ತಮನ್ನಾರ ಜೊತೆ ಸಂಬಂಧ: ವಿಜಯ್‌ ವರ್ಮಾಗೆ ಹೆಚ್ಚಾಗಿದೆ ಮದುವೆ ಒತ್ತಡ!

First Published | Jul 21, 2023, 5:21 PM IST

ಬಾಲಿವುಡ್‌ನ ಜನಪ್ರಿಯ ನಟ ವಿಜಯ್ ವರ್ಮಾ (Vijay Varma ) ಅವರ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನದಿಂದ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ತಮನ್ನಾ ಭಾಟಿಯಾ (Tamannaah Bhatia) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ವಿಜಯ್. ಅದಕ್ಕಾಗಿಯೇ ಅವರು ಒಂದಲ್ಲ ಒಂದು ಕಾರಣಕ್ಕಾಗಿ ಚರ್ಚೆಯಲ್ಲಿದ್ದಾರೆ. ವಿಜಯ್ ವರ್ಮಾ ಇತ್ತೀಚೆಗಿನ ಸಂಭಾಷಣೆಯಲ್ಲಿ ತಮ್ಮ ಮೇಲಿ ಮದುವೆಯ ಒತ್ತಡದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಅವರನ್ನು ಮದುವೆಯಾಗುವಂತೆ ಅವರ ಕುಟುಂಬ ಸದಸ್ಯರು ಒತ್ತಡ ಹೇರುತ್ತಾರೆಯೇ ಎಂದು ಕೇಳಲಾಗಿತ್ತು.. ಈ ಪ್ರಶ್ನೆಗೆ ವಿಜಯ್ ಹೀಗೊಂದು ಉತ್ತರ ನೀಡಿದ್ದು, ಇದನ್ನು ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

'ನಾನು ಮಾರ್ವಾಡಿ. ನಮ್ಮ ಸಮುದಾಯದಲ್ಲಿ, ಗಂಡು ಮಕ್ಕಳ ಮದುವೆಯ ವಯಸ್ಸು 16 ವರ್ಷ. ಹಾಗಾಗಿ ನನ್ನೊಂದಿಗೆ ಎಲ್ಲವೂ ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ನಾನು ಮದುವೆಯ ವಯಸ್ಸನ್ನು ಮೀರಿತ್ತು. ಅದಲ್ಲದೆ, ನಾನು ಅಷ್ಟೊತ್ತಿಗಾಗಲೇ ನಟನಾದೆ' ಎಂದಿದ್ದಾರೆ ವಿಜಯ್‌. 

Tap to resize

'ನಾನು ಈ ಪ್ರಶ್ನೆಗಳ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ನನ್ನ ವೃತ್ತಿಜೀವನದ ಬಗ್ಗೆ ಮಾತ್ರ ಗಮನಹರಿಸಿದೆ, ಆದರೆ ಈಗಲೂ ನನ್ನ ತಾಯಿ ನನ್ನ ಮದುವೆಗೆ ಒತ್ತಾಯಿಸುತ್ತಾರೆ. ಅವರು ಇನ್ನೂ ಪ್ರತಿ ಫೋನ್ ಕರೆಯಲ್ಲಿ ಮದುವೆಯ ಬಗ್ಗೆ ಕೇಳುತ್ತಾರೆ, ಆದರೆ ನಾನು ಅದಕ್ಕೆ ಉತ್ತರ ಕೊಡದೇ ತಪ್ಪಿಸಿ ಕೊಳ್ಳುತ್ತೇನೆ. ನಾನು ನನ್ನ ಜೀವನದಲ್ಲಿನ್ನೂ ಬೆಳೆಯುತ್ತಿದ್ದೇನೆ, ಎಂದು ವಿಜಯ್‌ ವರ್ಮಾ ಹೇಳಿದ್ದಾರೆ.

ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಅವರ ಸಂಬಂಧದ ಬಗ್ಗೆ ವದಂತಿಗಳು ಈ ವರ್ಷದ ಆರಂಭದಲ್ಲಿ ಸುತ್ತಲು ಪ್ರಾರಂಭಿಸಿದ್ದವು. ಆ ವೇಳೆ ಗೋವಾದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಇಬ್ಬರೂ ಕಿಸ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. 
 

ಅಂದಿನಿಂದ, ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. 'ಲಸ್ಟ್ ಸ್ಟೋರಿ 2' ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ವಿಜಯ್ ಅವರು ತಮ್ಮ ಮುಂದಿನ ದಿನಗಳಲ್ಲಿ ಕಾಲ್‌ಕೂಟ ಕ್ರೈಮ್‌ ಡ್ರಾಮಾ ಸರಣಿಗೆ ಸಜ್ಜಾಗುತ್ತಿದ್ದಾರೆ. ತಮನ್ನಾ ಭಾಟಿಯಾ ದಕ್ಷಿಣದ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ತೆಲುಗು ಚಿತ್ರ ಭೋಲಾ ಶಂಕರ್ ಅನ್ನು ಹೊಂದಿದ್ದು ಅದು ಆಗಸ್ಟ್‌ನಲ್ಲಿ ಬಿಡುಗಡೆಯಾಗುತ್ತದೆ.

Latest Videos

click me!