್ವಲ್ಪ ಹಿಮಾಲಯನ್ ಸಾಲ್ಟ್ ಅನ್ನು ಸೇರಿಸಲು ಫಾಲೋವರ್ಸ್‌ಗೆ ಸಲಹೆ ನೀಡಿದ್ದಾರೆ.
ಡೈರಿ ಮತ್ತು ಕರಿದ ಆಹಾರ ಪದಾರ್ಥಗಳಂತಹ ಆಹಾರಗಳು ಪಿಸಿಒಡಿಯನ್ನು ಹೆಚ್ಚು ಪ್ರಚೋದಿಸುವುದರಿಂದ ಅದನ್ನು ಆವೈಡ್ಮಾಡಬಹುದು ಎಂದಿದ್ದಾರೆ.
ಮಸಾಬಾ ಫಿಟ್ನೆಸ್ ಫೀಕ್, ವರ್ಕೌಟ್ ಬಗ್ಗೆ ಕೇಳಿದಾಗ ವಾರಕ್ಕೆ ಕನಿಷ್ಠ 6 ಬಾರಿ 45-60 ನಿಮಿಷಗಳವರೆಗೆ ವರ್ಕೌಟ್ ಮಾಡುವುದಾಗಿ ಬಹಿರಂಗಪಡಿಸಿದ್ದಾರೆ.
ಮನೆಯ ಊಟ ಬೆಸ್ಟ್ ಎನ್ನುತ್ತಾರೆ. ಅವರ ಊಟದಲ್ಲಿ ಅಕ್ಕಿ, ಜೋಳ ಅಥವಾ ಹುರುಳಿ ರೊಟ್ಟಿ, ಪಲ್ಯ ಸ್ವಲ್ಪ ಸಿಹಿ ಇರುತ್ತಂತೆ.
ತನ್ನ ಫಾಲೋವರ್ಸ್‌ಗೆಆದಷ್ಟು ಮದ್ಯದಿಂದ ದೂರವಿರುವಂತೆ ಸೂಚಿಸಿದ್ದಾರೆ ನೀನಾ ಗುಪ್ತಾ ಮಗಳು.
ಆಗಾಗ ಉಪವಾಸ ಮಾಡುತ್ತಾರಂತೆ ಮಸಾಬಾ.ದಿನದಲ್ಲಿ ಮಧ್ಯಾಹ್ನ ಮತ್ತು ರಾತ್ರಿಊಟ ಸ್ವಲ್ಪ ಹೆಚ್ಚಿರುತ್ತಂತೆ. ಮದ್ಯ ಮದ್ಯನಟ್ಸ್ ಅನ್ನು ಸ್ನಾಕ್ಸ್ ಆಗಿ ಸೇವಿಸುತ್ತಾರಂತೆ ಮಸಾಬಾ.
ಆರೋಗ್ಯಕರ ಡಯಟ್ ಫಾಲೋ ಮಾಡದೇತೂಕ ಇಳಿಸಿಕೊಳ್ಳಬಹುದಾ, ಎಂದು ಕೇಳಿದಾಗ,ನೀವು ಕನಿಷ್ಠ ಶೇಕಡ 80ರಷ್ಟು ಸರಿಯಾಗಿ ತಿನ್ನಬೇಕು. (ಬಹುಶಃ ಸೋಮವಾರದಿಂದ ಶುಕ್ರವಾರದವರೆಗೆ) ಎನ್ನುತ್ತಾರೆ ನೀನಾ ಪುತ್ರಿ.
ಮಸಾಬಾಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯಳಾಗಿದ್ದಾರೆ. ಅವರು ಕೊನೆಯ ಬಾರಿಗೆ ತಾಯಿ ನೀನಾ ಗುಪ್ತಾ ಜೊತೆ ನೆಟ್‌ಫ್ಲಿಕ್ಸ್‌ನಲ್ಲಿ ಮಸಾಬಾ ಮಸಾಬಾದಲ್ಲಿ ಕಾಣಿಸಿಕೊಂಡರು.