ಭಾರತ- ಪಾಕ್ ಪಂದ್ಯ- ಕೊಹ್ಲಿ ಔಟಾದಾಗ ಅನುಷ್ಕಾ ಅಪ್‌ಸೆಟ್; ಫ್ಯಾನ್ಸ್‌ ಪ್ರತಿಕ್ರಿಯೆ ಇದು!

First Published | Jun 10, 2024, 4:35 PM IST

ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ T20 ವಿಶ್ವಕಪ್ ಪಂದ್ಯಕ್ಕೆ ಅನುಷ್ಕಾ ಶರ್ಮಾ ಸಾಕ್ಷಿಯಾಗಿದ್ದರು. ಪತಿ ವಿರಾಟ್ ಕೊಹ್ಲಿ ಕಡಿಮೆ ಸ್ಕೋರ್‌ಗೆ ಔಟಾದ ನಂತರ  ಮತ್ತು ಭಾರತದ ಗೆಲುವಿನ ನಂತರದ ಅನುಷ್ಕಾ ಅವರ ಪ್ರತಿಕ್ರಿಯೆಗಳು ಸಖತ್‌ ವೈರಲ್‌ ಆಗಿವೆ

ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದಲ್ಲಿ ಬಾಲಿವುಡ್ ನಟಿ ಹಾಗೂ ಕ್ರಿಕೆಟರ್‌ ವಿರಾಟ್‌ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದರು.

ಪಂದ್ಯದ ವೇಳೆ ಅನುಷ್ಕಾ ಶರ್ಮಾ ಹಲವಾರು ಭಾವನೆಗಳನ್ನು ಪ್ರದರ್ಶಿಸಿದರು ಮತ್ತು ಈ ಸಮಯದ ಅವರ ಪೋಟೋಗಳು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿವೆ.

Tap to resize

ಕೇವಲ ನಾಲ್ಕು ರನ್ ಗಳಿಸಿ ನಸೀಮ್ ಶಾ ಎಸೆತದಲ್ಲಿ ಉಸ್ಮಾನ್ ಖಾನ್‌ಗೆ ಕ್ಯಾಚ್ ನೀಡಿ  ವಿರಾಟ್ ಕೊಹ್ಲಿ ಪಂದ್ಯದ ಆರಂಭದಲ್ಲಿ ಔಟಾದಾಗ ಅನುಷ್ಕಾ ಅತೀವ ನಿರಾಶೆಗೊಂಡರು.

ತನ್ನ ಆರಂಭಿಕ ನಿರಾಶೆ ಹೊರತಾಗಿಯೂ, ಅನುಷ್ಕಾ ನಂತರ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಸಂಭ್ರಮಿಸುತ್ತಿರುವುದನ್ನು ನೋಡಬಹುದು. ಆಕೆಯ ಸಂತೋಷದ ಕ್ಷಣಗಳ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಕ್ಷಮಿಸಿ, ಅವರು (ವಿರಾಟ್) ಮುಂಬರುವ ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಾರೆಂದು ಒಬ್ಬರು ಟ್ವೀಟ್ ಮಾಡಿದ್ದಾರೆ.  'ಯಾವುದೇ ಆಟದಲ್ಲಿ, ನೀವು ಗೆಲ್ಲುತ್ತೀರಿ ಅಥವಾ ಸೋಲುತ್ತೀರಿ'  ಎಂದು ಮತ್ತೊಬ್ಬರು ಬರೆದಿದ್ದಾರೆ. 'ಏನೇ ಆಗಲಿ ಕಿಂಗ್ ಈಸ್ ಕಿಂಗ್!'  ಎಂದು ವಿರಾಟ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಅದೇ ರೀತಿ ಅನುಷ್ಕಾರ ಸಂತೋಷದ ಫೋಟೋಗಳಿಗೂ ಕಾಮೆಂಟ್‌ ಮಾಡಿದ್ದಾರೆ

ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಎಲ್ಲಾ ಕ್ರಿಕೆಟರ್ಸ್ ಪತ್ನಿಯರೂ ಒಟ್ಟಿಗೆ ಪೋಸ್ ಮಾಡುತ್ತಿರುವ ಸಂತೋಷದ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ  ಅನುಷ್ಕಾ ಸ್ಟ್ಯಾಂಡ್‌ನಲ್ಲಿ ಎಲ್ಲರೊಂದಿಗೆ ಪೋಸ್ ನೀಡಿದ್ದರು.

ಪಂದ್ಯಕ್ಕೂ ಮುನ್ನ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ನ್ಯೂಯಾರ್ಕ್ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು. ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಿರಾಟ್ ಕಾಫಿ ಕಪ್ ತೆಗೆದುಕೊಂಡು ಹೋಗುತ್ತಿರುವಾಗ ಅನುಷ್ಕಾ ಜೊತೆಗಿದ್ದರು. ದಂಪತಿ ತಮ್ಮ ಕಾಫಿಯನ್ನು ತೆಗೆದುಕೊಂಡ ನಂತರ ತಮ್ಮ ಕಾರಿಗೆ ಹೋಗುತ್ತಿರುವುದನ್ನು ಸೆರೆ ಹಿಡಿಯಲಾಗಿದೆ.

ಟ್ವೆಂಟಿ 20 ವಿಶ್ವಕಪ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ  ಪಾಕಿಸ್ತಾನದ ವಿರುದ್ಧದ ಮ್ಯಾಚ್‌ನಲ್ಲಿ ಭಾರತ ಕಡಿಮೆ ಸ್ಕೋರ್ ಮಾಡಿತ್ತು ಕಡಿಮೆ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರು ಪ್ರಮಖ ಪಾತ್ರವಹಿಸಿದರು ಮತ್ತು  ಭಾರತ ಆರು ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು.

Latest Videos

click me!