ದಿ ಟ್ರಯಲ್' ವೆಬ್ ಸೀರೀಸ್‌ನ ಕಾಜೋಲ್‌ ಕಿಸ್ಸಿಂಗ್ ದೃಶ್ಯ: ನಿರಾಶೆಗೊಂಡ ಫ್ಯಾನ್ಸ್

Published : Jul 22, 2023, 10:51 AM IST

ಪ್ರಸ್ತುತ ಬಾಲಿವುಡ್‌ ನಟಿ ಕಾಜೋಲ್‌ (Kajol) ಸಖತ್‌ ಸುದ್ದಿಯಲ್ಲಿದ್ದಾರೆ. ಇದ್ಕಕೆ ಕಾರಣ ಅವರ ವೆಬ್‌ಸರಣಿ ದಿ ಟ್ರಯಲ್‌‌  (The Trail). ಇದರಲ್ಲಿನ ಕಾಜೋಲ್‌ ಅವರ ಲಿಪ್‌ ಲಾಕ್‌ ದೃಶ್ಯಗಳನ್ನು ಹೆಡ್‌ಲೈನ್‌ ಪಡೆದುಕೊಂಡಿದೆ ಜೊತೆಗೆ ಇಂಟರ್‌ನೆಟ್‌ನಲ್ಲಿ ತೀವ್ರವಾಗಿ ಟೀಕೆಗೆ ಗುರಿಯಾಗಿದೆ. ಕಾಜೋಲ್‌ ಅವರ ಫ್ಯಾನ್ಸ್‌ಗೆ ನಟಿಯ ಈ ಹಾಟ್‌ ಸೀನ್‌ಗಳು ರುಚಿಸಿಲ್ಲ ಎಂಬುದು ಅವರು ಕಾಮೆಂಟ್‌ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಕಾಜೋಲ್‌ ಅವರ ದಿ ಟ್ರಯಲ್‌ನ ದೃಶ್ಯಗಳಿಗೆ ಅಭಿಮಾನಿಗಳು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ ನೋಡಿದ್ದಾರೆ

PREV
17
ದಿ ಟ್ರಯಲ್' ವೆಬ್ ಸೀರೀಸ್‌ನ ಕಾಜೋಲ್‌  ಕಿಸ್ಸಿಂಗ್ ದೃಶ್ಯ: ನಿರಾಶೆಗೊಂಡ ಫ್ಯಾನ್ಸ್

ಕಾಜೋಲ್‌ ಅವರ ಚೊಚ್ಚಲ ಆನ್‌ಲೈನ್ ಸರಣಿ ದಿ ಟ್ರಯಲ್‌ನಲ್ಲಿ ನಟಿ  ವಕೀಲರಾಗಿ ನಟಿಸಿದ್ದಾರೆ. 48 ವರ್ಷದ ನಟಿ ಎರಡು ವಿಭಿನ್ನ ಸಂಚಿಕೆಗಳಲ್ಲಿ ತನ್ನ ಸಹ-ನಟರಾದ ಜಿಶು ಸೇನ್‌ಗುಪ್ತಾ, ಅವರ ಪತಿ ಮತ್ತು ಆಕೆಯ ಗೆಳೆಯ ಅಲಿ ಖಾನ್ ಅವರ ಜೊತೆ ಲಿಪ್‌ಲಾಕ್‌ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ
 

27
Kajol devgan

ಅದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ,  ಪ್ರತಿಕ್ರಿಯಿಸಿದ ಒಬ್ಬರು, 'ಮೇಡಂ, ನಿಮ್ಮಿಂದ ಏನು ತಪ್ಪಾಗಿದೆ? ಟ್ರಯಲ್‌ನಲ್ಲಿ ನೀವು ಕಿಸ್ ಸೀನ್ ಮಾಡಬೇಕಾಗಿ ಬಂದಿತ್ತು. ನಿಮ್ಮ ಮತ್ತು ಅಜಯ್ ಸರ್ ನಡುವೆ ಏನಾದರೂ ತಪ್ಪಾಗಿದೆಯೇ? ಎಂದು ಬರೆದಿದ್ದಾರೆ.

37

'ಕ್ಷಮಿಸಿ, @itsKajolD ಮೇಡಮ್‌ನಿಂದ ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಅವರು ಯಾವಾಗಲೂ ಸಾಂಪ್ರದಾಯಿಕ ಇಂಡಿಯನ್ ಗರ್ಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ' ಎಂದು ಮತ್ತೊಬ್ಬರು  ಬರೆದಿದ್ದಾರೆ. 
 

47

ದ ಟ್ರಯಲ್ ಅಮೆರಿಕನ್ ಟೆಲಿವಿಷನ್ ಕಾರ್ಯಕ್ರಮವಾದ ದಿ ಗುಡ್ ವೈಫ್ ನ ರಿಮೇಕ್ ಆಗಿದೆ. ಶೀಬಾ ಚಡ್ಡಾ, ಕುಬ್ರ ಸೇಟ್, ಅಮೀರ್ ಅಲಿ, ಮತ್ತು ಗೌರವ್ ಪಾಂಡೆ ಎಲ್ಲರೂ ಕಾರ್ಯಕ್ರಮದಲ್ಲಿ ಮಹತ್ವದ ಭಾಗಗಳನ್ನು ಹೊಂದಿದ್ದಾರೆ.

57

ದಿ ಟ್ರಯಲ್ ಅನ್ನು ಕಾಜೋಲ್ ಅವರ ನಟ-ಪತಿ ಅಜಯ್ ದೇವಗನ್ ಸಹ-ನಿರ್ಮಾಣ ಮಾಡಿದ್ದಾರೆ. ಇದರ ಪಾತ್ರಕ್ಕಾಗಿ ಕಾಜೋಲ್ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದ್ದಾರೆ.
 

67

ಕುತೂಹಲಕಾರಿಯಾಗಿ, ವೆಬ್ ಸರಣಿಗಾಗಿ ಕಾಜೋಲ್ ತನ್ನ 29 ವರ್ಷದ 'ನೋ ಕಿಸ್ಸಿಂಗ್' ನೀತಿಯನ್ನು ಮುರಿದರು. ವರದಿಗಳ ಪ್ರಕಾರ ಕಾಜೋಲ್ ಈ ಮೊದಲು ತನ್ನ ವೃತ್ತಿ ಜೀವನದಲ್ಲಿ ಎರಡು ಆನ್-ಸ್ಕ್ರೀನ್ ಚುಂಬನದ ದೃಶ್ಯಗಳನ್ನು ಮಾಡಿದ್ದಾರೆ.

77

ಮೊದಲನೆಯದು ಕಾಜೋಲ್‌  ಅವರ ಚೊಚ್ಚಲ ಚಿತ್ರವಾಗಿತ್ತು. 1994ರಲ್ಲಿ ಬಿಡುಗಡೆಯಾದ ಯೇ ದಿಲ್ಲಗಿ ಮತ್ತು ಎರಡನೆಯದು ಬೇಖುದಿ ಚಿತ್ರ.

Read more Photos on
click me!

Recommended Stories