ಹಾಲಿವುಡ್‌ ಸ್ಟಾರ್ಸ್‌ಗೆ ಹೋಲಿಸಿದ ಟ್ವೀಟ್‌ನಿಂದ ಸಖತ್‌ ಟ್ರೋಲ್‌ ಆದ ಕಂಗನಾ!

Suvarna News   | Asianet News
Published : Feb 12, 2021, 09:56 AM ISTUpdated : Feb 12, 2021, 09:59 AM IST

ಬಾಲಿವುಡ್‌ ನಟಿ ಕಂಗನಾ ರಣಾವತ್‌ ವಿವಾದಗಳಿಗೆ ಫೇಮಸ್‌. ಭಾರತದಲ್ಲಿ ನಡೆಯುವ ಪ್ರತಿಯೊಂದೂ ವಿಷಯದ ಬಗ್ಗೆ ಮಾತನಾಡುವ ನಟಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ತಮ್ಮ ಸ್ವಯಂ ಪ್ರಶಂಸೆ ಮತ್ತು ಸೊಕ್ಕಿನಿಂದಾಗಿ ನಟಿ ಸಾಮಾನ್ಯ ಜ್ಞಾನವನ್ನು ಕಳೆದುಕೊಂಡಿದ್ದಾರೆ ಎಂದು ಅನೇಕ ನೆಟಿಜನ್ಸ್‌ ಮತ್ತು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಕಂಗನಾ ಇತ್ತೀಚೆಗೆ ಮಾಡಿದ ಟ್ವೀಟ್‌. ಕಂಗನಾ ಮಾಡಿದ ಟ್ಟೀಟ್‌ ಏನು?

PREV
18
ಹಾಲಿವುಡ್‌ ಸ್ಟಾರ್ಸ್‌ಗೆ ಹೋಲಿಸಿದ ಟ್ವೀಟ್‌ನಿಂದ ಸಖತ್‌ ಟ್ರೋಲ್‌ ಆದ ಕಂಗನಾ!

ಇತ್ತೀಚೇಗೆ ಕಂಗನಾ ತಮ್ಮ ಧಕಾಡ್ ಚಿತ್ರದ ಫೋಟೋವನ್ನು ಹಂಚಿಕೊಂಡು, ಪರದೆ ಮೇಲೆ ಪರಿಪೂರ್ಣತೆಯೊಂದಿಗೆ ಯಾವುದೇ ರೀತಿಯ ಪಾತ್ರ ನಿರ್ವಹಿಸಬಲ್ಲ ವಿಶ್ವದ ಏಕೈಕ ನಟಿ (ಹಾಲಿವುಡ್ ಮತ್ತು ಬಾಲಿವುಡ್) ಎಂದು ಹೇಳಿಕೊಂಡಿದ್ದಾರೆ. 

28

ಮೆರಿಲ್ ಸ್ಟ್ರೀಪ್ ಮತ್ತು ಗಾಲ್ ಗಡೊಟ್ ಅವರಂಥ ದೊಡ್ಡ ಹಾಲಿವುಡ್ ಸ್ಟಾರ್‌ಗಳೊಂದಿಗೆ ಅವರು ತಮ್ಮನ್ನು ಹೋಲಿಸಿಕೊಂಡಿದ್ದಕ್ಕೆ ನೆಟ್ಟಿಗ್ಗರು ಇದನ್ನು ತೀವ್ರವಾಗಿ ಟೀಕಿಸಿದ್ದಾರೆ. 

38

ನಾನು ಮೆರಿಲ್ ಸ್ಟ್ರೀಪ್‌ನಂತೆ ಸಹಜವಾಗಿ ನಟಿಸಬಲ್ಲೆ. ಗಾಲ್ ಗಡೊಟ್‌ನಂತೆ ಆ್ಯಕ್ಷನ್ ಮತ್ತು ಗ್ಲಾಮರ್ ಕೂಡ ಮಾಡಬಲ್ಲೆ, ಎಂದು ತಮ್ಮನ್ನು ಹಾಲಿವುಡ್ ನಟಿಯರಿಗೆ ಹೋಲಿಸಿಕೊಂಡಿದ್ದಾರೆ ಬಾಲಿವುಡ್ ಕ್ವಿನ್ ಕಂಗನಾ. ಕಂಗನಾಗೆ ಪ್ರತಿಭೆ ಇರೋದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ತಮ್ಮನ್ನು ತಾವೇ ಈ ರೀತಿ ಹೊಗಳಿ ಕೊಳ್ಳುತ್ತಿರುವುದಕ್ಕೆ ನೆಟ್ಟಿಗರೂ ಗರಂ ಆಗಿದ್ದಾರೆ. 

