ವಾಸ್ತವವಾಗಿ, ಇಶಾ ಗುಪ್ತಾ ಬಾಲ್ಕನಿಯಲ್ಲಿ ನಿಂತು ಟಾಪ್ ಲೆಸ್ ಫೋಟೊಶೂಟ್ ಮಾಡಿದ್ದಾರೆ ಮತ್ತು ಇಂದು ಪ್ರೀತಿಸಿ ಮತ್ತು ನಾಳೆ ಪ್ರೀತಿಸಿ ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಆದರೆ ಜನರಿಗೆ ಈ ಸ್ಟೈಲ್ ಇಷ್ಟವಾಗಿಲ್ಲ.
ವೈರಲ್ ಆಗಿರುವ ಫೋಟೋಗಳಲ್ಲಿ, ಇಶಾ ಗುಪ್ತಾ ಬ್ಯಾಗಿ ಪ್ಯಾಂಟ್ ಧರಿಸಿದ್ದಾರೆ. ಆಕೆ ಟಾಪ್ ಲೆಸ್ ಆಗಿದ್ದು, ತನ್ನ ಕೂದಲನ್ನು ಕಟ್ಟದೆ ಹಾಗೆ ಬಿಟ್ಟಿದ್ದಾರೆ. ಇಶಾರ ಈ ಫೋಟೋ ನೋಡಿ ಜನರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರೂ ಅಸಭ್ಯವಾದ ಕಾಮೆಂಟ್ ಮಾಡಿ ಇಶಾರನ್ನು ಟ್ರೋಲ್ ಮಾಡುತ್ತಿದ್ದಾರೆ
'ನಿಮ್ಮಲ್ಲಿ ಬಟ್ಟೆ ಇಲ್ಲವೇ?' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬಟ್ಟೆಗಳನ್ನಾದರೂ ಧರಿಸಿ ಎಂದು ಸಲಹೆ ನೀಡಿದರು. ಏನು ಫೋಟೋಗಳು ಇದನ್ನು ಯಾರು ಕ್ಲಿಕ್ ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಕೇಳಿದ್ದಾರೆ.
'ಮೇಡಂ, ನೀವು ನೋಟ ನೋಡುತ್ತಿದ್ದೀರಾ ಅಥವಾ ನೋಟವನ್ನು ತೋರಿಸುತ್ತಿದ್ದೀರಾ? ಎಂದು ಒಬ್ಬರು ಕೇಳಿದರೆ, ಇನ್ನೊಬ್ಬ ಯೂಸರ್ ' ಟಾಪ್ ಎಲ್ಲಿದೆ? ಎಂದು ಬರೆದಿದ್ದಾರೆ. ಮತ್ತೊಬ್ಬರು 'ನಿಮಗೆ ನಾಚಿಕೆಯಾಗಬೇಕು' ಎಂದು ಹೇಳಿದ್ದಾರೆ. ಹೀಗೆ ಅನೇಕ ಜನರು ತರತರದ ಕಾಮೆಂಟ್ ಮಾಡಿದ್ದಾರೆ
ಇದೇನು ಮೊದಲ ಬಾರಿಗೆ ಅಲ್ಲ . ಈ ಮೊದಲು ಕೂಡ ಇಶಾ ಗುಪ್ತಾ ತನ್ನ ಟಾಪ್ಲೆಸ್ ಫೋಟೋಗಳನ್ನು ಹಲವು ಬಾರಿ ಹಂಚಿಕೊಂಡಿದ್ದಾರೆ ಮತ್ತು ಪ್ರತಿ ಬಾರಿ ಅವರು ಟ್ರೋಲ್‌ಗಳನ್ನು ಮತ್ತು ತೀವ್ರವಾದ ಕಾಮೆಂಟ್‌ಗಳನ್ನು ಎದುರಿಸಬೇಕಾಗುತ್ತದೆ.
ಇಶಾ ಗುಪ್ತಾಳನ್ನು ಹಾಲಿವುಡ್ ನಟಿ ಏಂಜಲೀನಾ ಜೋಲಿಯೊಂದಿಗೆ ಜನರು ಹೋಲಿಸುತ್ತಾರೆ. ಇದಷ್ಟೇ ಅಲ್ಲ, ಅನೇಕರು ಅವಳನ್ನು ಬಡವರ ಏಂಜಲೀನಾ ಜೋಲಿ ಎಂದು ಕರೆದು ಗೇಲಿ ಮಾಡುತ್ತಾರೆ. ಇದರ ಬಗ್ಗೆ ಇಶಾ ಗುಪ್ತಾ ಹಿಂದೊಮ್ಮೆ ಪ್ರತಿಕ್ರಿಯೆ ನೀಡಿದ್ದರು.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಈ ರೀತಿಯಲ್ಲಿ ಏನನ್ನೂ ನೋಡಿಲ್ಲ ಮತ್ತು ನನಗೂ ಹಾಗೆ ಅನಿಸುವುದಿಲ್ಲ. ನಾನು ಯಾವಾಗಲೂ ನನ್ನ ತಾಯಿಯಂತೆ ಕಾಣುತ್ತೇನೆ' ಎಂದು ಇಶಾ ಗುಪ್ತಾ ಏಂಜಲೀನಾ ಜೋಲಿ ಅವರಿಗೆ ಜನರು ಹೋಲಿಸುವುದಕ್ಕೆ ಹೇಳಿದ್ದರು.
'ನಾನು ಬಾಲಿವುಡ್‌ಗೆ ಬಂದಾಗ, ಆ ಸಮಯದಲ್ಲಿ ನಾನು ಇದುವರೆಗೆ ಅವರ ಜೊತೆ ಕೆಲಸ ಮಾಡದ ಕೆಲವು ಬಾಲಿವುಡ್ ತಾರೆಯರು ನನ್ನ ಮೈಬಣ್ಣವನ್ನು ಗೇಲಿ ಮಾಡಿದರು' ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಈಶಾ ರಾ ರುಸ್ತೋಮ್, ಬಾದಶಾಹೋ, ಕಮಾಂಡೋ 2 ಹೊರತುಪಡಿಸಿ ಕೆಲವು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
2007 ರಲ್ಲಿ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದ ಇಶಾ ಗುಪ್ತಾ, ಭಟ್ ಕ್ಯಾಂಪ್‌ನ ಫಿಲ್ಮಂ 2 ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇಶಾ ಅವರನ್ನು ಭಾರತದ ಏಂಜಲೀನಾ ಜೋಲೀ ಎಂದೂ ಕರೆಯುತ್ತಾರೆ. ಮಹೇಶ್ ಭಟ್ ಈ ಬಿರುದನ್ನು ನಟಿಗೆ ನೀಡಿದ್ದಾರೆ.