ಎಸ್ಎಸ್ ರಾಜಮೌಳಿ ಅವರ ಬಾಹುಬಲಿ ನಂತರದ ಬಹುನಿರೀಕ್ಷಿತ ಸಿನಿಮಾ ತ್ರಿಬಲ್ ಆರ್
ಇದರಲ್ಲಿ ಬಹಳಷ್ಟು ಪ್ರಮುಖ ಕಲಾವಿದರು ನಟಿಸುತ್ತಿದ್ದು ಇತ್ತೀಚೆಗಷ್ಟೇ ನಟಿ ಆಲಿಯಾ ಭಟ್ ಅವರ ಸೀತಾ ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ.
ಇದೀಗ ಸೀತಾ ಪಾತ್ರಕ್ಕೆ ಆಲಿಯಾ ಬದಲು ಅನುಷ್ಕಾ ಶೆಟ್ಟಿ ಇರ್ತಿದ್ರೆ ಹೇಗಿರ್ತಿದ್ರು ಅಂತ ಮಾತಾಡ್ಕೊಳ್ತಿದ್ದಾರೆ ಫ್ಯಾನ್ಸ್.
ಫಸ್ಟ್ ಲುಕ್ ರಿಲೀಸ್ ಆಗಿ ಅಷ್ಟು ಬೇಗ ಸೀತಾ ಲುಕ್ನಲ್ಲಿ ಅನುಷ್ಕಾರನ್ನು ಅಳವಡಿಸಿ ನೋಡಿದ್ದಾರೆ.
ಎಂದಿನಂತೆಯೇ ಅನುಷ್ಕಾ ಸೀತಾದಂತಹ ಪಾತ್ರಕ್ಕೇ ಮಾಡಿದವರೇನೋ ಎಂಬಷ್ಟು ಒಪ್ಪುವಂತಿದೆ ಫೋಟೋ
ಆಲಿಯಾ ಭಟ್ ಇತ್ತೀಚೆಗಷ್ಟೇ ತ್ರಿಬಲ್ ಆರ್ ಸೆಟ್ ಸೇರಿಕೊಂಡಿದ್ದರು
Suvarna News