Arya Movie Heroine Anu Mehta Now: ಆರ್ಯ ಸಿನಿಮಾ ಹೀರೋಯಿನ್‌ ಅನು ಮೆಹ್ತಾ ಈಗ ಹೀಗೆ ಆಗಿದ್ದಾರಾ? ಸತ್ಯಾಂಶ ಏನು?

Published : Aug 09, 2025, 06:01 PM ISTUpdated : Aug 09, 2025, 06:02 PM IST

‘ಆರ್ಯ’, ʼಅಜಯ್ʼ‌ ಸಿನಿಮಾ ಹೀರೋಯಿನ್‌ ಅನು ಮೆಹ್ತಾ ಅವರು ( Actress Anu Mehta ) ಎಂದು ಹೇಳಲಾದ ಫೋಟೋವೊಂದು ಈಗ ವೈರಲ್‌ ಆಗುತ್ತಿದೆ. ಹಾಗಾದರೆ ಆ ನಟಿ ಇವರೇಮಾ? ಸತ್ಯ ಏನು?

PREV
15

2004‌ರಲ್ಲಿ ʼಆರ್ಯʼ ಸಿನಿಮಾ ರಿಲೀಸ್‌ ಆಗಿ ಸೂಪರ್‌ ಡೂಪರ್‌ ಹಿಟ್‌ ಆಯ್ತು. ಈ ಸಿನಿಮಾದ ಹೀರೋಯಿನ್‌ ಅನು ಮೆಹ್ತಾ ಅವರು ( Actress Anu Mehta ) ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ವರ್ಷದ ಹಿಂದೆ ಈ ಸಿನಿಮಾ ರಿಲೀಸ್‌ ಆಗಿ ಇಪ್ಪತ್ತು ವರ್ಷ ಎಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲಿ ಅನು ಮೆಹ್ತಾ ಬಿಟ್ಟು ಬೇರೆ ಯಾರೂ ಕೂಡ ಹಾಜರಿ ಹಾಕಿರಲಿಲ್ಲ.

25

ಕನ್ನಡದಲ್ಲಿ ʼಹೊಂಗನಸುʼ ಸಿನಿಮಾದಲ್ಲಿ ಅನು ಮೆಹ್ತಾ ನಟಿಸಿದ್ದರು. ಆಮೇಲೆ ಅವರು ಮತ್ತೆ ಎಲ್ಲಿಯೂ ಕಾಣಿಸಲಿಲ್ಲ. ಸುಂದರವಾದ ಈ ನಟಿ ಕೇವಲ ಆರು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಹಾಗಾದರೆ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನೋದು ಪ್ರಶ್ನೆ ಆಗಿದೆ.

35

ಅನುರಾಧಾ ಮೆಹ್ತಾ ಎನ್ನುವವರ ಫೋಟೋವೊಂದು ವೈರಲ್‌ ಆಗ್ತಿದ್ದು, ಅದನ್ನು ನೋಡಿದವರು ಇವರೇ ಆರ್ಯ ಸಿನಿಮಾ ಹೀರೋಯಿನ್‌ ಎಂದು ಹೇಳುತ್ತಿದ್ದಾರೆ. ಅಂದು ಅಷ್ಟು ಚೆನ್ನಾಗಿದ್ದವರು ಇಂದು ಈ ರೀತಿ ಆಗಿದ್ದಾರೆ ಎಂದು ಅನೇಕರು ಆಶ್ಚರ್ಯಪಟ್ಟಿದ್ದಾರೆ.

45

ಹಾಗಾದರೆ ಸತ್ಯ ಏನು ಎನ್ನೋದನ್ನು ತಿಳಿದುಕೊಳ್ಳಬೇಕು. ಈಗ ವೈರಲ್‌ ಆಗ್ತಿರೋ ಫೋಟೋದಲ್ಲಿ ಇರೋರು ಭಾರತದ ಮೊದಲ ಮೆಟಾ ಹೆಲ್ತ್‌ ಟ್ರೇನರ್‌, ಸ್ಪೀಕರ್‌, ಲೇಖಕಿ, ಮೋಟಿವೇಟರ್‌, ಕೋಚ್‌ ಎನ್ನೋದನ್ನು ನೆನಪಿಡಬೇಕು.

55

ಈ ಅನುರಾಧಾ ಮೆಹ್ತಾ ಅವರಿಗೂ, ನಟಿ ಅನು ಮೆಹ್ತಾಗೂ ಯಾವುದೇ ಸಂಬಂಧ ಇಲ್ಲ, ಇವರಿಬ್ಬರು ಒಂದೇ ಅಲ್ಲ. ಆದರೆ ನಟಿ ಅನು ಮೆಹ್ತಾ ಅವರು ಭೂಗತರಾಗಿ ಬದುಕುತ್ತಿದ್ದಾರೆ, ಕ್ಯಾಮರಾದಿಂದ ತುಂಬ ದೂರ ಇದ್ದಾರೆ. ಈಗ ಅವರು ಎಲ್ಲಿದ್ದಾರೆ? ಹೇಗಿದ್ದಾರೆ ಎನ್ನೋದು ಚಿತ್ರರಂಗದಲ್ಲಿ ಇರುವವರಿಗೆ ಗೊತ್ತಿಲ್ಲ.

Read more Photos on
click me!

Recommended Stories