48

ಈ ಭೂಮಿಯಲ್ಲಿ ನನ್ನಂತೆ ಯಾರಾದಾರೂ ನಟನೆ ತೋರಿ, ಡಿಮ್ಯಾಂಡ್ ಪ್ರದರ್ಶಿಸಿದರೆ, ತಮ್ಮ ದುರಹಂಕಾರವನ್ನು ತ್ಯಜಿಸುವುದಾಗಿಯೂ ಚಾಲೆಂಚ್ ಮಾಡಿದ್ದಾರೆ. ಈ ಬಗ್ಗೆ ಎಂಥದ್ದೇ ಚರ್ಚೆ ಮಾಡಲು ನಾನು ಸಿದ್ಧವೆಂದು ಮಣಿಕರ್ಣಿಕಾ ನಟಿ ಹೇಳಿದ್ದಾರೆ. 

58

ನಟಿಯ ಈ ಪ್ರಶಂಸೆಗೆ ನೆಟ್ಟಿಗರೂ ಫುಲ್ ಗರಂ ಆಗಿದ್ದಾರೆ. ಇಷ್ಟು ದಿನ ಸಪೋರ್ಟ್ ಮಾಡುತ್ತಿದ್ದವರೂ ಇದೀಗ ಅತೀ ಆಯಿತು ಕಂಗನಾದ್ದು ಎನ್ನಲು ಶುರು ಮಾಡಿದ್ದಾರೆ.

68

'ಸೊಕ್ಕು ರಾವಣನನ್ನು ಸೋಲಿಸಿತು. ಆದ್ದರಿಂದ ಕೇರ್‌ಫುಲ್‌. ಇದು ಯಾವುದೇ ಕಲಾವಿದೆ ಬೆಳೆಯಲು ಒಳ್ಳೆಯದಲ್ಲ. ನಾನು ನಿಮ್ಮ ಪ್ರಾಮಾಣಿಕತೆಯನ್ನು ಇಷ್ಟಪಡುತ್ತಿದ್ದೆ. ಈಗಲೂ ಪಡುತ್ತೇನೆ. ಆದರೆ ನಿಮ್ಮ ವಿವೇಕವನ್ನು ಈಗೀಗ ಅನುಮಾನಿಸುತ್ತಿದ್ದೇನೆ,' ಎಂದು ಒಬ್ಬ ಯೂಸರ್‌ ನಟಿಯನ್ನು ರಾವಣನೊಂದಿಗೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ.

78

'ನೀವು ಜೀವನದಲ್ಲಿ ಮೇಲೆ ಬರಲು ಶ್ರಮಿಸಿದ್ದೀರಿ ಎಂಬುವುದು ಗೊತ್ತು. ಒಬ್ಬ ನುಷ್ಯನಾಗಿ ಮೆಚ್ಚುಗೆ ನಿರೀಕ್ಷಿಸುವುದು ಸಹಜ. ಆದರೆ, ಸ್ವಯಂ ಗೀಳು ನಿಮ್ಮನ್ನು ಸೆಲ್ಫ್‌ ಡ್ಯಾಮೇಜ್‌ನತ್ತ ಕೊಂಡೊಯ್ಯುತ್ತಿದೆ. ನಿಮಗೆ ಇದು ಸೂಟ್‌ ಆಗುವುದಿಲ್ಲ,' ಎಂದು ಫೇಸ್‌ಬುಕ್ ಯೂಸರ್‌ ದಿವ್ಯಾ ಕಾಕಾ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

88

ಕಂಗನಾ ರಣಾವತ್ ತಲೈವಿ ಸಿನಿಮಾದಲ್ಲಿ ತಮಿಳು ರಾಜಕಾರಣಿ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories